More

    ಶೀಘ್ರದಲ್ಲೇ ಬರಲಿದೆಯಾ ಮನುಷ್ಯನ ಜೀವಿತಾವಧಿ ಹಿಗ್ಗಿಸುವ ಗುಳಿಗೆ!

    ನವದೆಹಲಿ: ಇತ್ತೀಚಿನ ದಿನಗಳಲ್ಲಿ ಮನುಷ್ಯನ ಜೀವಿತಾವಧಿ ಕುಗ್ಗುತ್ತಿದೆ. ಈ ಹಿಂದೆ 100 ವರ್ಷ ಬದುಕುತ್ತಿದ್ದ ಮನುಷ್ಯ ಈಗ 60 ವರ್ಷ ಬದುಕುತ್ತಿದ್ದಾನೆ. ಅಂದರೆ 40 ವರ್ಷಗಳ ಜೀವಿತಾವಧಿ ಕಡಿಮೆಯಾಗಿದೆ. ಇದನ್ನು ಹೆಚ್ಚಿಸುವ ಸಲುವಾಗಿ ವಿಜ್ಞಾನಿಗಳು ಸಂಶೋಧನೆ ನಡೆಸಿದ್ದು, ಇದೀಗ ಅಂಥ ಔಷಧವನ್ನು ಸಿದ್ಧಪಡಿಸುವ ಹಂತ ತಲುಪಿದ್ದಾರೆ.

    ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾದ ಯುಎಸ್​ಸಿ ಡಾರ್ನ್​ಸೈಫ್​ ಕಾಲೇಜ್​ ಆಫ್​​ ಲೆಟರ್ಸ್​, ಆರ್ಟ್ಸ್​ ಆ್ಯಂಡ್​ ಸೈನ್ಸಸ್​ನ ಸಂಶೋಧಕರು ಪ್ರಯೋಗಾಲಯದಲ್ಲಿ ವಿವಿಧ ಜೀವಿಗಳ ಮೇಲೆ ಈ ಔಷಧವನ್ನು ಪ್ರಯೋಗಿಸಿದ್ದು, ಅವುಗಳ ಜೀವಿತಾವಧಿ ಹಿಗ್ಗಿದೆ. ಅವುಗಳಂತೆ ಮನುಷ್ಯರ ಜೀವಿತಾವಧಿಯನ್ನು ಈ ಔಷಧ ಹಿಗ್ಗಿಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಪತಿಯ ಅಗಲಿಕೆ ಬೆನ್ನಲ್ಲೇ ಪೋಷಕರು ಮಾಡಿದ ನಿರ್ಧಾರಕ್ಕೆ ಬೇಸತ್ತು ಗೃಹಿಣಿ ನೇಣಿಗೆ ಶರಣು

    ಜರ್ನಲ್​ ಆಫ್​ ಜೀರಾಂಟಾಲಜಿ: ಬಯೋಲಾಜಿಕಲ್​ ಸೈನ್ಸ್​ಸ್​ ಎಂಬ ಜರ್ನಲ್​ನಲ್ಲಿ ಜು.10ರಂದು ಪ್ರಕಟವಾಗಿರುವ ಅಧ್ಯಯನ ವರದಿಯ ಪ್ರಕಾರ, ನೊರಜು ಡ್ರಾಸೋಫಿಲಾಕ್ಕೆ ಮೈಫ್​​ಪ್ರಿಸ್ಟೋನ್​ ಎಂಬ ಔಷಧವನ್ನು ನೀಡಿದಾಗ ಹೆಣ್ಣು ನೊರಜುಗಳ ಜೀವಿತಾವಧಿ ಹೆಚ್ಚಾಗಿದ್ದು ಕಂಡುಬಂದಿರುವುದಾಗಿ ಹೇಳಿದ್ದಾರೆ.
    ಗಂಡು ಮತ್ತು ಹೆಣ್ಣು ನೊರಜು ಕೂಡಿಕೊಂಡಾಗ ಗಂಡು ನೊರಜಿನಿಂದ ಹೆಣ್ಣು ನೊರಜಿಗೆ ಸೆಕ್ಸ್​ ಪೆಪ್ಟೈಡ್​ ಎಂಬ ಅಂಶವೂ ದಾಟಿಕೊಳ್ಳುತ್ತದೆ. ಈ ಸೆಕ್ಸ್​ ಪೆಪ್ಟೈಡ್​ನಿಂದಾಗಿ ಹೆಣ್ಣು ನೊರಜಿನಲ್ಲಿ ಉರಿಯೂತ ಕಾಣಿಸಿಕೊಂಡು ಅದು ಅಸ್ವಸ್ಥಗೊಳ್ಳುತ್ತದೆ. ಜತೆಗೆ ಅದರ ಜೀವಿತಾವಧಿ ಕ್ಷೀಣಿಸುತ್ತದೆ.

    ಗಂಡಿನೊಂದಿಗೆ ಕೂಡಿಕೊಂಡ ಬಳಿಕ ಹೆಣ್ಣು ನೊರಜಿಗೆ ಮೈಫ್​ಪ್ರಿಸ್ಟೋನ್​ ಔಷಧ ಕೊಟ್ಟಾಗ ಸೆಕ್ಸ್​ ಪೆಪ್ಟೈಡ್​ನಿಂದ ಆಗುವ ಪರಿಣಾಮಗಳು ಕಡಿಮೆಯಾಗಿ, ಅದರ ಜೀವಿತಾವಧಿ ಹಿಗ್ಗಿದ್ದನ್ನು ಹಾಗೂ ಈ ಔಷಧ ಪಡೆಯದ ಹೆಣ್ಣು ನೊರಜುಗಳು ಬೇಗನೆ ಸತ್ತಿದ್ದನ್ನು ಗಮನಿಸಿರುವುದಾಗಿ ವಿಜ್ಞಾನಿಗಳು ಹೇಳಿದ್ದಾರೆ.
    ಮೈಫ್​​ಪ್ರಿಸ್ಟೋನ್​ ಔಷಧವನ್ನು ವೈದ್ಯರು ಆರಂಭಿಕ ಹಂತದ ಗರ್ಭಪಾತ ಮಾಡಲು ಬಳಸುತ್ತಾರೆ. ಜತೆಗೆ ಕ್ಯಾನ್ಸರ್​ ಮತ್ತು ಕಷಿಂಗ್​ ಕಾಯಿಲೆ (ಔಷಧ ಸೇವನೆಯಿಂದಾಗಿ ಮುಖ ದುಂಡಗಾಗುವುದು ಹಾಗೂ ಹೊಟ್ಟೆ ಉಬ್ಬುವುದು) ಚಿಕಿತ್ಸೆಗೂ ಇದನ್ನು ಬಳಸಲಾಗುತ್ತದೆ.

    ಈ ಔಷಧವು ವಂಶಾಭಿವೃದ್ಧಿ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಜತೆಗೆ ರೋಗನಿರೋಧಕ ಶಕ್ತಿಯ ಪ್ರತಿಕ್ರಿಯಾತ್ಮಕ ಪ್ರಕ್ರಿಯೆಯನ್ನು ಪ್ರಭಾವಿಸುತ್ತದೆ. ಇದರ ಜತೆಗೆ ಮನುಷ್ಯರ ಜೀವಿತಾವಧಿಯನ್ನು ಹಿಗ್ಗಿಸುವ ಗುಣ ಇದರಲ್ಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

    ಯಾಮಾರಿಬಿಟ್ಟೆನಪ್ಪಾ… ಕಣ್ಣು ಕಿತ್ತರೂ ನಿದ್ದೆ ಬರ್ತಿಲ್ಲ: ಜಗ್ಗೇಶ್‌ ನೋವಿನ ನುಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts