More

    ಶ್ರೀ ಶರಣಬಸವೇಶ್ವರ ಪುರಾಣ ಮಂಗಲ

    ಯಲಬುರ್ಗಾ; ತಾಲೂಕಿನ ಹಿರೇವಂಕಲಕುಂಟಾ ಗ್ರಾಮದ ಶ್ರೀ ಶರಣಬಸವೇಶ್ವರ 19ನೇ ವರ್ಷದ ಪುರಾಣ ಮಹಾಮಂಗಲ, ಕುಂಭೋತ್ಸವ ಹಾಗೂ 17 ಜೋಡಿ ಸಾಮೂಹಿಕ ವಿವಾಹಗಳು ಶುಕ್ರವಾರ ನಡೆದವು.

    ಇದನ್ನೂ ಓದಿ: 10ರಿಂದ 31ರವರೆಗೆ ಬಸವ ಪುರಾಣ

    ಗ್ರಾಮದ ಗವಿಸಿದ್ದೇಶ್ವರ ಮಠದಿಂದ ಪ್ರಮುಖ ಬೀದಿಗಳ ಮೂಲಕ ಶ್ರೀ ಈಶ್ವರ ದೇವಸ್ಥಾನದವರೆಗೆ ಮಹಿಳೆಯರಿಂದ ಕುಂಭ, ಕಳಸ, ವಿವಿಧ ವಾದ್ಯಮೇಳದೊಂದಿಗೆ ಶರಣಬಸವೇಶ್ವರ ಭಾವಚಿತ್ರ ಮೆರವಣಿಗೆ ನಡೆಯಿತು. ಶಿವದೀಕ್ಷೆ, ಅಯ್ಯಚಾರ ನೆರವೇರಿತು.

    ಕುಷ್ಟಗಿಯ ಮದ್ದಾನಿ ಹಿರೇಮಠದ ಶ್ರೀ ಕರಿಬಸವ ಸ್ವಾಮೀಜಿ ಮಾತನಾಡಿ, ಸಾಮೂಹಿಕ ವಿವಾಹಗಳು ನಡೆಸುವುದರಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕಬಹುದು. ಸಾಲ ಮಾಡಿ ಆಡಂಬರದ ವಿವಾಹ ಮಾಡಿಕೊಳ್ಳುವ ಬದಲಿಗೆ ಸಾಮೂಹಿಕ ಮದುವೆ ಲೇಸು.

    ಅಲ್ಲದೇ ವರದಕ್ಷಣೆ ಪಿಡುಗು ತೊಲಗಿಸಲು ಸಹಾಯಕವಾಗುತ್ತದೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ನೂತನ ದಂಪತಿ ಒಬ್ಬರಿಗೊಬ್ಬರು ಪರಸ್ಪರ ಅರ್ಥ ಮಾಡಿಕೊಂಡು ಸುಂದರ ಬದುಕು ನಡೆಸಬೇಕು ಎಂದರು.

    ಇಟಗಿಯ ಶ್ರೀ ಶಿವಶಾಂತವೀರ ಸ್ವಾಮೀಜಿ, ಅಂಕಲಿಮಠದ ಶ್ರೀ ವೀರಭದ್ರೇಶ್ವರ ಸ್ವಾಮೀಜಿ, ಸುಳೆಕಲ್ ಬ್ರಹ್ನಮಠದ ಶ್ರೀ ಪದ್ಮಾಕ್ಷರಯ್ಯ ತಾತನವರು, ಗಣ್ಯರಾದ ವಿರೂಪಯ್ಯ ಹಿರೇಮಠ, ಮಲ್ಲಿಕಾರ್ಜುನ ಹರ್ಲಾಪುರ, ಬಸವಂತಪ್ಪ ಬಂಗಾರಿ, ಬಸಪ್ಪ ತಿಮ್ಮನಗೌಡ್ರ, ಬಾಳಪ್ಪ ಸಜ್ಜನ, ಹನುಮೇಶ ಚಿಣಗಿ, ವೆಂಕಟೇಶ ಈಳಿಗೇರ್, ಸಂಗಮೇಶ ಬಂಗಾರಿ, ನಿಂಗಪ್ಪ ತೊಣಸಿಹಾಳ, ಉಮೇಶಗೌಡ್ರ, ವೀರನಗೌಡ ಶಿರಗುಂಪಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts