More

    ಶ್ರೀ ಮಧ್ವಪುರಂದರೋತ್ಸವಕ್ಕೆ ಚಾಲನೆ

    ಉಡುಪಿ: ಹಾಡಿನ ಮೂಲಕ ರಂಜನೆಯಷ್ಟೇ ಅಲ್ಲ, ತತ್ವಶಾಸ್ತ್ರಗಳನ್ನು ಬೋಧಿಸುವುದು ದಾಸ ಸಾಹಿತ್ಯದ ಪ್ರಮುಖ ಉದ್ದೇಶ ಎಂದು ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ ಹೇಳಿದರು. ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಅದಮಾರು ಮಠದ ಆಶ್ರಯದಲ್ಲಿ ಬುಧವಾರ ಬೆಂಗಳೂರಿನ ‘ನಿನ್ನಾ ಒಲುಮೆ ಯಿಂದ’ ಪ್ರತಿಷ್ಠಾನ ಆಯೋಜಿಸಿದ ಶ್ರೀ ಮಧ್ವಪುರಂದರೋತ್ಸವಕ್ಕೆ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.

    ಹರಿಸರ್ವೋತ್ತಮತ್ವ ಮತ್ತು ವಾಯುಜೀವೋತ್ತಮತ್ವದ 2 ಹಳಿಯ ಮೇಲೆ ದಾಸ ಸಾಹಿತ್ಯದ ಉಗಿಬಂಡಿ ಸಾಗಿಬಂದಿದೆ. ದಾಸರು ಎಲ್ಲ ಹಾಡುಗಳಲ್ಲಿ ಭಗವಂತನ ಪಾರಮ್ಯವನ್ನು ತೋರಿಸಿಕೊಟ್ಟಿದ್ದಾರೆ ಎಂದರು. ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ದಾಸ ಸಾಹಿತ್ಯ ಮತ್ತು ವ್ಯಾಸ ಸಾಹಿತ್ಯ ಒಂದೇ ನಾಣ್ಯದ ಮುಖಗಳು.

    ಸೂರ್ಯನ ಕಿರಣ ಹಾಗೂ ಚಂದ್ರ ಕಿರಣಗಳಲ್ಲಿ ಯಾವುದು ಶ್ರೇಷ್ಠ ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ಸೂರ್ಯನ ಮೂಲವೇ ಚಂದ್ರನಲ್ಲಿ ಬೆಳಕು ಹರಿಯುತ್ತದೆ. ಅದೇ ರೀತಿ ಆಚಾರ್ಯ ಮಧ್ವರ ಸಂದೇಶವನ್ನೇ ದಾಸ ಸಾಹಿತ್ಯದಲ್ಲಿ ಕಾಣಬಹುದು ಎಂದರು. ಪ್ರತಿಷ್ಠಾನದ ಪ್ರವರ್ತಕ ಮೈಸೂರು ರಾಮಚಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

    ಎರಡು ಕೃತಿಗಳ ಲೋಕಾರ್ಪಣೆ
    ಪಲಿಮಾರು ಮಠದ ತತ್ವ ಸಂಶೋಧನಾ ಸಂಸತ್ತಿನ ಮೂಲಕ ಪ್ರಕಾಶಿತ ಸಗ್ರಿ ರಾಘವೇಂದ್ರ ಆಚಾರ್ಯ ಮತ್ತು ಓಂಪ್ರಕಾಶ್ ಸಂಗ್ರಹಿಸಿದ ಮಾಧ್ವ ಪೀಠಾಧಿಪತಿಗಳ ಆಯ್ದ ನುಡಿಮುತ್ತುಗಳ ಸರ್ವದಾ ಪ್ರತಿಪಾದಯ ಎಂಬ ಪುಸ್ತಕ ಹಾಗೂ ವ್ಯಾಸಮಧ್ವ ಸಂಶೋಧನಾ ಪ್ರತಿಷ್ಠಾನದ ಮೂಲಕ ವ್ಯಾಸನಕೆರೆ ಪ್ರಭಂಜನಾಚಾರ್ಯ ಅವರು ಸಂಗ್ರಹಿಸಿದ ಕನಕದಾಸರ ಸಮಗ್ರ ಕೀರ್ತನೆಗಳು ಎಂಬ ಪುಸ್ತಕ ವನ್ನು ಉಭಯ ಶ್ರೀಪಾದರು ಬಿಡುಗಡೆಗೊಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts