More

    ಪ್ರಯತ್ನ, ದೈವಾನುಗ್ರಹ ಇದ್ದಲ್ಲಿ ಜೀವನದ ಉನ್ನತಿ

    ಶೃಂಗೇರಿ: ಮಾನವನು ಒಂದು ಕೆಲಸ ಮಾಡಬೇಕಾದರೆ ಪ್ರಯತ್ನ ಎಂಬುದು ಮುಖ್ಯ. ಅದರ ಜತೆ ದೈವಾನುಗ್ರಹ ಕೂಡಾ ಅವಶ್ಯಕ. ಆಗ ಮಾತ್ರ ಆತನ ಜೀವನದ ಉನ್ನತಿ ಸಾಧ್ಯ ಎಂದು ಶೃಂಗೇರಿ ಶ್ರೀ ಶಾರದಾಪೀಠದ ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ತಿಳಿಸಿದರು.
    ಅವರು ಸಚ್ಚಿದಾನಂದಪುರ ಜೇಸಿಸ್ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಅನುಗ್ರಹ ಭಾಷಣ ಮಾಡಿದರು.
    ಮನುಷ್ಯನ ಜೀವನ ವ್ಯವಸಾಯ ಮಾಡುವ ಭೂಮಿಗೆ ಹೋಲಿಸಬಹುದು. ಭೂಮಿಗೆ ಲವತ್ತಾದ ಬೆಳೆಗಳನ್ನು ಬೆಳೆಸಿದ್ದರೆ ಉತ್ತಮ ಲ ನೀಡುತ್ತದೆ. ಹಾಗೆಯೆ ಮನುಷ್ಯ ಬದುಕಿನಲ್ಲಿ ಉತ್ತಮ ಲ ಮಾಡಿದ್ದರೆ ಆತನು ಶ್ರೇಯಸ್ಸು ಹೊಂದಲು ಸಾಧ್ಯ. ಜ್ಞಾನವನ್ನು ನಾವು ಹಂಚಿಕೊಂಡಾಗ ಮಾತ್ರ ನಮ್ಮಲ್ಲಿ ಪ್ರಬುದ್ಧತೆ ಬರುತ್ತದೆ ಎಂದರು.
    ಯಾರು ಏನೂ ಹೇಳಿಕೊಟ್ಟಿದ್ದಾರೋ ಅದರ ಕುರಿತು ಚಿಂತನೆ ಮಾಡಬೇಕು. ವಿಷಯಗಳನ್ನು ಗ್ರಹಣ ಮಾಡಿಕೊಂಡು ಅದರಲ್ಲಿ ನಮಗೆ ಎಷ್ಟು ಬೇಕು, ಎಷ್ಟು ಬಿಡಬೇಕು ಎಂಬುದನ್ನು ತಿಳಿದುಕೊಳ್ಳಬೇಕು. ಜ್ಞಾನ ಎಂಬುದು ದೊಡ್ಡ ಸಮುದ್ರ. ಅದನ್ನು ವಿದ್ಯಾರ್ಥಿಗಳು ಸಣ್ಣ ವಯಸ್ಸಿನಲ್ಲಿ ಅರಿತುಕೊಳ್ಳುವ ಅವಶ್ಯಕತೆ ಇದೆ ಎಂದರು.
    ಗುರುವಂದನಾ ಕಾರ್ಯಕ್ರಮದಲ್ಲಿ ಶ್ರೀಮಠದ ಆಡಳಿತಾಧಿಕಾರಿ ಪಿ.ಎ.ಮುರಳಿ, ಶಾಲಾ ಆಡಳಿತ ಮಂಡಳಿ ಮುಖ್ಯಸ್ಥ ಗಜಾನನ ಎಂ.ಭಟ್, ಪದಾಧಿಕಾರಿಗಳಾದ ಡಾ.ಲಕ್ಷ್ಮೀನಾರಾಯಣ್, ಜೆಸಿಐ ತರಬೇತುದಾರ ಎನ್.ಸಿ.ಪಾಂಡುರಂಗ, ದಾನಿ ನೀಲಕಂಠನ್, ಜಿಪಂ ಮಾಜಿ ಉಪಾಧ್ಯಕ್ಷೆ ಪುಪ್ಪಾ ಲಕ್ಷ್ಮೀನಾರಾಯಣ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts