More

    ನಗಿಸುತ್ತಿವೆ ಶಾರ್ಟ್ ವಿಡಿಯೋಗಳು

    ಭರತ್ ಶೆಟ್ಟಿಗಾರ್ ಮಂಗಳೂರು

    ಲಾಕ್‌ಡೌನ್‌ನಲ್ಲಿ ಮನೆಯಲ್ಲಿ ಕುಳಿತು ಬೋರ್ ಹೊಡೆಯುವ ಮಧ್ಯೆ ಕೆಲವರು ನಗಿಸುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ.

    ತಮ್ಮ ಮನೆ ಪರಿಸರದಲ್ಲೇ ಸಣ್ಣ ವಿಡಿಯೋ ತುಣುಕು ಚಿತ್ರೀಕರಿಸಿ ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ಗಳಿಗೆ ಅಪ್‌ಲೋಡ್ ಮಾಡಿ ಮನರಂಜನೆ ನೀಡುವ ಜತೆಗೆ ತಮ್ಮ ಪೇಜ್‌ಗಳಿಗೆ ಫಾಲೋವರ್‌ಗಳನ್ನು ಪಡೆಯುತ್ತಿದ್ದಾರೆ.

    ಕಳೆದ ಲಾಕ್‌ಡೌನ್ ಸಂದರ್ಭ ಕೆಲವರು ಪ್ರಯೋಗಾತ್ಮಕವಾಗಿ ಮಾಡಿದ್ದು ಹೆಚ್ಚು ಮೆಚ್ಚುಗೆ ಪಡೆದಿದ್ದು, ಈ ಬಾರಿಯೂ ಮುಂದುವರಿಸಿದ್ದಾರೆ. ಇದರಿಂದ ಪ್ರೇರಣೆ ಪಡೆದ ಇನ್ನಷ್ಟು ಮಂದಿ ವಿಡಿಯೋ ಮಾಡಿ ಹರಿಯಬಿಡುತ್ತಿದ್ದಾರೆ.

    ಲಾಕ್‌ಡೌನ್, ಕರೊನಾ, ಸರ್ಕಾರದ ದಿನಕ್ಕೊಂದು ನಿಯಮಾವಳಿ, ಪೊಲೀಸರ ಲಾಠಿ ಏಟು ಮೊದಲಾದವುಗಳೇ ಈ ಸ್ಕಿಟ್‌ಗಳಿಗೆ ಹಾಟ್ ಟಾಪಿಕ್. ಕೆಲಸವಿಲ್ಲದೆ ಮನೆಯಲ್ಲಿ ಮೊಬೈಲ್ ನೋಡಿಕೊಂಡು ಇರುವವರಿಗೆ ಟೈಮ್‌ಪಾಸ್‌ಗೆ ಮನರಂಜನೆಯಾದರೆ, ವಿಡಿಯೋ ಮಾಡುವವರಿಗೆ ಸಮಯ ವ್ಯರ್ಥ ಮಾಡುತ್ತಿಲ್ಲ ಎಂಬ ಭಾವನೆ ಮೂಡಿಸುತ್ತಿದೆ. ಹಲವು ಟ್ರೋಲ್ ಪೇಜ್‌ಗಳು ಇಂಥ ವಿಡಿಯೋಗಳನ್ನು ಪಡೆದು ವೈರಲ್ ಮಾಡುತ್ತಿವೆ.

    ಕೊನೆಯಲ್ಲೊಂದು ಪಂಚ್: ಒಂದು ನಿಮಿಷದ ಒಳಗಿನ ವಿಡಿಯೋಗಳಾಗಿದ್ದು, ಕೊನೆಯಲ್ಲಿ ಒಂದು ಪಂಚ್ ಇರುತ್ತದೆ. ದ.ಕ ಜಿಲ್ಲೆಯ ಮಟ್ಟಿಗೆ ಹೇಳುವುದಾದರೆ ಬಹುತೇಕ ತುಳುವಿನಲ್ಲಿ ಇಂಥ ವಿಡಿಯೋಗಳಿವೆ. ಮಕ್ಕಳು, ಹಿರಿಯರು ಭಾಗವಹಿಸುತ್ತಾರೆ. ನಟನೆಯಲ್ಲಿ ಆಸಕ್ತಿ ಇರುವವರಿಗೆ ಪ್ರತಿಭಾ ಪ್ರದರ್ಶನಕ್ಕೆ ಅವಕಾಶವೂ ಆಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚು ವಿಡಿಯೋಗಳು ಬರುತ್ತಿವೆ.

    ಲಾಕ್‌ಡೌನ್ ಸಮಯ ಸದುಪಯೋಗಪಡಿಸಿಕೊಳ್ಳುವ ಹಲವು ಮಾರ್ಗಗಳಲ್ಲಿ ಇದೂ ಒಂದು. ಮನೆ ಮಂದಿ, ಸ್ನೇಹಿತರು ಒಟ್ಟಿಗೆ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳುವುದರಿಂದ, ಲಾಕ್‌ಡೌನ್‌ನಲ್ಲೂ ಕೆಲಸ ಮಾಡುತ್ತಿದ್ದೇವೆ ಎಂಬ ಭಾವನೆ ಬರುತ್ತದೆ. ಜತೆಗೆ ಈ ಸಮಯದಲ್ಲಿ ಬಹುತೇಕ ಮಂದಿ ಮೊಬೈಲ್‌ನಲ್ಲೇ ಕಾಲ ಕಳೆಯುವುದರಿಂದ ಅಪ್‌ಲೋಡ್ ಮಾಡಿದ ವಿಡಿಯೋಗಳಿಗೆ ಹೆಚ್ಚಿನ ವೀವ್ಸ್ ಪಡೆಯಲು ಸಾಧ್ಯವಾಗುತ್ತದೆ.

    ಧನ್‌ರಾಜ್ ಆಚಾರ್
    ಶಾರ್ಟ್ ವಿಡಿಯೋ ನಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts