More

    ನೊಂದ ಜನರ ಕಣ್ಣೀರು ಒರೆಸಿದ ಶರಣ

    ಯಡ್ರಾಮಿ: ಸಿದ್ಧರಾಮೇಶ್ವರರ ನಡೆ, ನುಡಿ ಹಾಗೂ ಆದರ್ಶಗಳು ಪ್ರತಿಯೊಬ್ಬರಿಗೂ ತಲುಪುವಂತಾಗಲು ಸರ್ಕಾರದಿಂದಲೇ ಜಯಂತಿ ಆಚರಿಸಬೇಕು ಎಂದು ಭೋವಿ ಪೀಠದ ಜಗದ್ಗುರುಗಳು ನಿರಂತರ ಹೋರಾಟ ನಡೆಸಿದ್ದರು. ಅದರ ಫಲವಾಗಿ ಪ್ರತಿ ವರ್ಷ ಸರ್ಕಾರದಿಂದ ಶ್ರೀ ಸಿದ್ಧರಾಮೇಶ್ವರ ಜಯಂತಿ ಆಚರಿಸಲಾಗುತ್ತಿದೆ ಎಂದು ಚಿಗರಹಳ್ಳಿ ಮಠದ ಶ್ರೀ ಸಿದ್ಧಬಸವ ಕಬಿರ ಸ್ವಾಮೀಜಿ ಹೇಳಿದರು.

    ತಹಸಿಲ್ ಕಚೇರಿಯಲ್ಲಿ ತಾಲೂಕು ಆಡಳಿತ ಹಾಗೂ ಭೋವಿ ಸಮಾಜದಿಂದ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಸಿದ್ಧರಾಮೇಶ್ವರ ಜಯಂತಿಯಲ್ಲಿ ಸಾನ್ನಿದ್ಯ ವಹಿಸಿ ಮಾತನಾಡಿ, ಸೊನ್ನಲಾಪುರದ ಶ್ರೀ ಸಿದ್ಧರಾಮೇಶ್ವರರು ಆಂಧ್ರಪ್ರದೇಶದ ಶ್ರೀಶೈಲ ಹಾಗೂ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಹೆಚ್ಚು ಪ್ರಭಾವಿತರಾಗಿದ್ದರು. ಅವರನ್ನು ಕರ್ನಾಟಕದ ಮನೆ-ಮನೆಗಳಲ್ಲೂ ನೆನೆಯುವಂತೆ ಮಾಡುವಲ್ಲಿ ಭೋವಿ ಗುರುಪೀಠದ ಜಗದ್ಗುರುಗಳ ಶ್ರಮ ಸಾಕಷ್ಟಿದೆ. ಸಿದ್ಧರಾಮೇಶ್ವರರು ಶೌರ್ಯ, ದಿಟ್ಟತನದಿಂದ ನೊಂದ ಜನತೆಯ ಕಣ್ಣೀರು ಒರೆಸಿದವರು. ಅಲ್ಲದೆ ಬಸವಣ್ಣನವರ ಅನುಭವ ಮಂಟಪದ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ ಎಂದು ಬಣ್ಣಿಸಿದರು.

    ಯಡ್ರಾಮಿ ವಿರಕ್ತಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ತಹಸೀಲ್ದಾರ್ ಶಶಿಕಲಾ ಪಾದಗಟ್ಟಿ, ಪಪಂ ಮುಖ್ಯಾಧಿಕಾರಿ ಸಂತೋಷ ರೆಡ್ಡಿ, ಪಿಎಸ್‌ಐ ಸುಖಾನಂದ ಸಿಂಘೆ, ಪ್ರಮುಖರಾದ ವೀರೇಶ ಕುಂಬಾರ, ದೇವೇಂದ್ರಪ್ಪ, ಶರಣಪ್ಪ ಉಕ್ಕನಾಳ, ಆನಂದ ಕುಸ್ತಿ, ವಿಶ್ವನಾಥ ಪಾಟೀಲ್, ಲಕ್ಷ್ಮಣ ಮಂದೇವಾಲ್, ಗುಂಡಪ್ಪ ಮಂದೇವಾಲ್, ಬಸವರಾಜ ಕಂದಿಲಮನಿ, ಭೀಮಯ್ಯ ಕಂದಿಲಮನಿ, ರವಿಚಂದ್ರ ಶಿವಪುರ, ಲಕ್ಷ್ಮಣ ಕಲ್ಲೂರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts