More

    ಜುಲೈ 22ರ ನಂತರ ಮತ್ತೆ ಬರಲಿದೆ ಟಿಕ್​ಟಾಕ್​?​ ಕಂಪನಿಯ ವರದಿಯಲ್ಲೇನಿದೆ?

    ನವದೆಹಲಿ: ದೇಶಾದ್ಯಂತ ಯುವ ವಯಸ್ಸಿನವರನ್ನು ತನ್ನತ್ತ ಸೆಳೆದು ಕೆಲವೇ ದಿನಗಳಲ್ಲಿ ಪ್ರಖ್ಯಾತಿ ಗಳಿಸಿದ ಟಿಕ್​ಟಾಕ್​ ಆ್ಯಪ್​ ಸೇರಿದಂತೆ ಚೀನಾದ 59 ಆ್ಯಪ್​ಗಳನ್ನು ಭಾರತ ಸರ್ಕಾರ ಭದ್ರತಾ ದೃಷ್ಟಿಯಿಂದ ಬ್ಯಾನ್​ ಮಾಡಿದೆ.

    ಬ್ಯಾನ್​ ಸಂಬಂಧ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಎಂಇಐಟಿವೈ) ಸುಮಾರು 79 ಪ್ರಶ್ನೆಗಳನ್ನು ಪಟ್ಟಿ ಮಾಡಿ ಮೂರು ವಾರಗಳ ಒಳಗೆ ಉತ್ತರಿಸುವಂತೆ ಚೀನಾ ಆ್ಯಪ್ ಕಂಪನಿಗಳಿಗೆ ನೋಟಿಸ್​ ಕಳುಹಿಸಿದೆ. ಇದರ ಪ್ರಕಾರ ಜುಲೈ 22ರೊಳಗೆ ಉತ್ತರಿಸದಿದ್ದರೆ, ದೇಶಾದ್ಯಂತ ಚೀನಾ ಆ್ಯಪ್​ಗಳು ಶಾಶ್ವತವಾಗಿ ಬ್ಯಾನ್​ ಆಗಲಿವೆ.

    ಇದನ್ನೂ ಓದಿ: ಪತಿಯ ಅಗಲಿಕೆ ಬೆನ್ನಲ್ಲೇ ಪೋಷಕರು ಮಾಡಿದ ನಿರ್ಧಾರಕ್ಕೆ ಬೇಸತ್ತು ಗೃಹಿಣಿ ನೇಣಿಗೆ ಶರಣು

    ಇನ್ನು ನಿಷೇಧಿತ ಆ್ಯಪ್​ ಕಂಪನಿಗಳ ಉತ್ತರಗಳನ್ನು ನಂಬವುದಕ್ಕೂ ಮುನ್ನ ಅದಕ್ಕೆಂದೇ ರಚಿಸಲಾಗಿರುವ ವಿಶೇಷ ಸಮಿತಿಗೆ ಕಂಪನಿಗಳ ವರದಿಗಳನ್ನು ಕಳುಹಿಸಲಾಗುವುದು. ಪರೀಕ್ಷಿಸಿದ ಬಳಿಕ ನಿಷೇಧ ಸಡಿಲಗೊಳಿಸಬೇಕೇ? ಬೇಡವೇ? ಎಂದು ನಿರ್ಧರಿಸಲಾಗುವುದು.

    ಇದೇ ವೇಳೆ ಟಿಕ್​ಟಾಕ್​ ತನ್ನ ಪಾರದರ್ಶಕ ವರದಿಯಲ್ಲಿ ನಮೂದಿಸಿರುವಂತೆ ತನ್ನ ವಿಷಯ ನೀತಿಗಳ ಉಲ್ಲಂಘನೆ ಆಧಾರದ ಮೇಲೆ 2019ರ ಕೊನೆಯ ಆರು ತಿಂಗಳಲ್ಲಿ ಸುಮಾರು 16 ಮಿಲಿಯನ್​ ವಿಡಿಯೋಗಳನ್ನು ತೆಗೆದುಹಾಕಿರುವುದಾಗಿ ಹೇಳಿದೆ. ಅಲ್ಲದೆ, ಇದೇ ಸಮಯದಲ್ಲಿ ಜಾಗತಿಕವಾಗಿ ಸುಮಾರು 49 ಮಿಲಿಯನ್​ ವಿಡಿಯೋಗಳನ್ನು ತೆಗೆದುಹಾಕಿರುವುದಾಗಿ ಟಿಕ್​ಟಾಕ್​ ತನ್ನ ವರದಿಯಲ್ಲಿ ಉಲ್ಲೇಖಿಸಿದೆ ಎಂದು ಕೆಲ ಮೂಲಗಳು ತಿಳಿಸಿವೆ.

    ವಿಡಿಯೋಗಳನ್ನು ತೆಗೆದುಹಾಕುವಂತಹ ಅಥವಾ ಬಳಕೆದಾರರ ಮಾಹಿತಿಯ ಯಾವುದೇ ವಿನಂತಿಗಳನ್ನು ಚೀನಾದಿಂದ ಸ್ವೀಕರಿಸಿಲ್ಲ. ಒಂದು ವೇಳೆ ಕೇಳಿದರೆ ಅವರ ವಿನಂತಿಯನ್ನು ಪುರಷ್ಕರಿಸುವುದೂ ಇಲ್ಲ ಎಂದು ಕಂಪನಿ ತನ್ನ ವರದಿಯಲ್ಲಿ ತಿಳಿಸಿದೆ. ಅಲ್ಲದೆ, ಟಿಕ್​ಟಾಕ್​ ಮರುಸ್ಥಾಪಿಸುವಂತೆ ಸಾಕಷ್ಟು ಮನವಿಗಳು ಬರುತ್ತಿರುವುದಾಗಿ ಟಿಕ್​ಟಾಕ್​ ಹೇಳಿಕೊಂಡಿದೆ.

    ಇದನ್ನೂ ಓದಿ: ಒಡಿಶಾ ಬ್ಯೂಟಿ ಬಗ್ಗೆ ಟ್ವೀಟ್​ ಮಾಡಿದ್ದಕ್ಕೇ ಕಿಡಿಕಾರಿದ ನೆಟ್ಟಿಗರಿಗೆ ತಿರುಗೇಟು ನೀಡಿದ ಆರ್​ಜಿವಿ!

    ಇನ್ನು ಈ ತಿಂಗಳ ಆರಂಭದಲ್ಲಿ ಪ್ರಧಾನಿ ಮೋದಿ ನೇತೃತ್ವದ ಮೋದಿ ಸರ್ಕಾರ ಚೀನಾ 59 ಆ್ಯಪ್​ಗಳ ಮೇಲೆ ನಿರ್ಬಂಧ ಹೇರಿತು. ಲಡಾಖ್​ ಗಡಿಯಲ್ಲಿ ಭಾರತ ಮತ್ತು ಚೀನಾ ನಡುವಿನ ಸಂಘರ್ಷ ತಾರಕಕ್ಕೇರಿದ ಬೆನ್ನಲ್ಲೇ ದೇಶಾದ್ಯಂತ ಚೀನಾ ವಿರೋಧಿ ಅಲೆ ಕೇಳಿಬಂದಿತು. ಚೀನಾ ವಸ್ತುಗಳ ಬಹಿಷ್ಕಾರದ ಬಗ್ಗೆಯೂ ಮಾತುಗಳು ಕೇಳಿಬಂದಿತು. ಇದರ ಬೆನ್ನಲ್ಲೇ ಸರ್ಕಾರ ಆ್ಯಪ್​ಗಳನ್ನು ಬ್ಯಾನ್​ ಮಾಡಿ ಚೀನಾಗೆ ಕಠಿಣ ಸಂದೇಶ ರವಾನಿಸಿತು.

    ಇದರ ಬೆನ್ನಲ್ಲೇ ಸ್ಪಷ್ಟನೆ ನೀಡಿದ್ದ ಟಿಕ್​ಟಾಕ್​, ಭಾರತದ ಕಾನೂನಿಗೆ ಅನುಗುಣವಾಗಿ ಕಂಪನಿಯೂ ಡೇಟಾ ಗೌಪ್ಯತೆ ಹಾಗೂ ಭದ್ರತೆಯನ್ನು ಅನುಸರಿಸುತ್ತಲೇ ಇದೆ ಎಂದು ಹೇಳಿಕೆ ನೀಡಿತು. ಅಲ್ಲದೆ, ಟಿಕ್​ಟಾಕ್​ ಮರುಸ್ಥಾಪಿಸುವ ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿ ಇರುವುದಾಗಿಯೂ ಟಿಕ್​ಟಾಕ್​ ಹೇಳಿಕೊಂಡಿತು. (ಏಜೆನ್ಸೀಸ್​)

    ಶೀಘ್ರದಲ್ಲೇ ಬರಲಿದೆಯಾ ಮನುಷ್ಯನ ಜೀವಿತಾವಧಿ ಹಿಗ್ಗಿಸುವ ಗುಳಿಗೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts