More

    10ರಿಂದ 31ರವರೆಗೆ ಬಸವ ಪುರಾಣ

    ಮುದ್ದೇಬಿಹಾಳ: ಪಟ್ಟಣದ ವಿಬಿಸಿ ಪ್ರೌಢಶಾಲೆಯ ಮೈದಾನದಲ್ಲಿ ಡಿ. 10ರಿಂದ 31ರವರೆಗೆ ನಿತ್ಯ ಸಂಜೆ 6.30ರಿಂದ ರಾತ್ರಿ 8ಗಂಟೆಯವರೆಗೆ ನಡೆಯಲಿರುವ ಭೀಮಕವಿ ಕೃತ ಬಸವ ಪುರಾಣ ಕೇವಲ ಪ್ರವಚನವಾಗಿರದೆ ಅದೊಂದು ಸಾಮಾಜಿಕವಾಗಿ ಎಲ್ಲರನ್ನೂ ಒಗ್ಗೂಡಿಸುವ ಕಾರ್ಯವಾಗಿರಲಿದೆ. ಸಮಿತಿಗಳನ್ನು ನೆಪಮಾತ್ರಕ್ಕೆ ರಚಿಸಲಾಗಿದ್ದು, ಯಶಸ್ಸಿಗೆ ಎಲ್ಲರೂ ಸ್ವ ಇಚ್ಚೆಯಿಂದ ಕೈಜೋಡಿಸಬೇಕು ಎಂದು ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಕಸಾಪ ನಿಕಟಪೂರ್ವ ತಾಲೂಕಾಧ್ಯಕ್ಷ ಎಂ.ಬಿ. ನಾವದಗಿ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ ಮನವಿ ಮಾಡಿದರು.

    ಇಲ್ಲಿನ ವಿಜಯಮಹಾಂತೇಶ ದಾಸೋಹ ಭವನದಲ್ಲಿ ಗುರುವಾರ ಸಂಜೆ ನಡೆದ ಪ್ರವಚನ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪ್ರವಚನ ನಡೆಯಲಿರುವ ವಿಬಿಸಿ ಪ್ರೌಢಶಾಲೆಯ ಮೈದಾನವನ್ನು ಸ್ವಚ್ಛಗೊಳಿಸುವ ಕಾರ್ಯ ಶುಕ್ರವಾರ ಬೆಳಗ್ಗೆ 7ಗಂಟೆಯಿಂದ ಎರಡು ದಿನಗಳವರೆಗೆ ನಡೆಯಲಿದೆ. ಈ ಸ್ವಚ್ಛತಾ ಕಾರ್ಯಕ್ಕೆ ಪುರಸಭೆಯವರೂ ಸಹಕಾರ ನೀಡಲಿದ್ದು ಅವರಿವರೆನ್ನದೆ ಎಲ್ಲರೂ ಸ್ವಇಚ್ಚೆಯಿಂದ ಇದು ನಮ್ಮ ಮನೆಯ ಕಾರ್ಯಕ್ರಮ ಎಂದು ಭಾವಿಸಿ ಶ್ರಮದಾನ ಮಾಡಬೇಕು ಎಂದರು.

    ಪುರಸಭೆ ಮಾಜಿ ಸದಸ್ಯ ಕಾಮರಾಜ ಬಿರಾದಾರ ಮಾತನಾಡಿ, ಪ್ರವಚನ ಯಶಸ್ಸಿಗೆ ರಚಿಸಲಾಗಿರುವ ಹಣಕಾಸು, ಸ್ವಾಮಿಗಳ ಉಸ್ತುವಾರಿ, ಅತಿಥಿಗಳನ್ನು ಕರೆತರುವುದು, 13ರಿಂದ 27ರವರೆಗೆ ನಿತ್ಯ ಬೆಳಗ್ಗೆ 5.30ರಿಂದ 7.30ರವರೆಗ ನಡೆಯುವ ಬಸವ ಬೆಳಗು ವಾರ್ಡ್ ಸಂಚಾರ, ವೇದಿಕೆ ನಿರ್ಮಾಣ, ಸನ್ಮಾನ, ಪ್ರವಚನದ ಪ್ರಚಾರ, ಬಸವ ಕಲ್ಯಾಣ ಮಹೋತ್ಸವ, ಸಾಮೂಹಿಕ ವಿವಾಹ, ಕಾರ್ಯಕ್ರಮದ ಕಾರ್ಡ್ ವಿತರಣೆ, ಪ್ರಸಾದ ವ್ಯವಸ್ಥೆ, ನಿರೂಪಣೆ ಮುಂತಾದ ಸಮಿತಿಗಳಿಗೆ ಆಯ್ಕೆ ಮಾಡಿದವರ ಹೆಸರುಗಳನ್ನು ಪ್ರಸ್ತಾಪಿಸಿ ಈ ಸಮಿತಿಗಳಿಗೆ ಇನ್ನೂ ಕೆಲವರನ್ನು ನೇಮಿಸುವುದಾಗಿ ತಿಳಿಸಿದರು.

    ವಚನ ಸಾಹಿತಿ ರುದ್ರೇಶ ಕಿತ್ತೂರ ಮಾತನಾಡಿ, ಯಾವ ದಿನದಂದು ಯಾವ ವಾರ್ಡ್‌ನಲ್ಲಿ ಬಸವ ಬೆಳಗು ನಡೆಯಲಿದೆ ಎನ್ನುವ ರೂಪುರೇಷೆ ವಿವರಿಸಿದರು. ಬಸಯ್ಯ ನಂದಿಕೇಶ್ವರಮಠ, ನೇತಾಜಿ ನಲವಡೆ, ಎಸ್.ಎಸ್. ಹಿರೇಮಠ, ಸಂಗಣ್ಣ ಕಂಚ್ಯಾಣಿ, ವೈ.ಎಚ್. ವಿಜಯಕರ, ಪರಶುರಾಮ ನಾಲತವಾಡ, ಡಿ.ಬಿ. ವಡವಡಗಿ, ಸಂಗಮ್ಮ ದೇವರಳ್ಳಿ ಮಾತನಾಡಿದರು.

    ಪ್ರಮುಖರಾದ ಎಚ್.ಟಿ. ಬಿರಾದಾರ, ಸಿ.ಬಿ. ಇಟಗಿ, ಸಂಗೀತಾ ನಾಡಗೌಡ, ಸರಸ್ವತಿ ಪೀರಾಪುರ, ರೇಣುಕಾ ಹಳ್ಳೂರ, ಭಾರತಿ ಪಾಟೀಲ, ಸಂಗಮೇಶ ನಾವದಗಿ, ರಾಜು ಕರಡ್ಡಿ, ಮಹಾಂತೇಶ ಬೂದಿಹಾಳಮಠ, ಗುರುಲಿಂಗಪ್ಪಗೌಡ ಪಾಟೀಲ, ಅಮರೇಶ ಗೂಳಿ, ಶಿವಕುಮಾರ ಬಿರಾದಾರ, ಸಂತೋಷ ನಾಯ್ಕೋಡಿ, ಬಿ.ಎಸ್. ಪಾಟೀಲ ಸರೂರ, ಡಾ. ವೀರೇಶ ಪಾಟೀಲ, ಗೋಪಿ ಮಡಿವಾಳಯ್ಯ, ಯಲ್ಲಪ್ಪ ನಾಯ್ಕಮಕ್ಕಳ, ರವಿ ಕಮತ, ಸುಧೀರ ನಾವದಗಿ, ಸದು ಮಠ, ಆರ್.ಐ. ಹಿರೇಮಠ, ಲಾಳೇಮಶ್ಯಾಕ ನಾಯ್ಕೋಡಿ, ಹುಸೇನ್ ಮುಲ್ಲಾ, ಎಂ.ಎಸ್. ಬಿರಾದಾರ, ಸಂತೋಷ ನಾವದಗಿ, ವೆಂಕನಗೌಡ ಪಾಟೀಲ, ಸಿ.ಎಸ್. ಬಿರಾದಾರ, ಎ. ಗಣೇಶ, ರಾಜು ರಾಯಗೊಂಡ, ರಾಜು ಕರಡ್ಡಿ, ಮಾರುತಿ ನಲವಡೆ, ಅಶೋಕ ರೇವಡಿ, ರವಿ ವಡವಡಗಿ, ಮುತ್ತು ಕಡಿ, ಹರೀಶ ಬೇವೂರ, ಎಸ್.ಎಸ್. ಹುನಗುಂದ, ಬಿ.ವಿ. ಕೋರಿ, ಎಸ್.ಎ. ಬೇವಿನಗಿಡದ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts