More

    ಗಂಗೂಲಿಗೆ ಸಂಕಷ್ಟ ತಂದಿಟ್ಟ ಡೆಲ್ಲಿ ನಾಯಕ ಶ್ರೇಯಸ್ ಅಯ್ಯರ್ ಹೇಳಿಕೆ!

    ನವದೆಹಲಿ: ಐಪಿಎಲ್ 13ನೇ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದೆದುರು ತನ್ನ ಮೊದಲ ಪಂದ್ಯ ಆಡುವುದಕ್ಕೆ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ನೀಡಿರುವ ಹೇಳಿಕೆಯೊಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದೆ. ಗಂಗೂಲಿ ತಮಗೆ ಸಾಕಷ್ಟು ಮಾರ್ಗದರ್ಶನ ನೀಡಿ ನೆರವಾಗಿದ್ದಾರೆ ಎಂದು ಶ್ರೇಯಸ್ ಅಯ್ಯರ್ ಹೇಳಿದ್ದರು. ಇದರಿಂದಾಗಿ ಗಂಗೂಲಿ ಮತ್ತೊಮ್ಮೆ ಸ್ವಹಿತಾಸಕ್ತಿ ಸಂಘರ್ಷ ಆರೋಪ ಎದುರಿಸುವಂತಾಗಿದೆ.

    ಗಂಗೂಲಿ ಈ ಹಿಂದೆ 2019ರ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸಿದ್ದರು. ನಂತರ ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಈ ಹುದ್ದೆಯನ್ನು ತೊರೆದಿದ್ದರು. ಆದರೆ ಡೆಲ್ಲಿ ತಂಡದ ಮೊದಲ ಪಂದ್ಯಕ್ಕೆ ಮುನ್ನ ಶ್ರೇಯಸ್ ಅಯ್ಯರ್, ‘ಕೋಚ್ ರಿಕಿ ಪಾಂಟಿಂಗ್ ಮತ್ತು ಸೌರವ್ ಗಂಗೂಲಿ ಮಾರ್ಗದರ್ಶನದಲ್ಲಿ ನಾನು ಉತ್ತಮ ಆಟಗಾರ ಮತ್ತು ನಾಯಕನಾಗಿ ರೂಪುಗೊಂಡಿದ್ದೇನೆ. ಅವರಿಬ್ಬರು ನನ್ನ ಕೆಲಸವನ್ನು ಸುಲಭಗೊಳಿಸಿದ್ದಾರೆ. ಅವರಿಬ್ಬರು ನನ್ನ ಸುತ್ತ ಇರುವುದು ಅದೃಷ್ಟ’ ಎಂದು ಹೇಳಿದ್ದರು.

    ಶ್ರೇಯಸ್ ಅಯ್ಯರ್ ಅವರ ಈ ಹೇಳಿಕೆಯಿಂದಾಗಿ ಗಂಗೂಲಿ ಈಗಲೂ ಡೆಲ್ಲಿ ತಂಡಕ್ಕೆ ನೆರವಾಗುತ್ತಿದ್ದಾರೆಯೇ ಎಂಬ ಅನುಮಾನ ಹುಟ್ಟಿಕೊಂಡಿತ್ತು. ಒಂದು ವೇಳೆ ಗಂಗೂಲಿ ಹಾಗೆ ಮಾಡಿದರೆ ಅದು ಬಿಸಿಸಿಐನ ಸ್ವಹಿತಾಸಕ್ತಿ ಸಂಘರ್ಷ ನಿಯಮದ ಉಲ್ಲಂಘನೆಯಾಗುತ್ತದೆ. ಹೀಗಾಗಿ ಐಪಿಎಲ್‌ನ ಇತರ ತಂಡಗಳು ಕೂಡ ಈ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದವು.

    ಇದನ್ನೂ ಓದಿ: ನರ್ವಸ್ ಆಗಿದ್ದರೂ ಐಪಿಎಲ್‌ಗೆ ಭರ್ಜರಿ ಎಂಟ್ರಿ ಕೊಟ್ಟ ದೇವದತ್ ಪಡಿಕಲ್; ಗಂಗೂಲಿ ಮೆಚ್ಚುಗೆ

    ತಮ್ಮ ಹೇಳಿಕೆಯಿಂದ ಆಗಿರುವ ಎಡವಟ್ಟನ್ನು ಅರ್ಥಮಾಡಿಕೊಂಡಿರುವ ಶ್ರೇಯಸ್ ಅಯ್ಯರ್ ಅವರೀಗ ಟ್ವಿಟರ್‌ನಲ್ಲಿ ಸ್ಪಷ್ಟನೆ ನೀಡಿದ್ದು, ‘ನನ್ನ ಹೇಳಿಕೆಯು, ನಾಯಕನಾಗಿ ನನ್ನ ವೈಯಕ್ತಿಕ ಪ್ರಗತಿಯಲ್ಲಿ ಗಂಗೂಲಿ ಮತ್ತು ಪಾಂಟಿಂಗ್ ನೆರವಾಗಿರುವುದರ ಬಗ್ಗೆ ಆಗಿತ್ತು. ಕಳೆದ ಆವೃತ್ತಿಯಲ್ಲಿ ಅವರಿಬ್ಬರು ಯುವ ನಾಯಕನಾಗಿದ್ದ ನನಗೆ ಸಾಕಷ್ಟು ಉಪಯುಕ್ತ ಸಲಹೆಗಳನ್ನು ನೀಡಿದ್ದರು. ಅವು ಕ್ರಿಕೆಟಿಗ ಮತ್ತು ನಾಯಕನಾಗಿ ನನ್ನ ಪ್ರಗತಿಗೆ ನೆರವಾಗಿವೆ’ ಎಂದು ಟ್ವೀಟಿಸಿದ್ದಾರೆ.

    VIDEO | ಚಾಹಲ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ವಿಶೇಷವಾಗಿ ಸಂಭ್ರಮಿಸಿದ ಭಾವಿ ಪತ್ನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts