More

    ಶ್ರೀ ಬೂದಿ ಬಸವೇಶ್ವರ ಸ್ವಾಮಿ ಕೆಂಡೋತ್ಸವ ಸಂಪನ್ನ

    ತರೀಕೆರೆ: ತಾಲೂಕಿನ ಬೇಲೇನಹಳ್ಳಿ ಗ್ರಾಮದ ಶ್ರೀ ಬೂದಿ ಬಸವೇಶ್ವರ ಸ್ವಾಮಿ ಕೆಂಡೋತ್ಸವ ಶ್ರದ್ಧಾ ಭಕ್ತಿಯಿಂದ ನಡೆಯಿತು.
    ಬೆಳಗ್ಗೆ ಕೆಂಡಾರ್ಚನೆ ಹಿನ್ನೆಲೆಯಲ್ಲಿ ಶ್ರೀ ಬೂದಿ ಬಸವೇಶ್ವರ ಸ್ವಾಮಿಗೆ ಪುಣ್ಯಾಹ, ರುದ್ರಾಭಿಷೇಕ, ಸಹಸ್ರ ನಾಮಾರ್ಚನೆ ನೆರವೇರಿಸಲಾಯಿತು. ಗಂಗಾ ಪೂಜೆ, ಗಣಪತಿ ಆವಾಹನೆ ಬಳಿಕ ಗಂಟೆ 7 ರಿಂದ 8.30ರವರೆಗೆ ಸ್ವಾಮಿಯ ನಡೆ ಮುಡಿಯೊಂದಿಗೆ ಕೆಂಡದ ಗುಂಡಿಗೆ ಪೂಜೆ, ನಾಲ್ಕು ದಿಕ್ಕುಗಳಿಗೂ ಬಲಿ ಪೂಜೆ ಸಲ್ಲಿಸಲಾಯಿತು.
    ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ದೇವರು ಅಪ್ಪಣೆ ನೀಡಿದ ಬಳಿಕ ಕೊಂಡ ಹಾಯ್ದು ಭಕ್ತಿ ಸಮರ್ಪಿಸಿದರು. ಮಹಾ ಮಂಗಳಾರತಿ ನಂತರ ದೇವರಿಗೆ ನೈವೆ ದ್ಯ ಅರ್ಪಿಸಿ ತೀರ್ಥ ಪ್ರಸಾದ ವಿನಿಯೋಗಿಸಲಾಯಿತು. ಬೆಳಗ್ಗೆ 11.30ರಿಂದ ನಡೆದ ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಪ್ರಸಾದ ಸ್ವೀಕರಿಸಿದರು. ರಾತ್ರಿ 7.30ರಿಂದ ಶ್ರೀ ಬೂದಿ ಬಸವೇಶ್ವರ ಸ್ವಾಮಿ ಅವರ ಅಡ್ಡ ಪಲ್ಲಕ್ಕಿ ಉತ್ಸವ ಗ್ರಾಮದ ಪ್ರತಿ ಬೀದಿಯಲ್ಲೂ ನಡೆಸಲಾಯಿತು. ವೀರಗಾಸೆ ಕುಣಿತ, ಡೊಳ್ಳು, ಡೋಲು ಕುಣಿತ ಉತ್ಸವಕ್ಕೆ ಮೆರಗು ನೀಡಿದವು.
    ಗ್ರಾಮದ ಪ್ರಮುಖರಾದ ಎಚ್.ಎನ್.ರುದ್ರಪ್ಪ, ಬಿ.ಎಂ.ಬಸವರಾಜಪ್ಪ, ಬಿ.ಸೋಮಶೇಖರ್, ಬಿ.ಸುರೇಶ್, ಬಿ.ಶಿವಕುಮಾರ್, ಬಿ.ಎಂ.ವಿಜಯಕುಮಾರ್, ಬಿ.ಕೆ.ನಂಜುಂಡಸ್ವಾಮಿ, ಬಿ.ಟಿ.ಮಹೇಶ್ವರಪ್ಪ, ನಾಗರಾಜಪ್ಪ, ಬಿ.ಎನ್.ನಂಜುಂಡಸ್ವಾಮಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts