More

    ಹರಿಯಾಣದಿಂದ ರೈಲು ಪ್ರಯಾಣ ಬೆಳೆಸಿದ 4800 ವಲಸೆ ಕಾರ್ಮಿಕರು

    ಛತ್ತೀಸಗಢ : ವಲಸೆ ಕಾರ್ಮಿಕರನ್ನು ತಮ್ಮ ಊರುಗಳಿಗೆ ತಲುಪಿಸಲು ಹರಿಯಾಣ ಸರ್ಕಾರ ಪ್ರತಿನಿತ್ಯ ವಿವಿಧ ರೈಲು ನಿಲ್ದಾಣಗಳಿಂದ ವಿಶೇಷ ಶ್ರಮಿಕ್ ರೈಲ್ವು ವ್ಯವಸ್ಥೆ ಮಾಡಿದೆ.
    ಶನಿವಾರ 3600 ವಲಸೆ ಕಾರ್ಮಿಕರನ್ನು ರೇವಾರಿಯಿಂದ ಮೂರು ರೈಲುಗಳ ಮೂಲಕ ಬಿಹಾರ ಮತ್ತು ಮಧ್ಯಪ್ರದೇಶಕ್ಕೆ ಹಾಗೂ 1200 ವಲಸೆ ಕಾರ್ಮಿಕರನ್ನು ಭಿವಾನಿಯಿಂದ ಬಿಹಾರಕ್ಕೆ ಕಳುಹಿಸಲಾಯಿತು.
    ಎಲ್ಲ ವಲಸೆ ಕಾರ್ಮಿಕರನ್ನು ವಿಶೇಷ ಬಸ್​ಗಳ ಮೂಲಕ ರೈಲ್ವೆ ನಿಲ್ದಾಣಗಳಿಗೆ ಕರೆತರಲಾಯಿತು. ವ್ಯಾಕ್ಯೂಮ್ ಕ್ಲೀನರ್​​ಗಳ ಮೂಲಕ ಎಲ್ಲ ಪ್ಲಾಟ್​ಫಾರ್ಮ್​​ಗಳನ್ನು ಸ್ವಚ್ಛಗೊಳಿಸಲಾಯಿತಲ್ಲದೆ ವಲಸೆ ಕಾಮಿರ್ಕರ ಕೈಗಳನ್ನು ಸ್ಯಾನಿಟೈಸ್ ಮಾಡಿಸಲಾಯಿತು. ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಎಲ್ಲ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಲಾಯಿತು. ಎಲ್ಲ ಕಂಪಾರ್ಟ್​ಮೆಂಟ್​​ಗಳ ಮುಂದೆ ಹೆಲ್ಪ್ ಡೆಸ್ಕ್ ವ್ಯವಸ್ಥೆ ಮಾಡಲಾಗಿತ್ತು.
    ವಲಸೆ ಕಾರ್ಮಿಕರ ಪ್ರಯಾಣದ ವೆಚ್ಚವನ್ನು ಹರಿಯಾಣ ಸರ್ಕಾರ ಭರಸಿದೆ ಎಂಬ ಅರ್ಥವಿರುವಂತೆ ಪ್ರತಿ ಟಿಕೆಟ್​​ಮೇಲೆ ಮುದ್ರಿಸಲಾಗಿದೆ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್​​ಲಾಲ್ ಖಟ್ಟರ್ ತಿಳಿಸಿದ್ದಾರೆ.

    ಮೊನ್ನೆ ಕಾಣಿಸಿಕೊಂಡವನು ನಿಜವಾದ ಕಿಮ್ ಅಲ್ವಾ? ಅವನ ಡುಪ್ಲಿಕೇಟಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts