More

    ಬಾರಕೂರು ದೇವಳ ಶಿಲ್ಪ ಶೈಲಿ ಆಕರ್ಷಣೀಯ, ಆನೆಗುಂದಿ ಶ್ರೀ ಮೆಚ್ಚುಗೆ

    ಬ್ರಹ್ಮಾವರ: ಕರಾವಳಿ ಕರ್ನಾಟಕದಲ್ಲಿ ಬಾರಕೂರು ಶ್ರೀ ಕಾಳಿಕಾಂಬಾ ದೇವಸ್ಥಾನ ಕರ್ನಾಟಕ ಶಿಲ್ಪ ಶೈಲಿಯನ್ನು ಹೊಂದಿದ ಏಕೈಕ ದೇವಸ್ಥಾನವಾಗಿ ಆಕರ್ಷಕವಾಗಿ ರೂಪುಗೊಳ್ಳುತ್ತಿದೆ ಎಂದು ಶ್ರೀಮದ್ ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.

    ಬಾರಕೂರು ಶ್ರೀ ಕಾಳಿಕಾಂಬಾ ದೇವಸ್ಥಾನದ ಗರ್ಭಗುಡಿ ಮತ್ತು ತೀರ್ಥ ಮಂಟಪ ನವೀಕರಣ ಕಾರ್ಯಕ್ಕೆ ನಿರ್ಮಾಣಗೊಂಡ ಶಿಲೆ ಮತ್ತು ಕಾಷ್ಠ ಶಿಲ್ಪ ಕಾರ್ಯವನ್ನು ಸೋಮವಾರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ದೇವಸ್ಥಾನಗಳ ನಿರ್ಮಾಣಗಳು ಗುತ್ತಿಗೆದಾರರಿಂದ ಮಾಡುವ ಕಾಮಗಾರಿಯಲ್ಲ, ತಲೆತಲಾಂತರಗಳ ಕಾಲ ಭಕ್ತರನ್ನು ಸೆಳೆಯುವ ಭಕ್ತಿ ಕೇಂದ್ರಗಳು ಎಂದರು.

    ದೇವಸ್ಥಾನ ಆಡಳಿತ ಮೊಕ್ತೇಸರ ವಿ.ಶ್ರೀಧರ ಆಚಾರ್ಯ ವಡೇರಹೊಬಳಿ, 2ನೇ ಮೊಕ್ತೇಸರ ಪ್ರವೀಣ ಆಚಾರ್ಯ ರಂಗನಕೆರೆ, 3ನೇ ಮೊಕ್ತೇಸರ ರವಿ ಆಚಾರ್ಯ ಕೆಳಾರ್ಕಳಬೆಟ್ಟು, ತಂತ್ರಿ ಲಕ್ಷ್ಮೀಕಾಂತ ಶರ್ಮ ಮೊದಲಾದವರು ಉಪಸ್ಥಿತರಿದ್ದರು. ನವೀಕರಣ ಸಮಿತಿ ಕಾರ್ಯದರ್ಶಿ ಚೇಂಪಿ ಜನಾರ್ದನ ಆಚಾರ್ಯ ಸ್ವಾಗತಿಸಿದರು. ಆಡಳಿತ ಮಂಡಳಿಯ ಗ್ರಾಮ ಮೊಕ್ತೇಸರ ಪ್ರತಿನಿಧಿ ಕೋಟ ಚಂದ್ರ ಆಚಾರ್ಯ ವಂದಿಸಿದರು.

    ಫೆ.11ರಿಂದ ಬ್ರಹ್ಮಕಲಶ: ಫೆ.11ರಿಂದ 19ರ ತನಕ ಜರುಗುವ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆಯನ್ನು ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಬಿಡುಗಡೆ ಮಾಡಿದರು. ಅಮಾಸೆಬೈಲು ನರಸಿಂಹ ಆಚಾರ್ಯರಿಂದ ದೇವಸ್ಥಾನದ ತಾಮ್ರದ ಹೊದಿಕೆ ಶಿಲ್ಪ ಕಾರ್ಯಕ್ಕೆ ಮುಹೂರ್ತ ನಡೆಸಲಾಯಿತು. ರಂಗನಕೆರೆ ರುದ್ರ ಆಚಾರ್ಯ ಕುಟುಂಬಿಕರು ಜೀರ್ಣೋದ್ಧಾರಕ್ಕೆ ಆರ್ಥಿಕ ನೆರವು ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts