More

    ಹೆದ್ದಾರಿ ಕಾಮಗಾರಿ ಪೂರ್ತಿಗೆ ಡಿಸೆಂಬರ್ ಗಡುವು, ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ

    ಉಡುಪಿ: ಕುಂದಾಪುರ-ತಲಪಾಡಿ ರಾಷ್ಟ್ರೀಯ ಹೆದ್ದಾರಿ 66 ಚತುಷ್ಪಥ ಕಾಮಗಾರಿ 3 ವರ್ಷದ ಹಿಂದೆ ಪೂರ್ಣಗೊಳ್ಳಬೇಕಿತ್ತು. ಆದರೆ ಗುತ್ತಿಗೆದಾರ ಸಂಸ್ಥೆ ನಿರ್ಲಕ್ಷ್ಯದಿಂದ ಆಮೆಗತಿಯಲ್ಲಿ ಸಾಗಿದೆ.

    ಪ್ರಸ್ತುತ ಕರೊನಾ ಹಿನ್ನೆಲೆಯಲ್ಲಿ ಕಾರ್ಮಿಕರ ಕೊರತೆ ಇರುವುದರಿಂದ ಪಡುಬಿದ್ರಿ ಹಾಗೂ ಕುಂದಾಪುರ ಫ್ಲೈ ಓವರ್ ಕಾಮಗಾರಿ ಪೂರ್ಣಗೊಳಿಸಲು ಡಿಸೆಂಬರ್ ತಿಂಗಳ ಗಡುವು ನೀಡಲಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

    ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಹೊಸದಾಗಿ ಕಟಪಾಡಿಯಲ್ಲಿ ಫ್ಲೈಓವರ್ ನಿರ್ಮಿಸಲು ನಿರ್ಧರಿ ಸಲಾಗಿದೆ. ಜತೆಗೆ ಬ್ರಹ್ಮಾವರ ಬಸ್ ನಿಲ್ದಾಣ ಬಳಿ ಈಗಿರುವ ಅಂಡರ್‌ಪಾಸನ್ನು ವಿಸ್ತರಿಸಲಾಗುವುದು. ಕುಂದಾಪುರ ಶಾಸ್ತ್ರಿ ವೃತ್ತ ಮತ್ತು ವಿನಾಯಕ ಟಾಕೀಸ್ ಬಳಿಯ ಕಾಮಗಾರಿಗಳನ್ನು ತೀವ್ರಗೊಳಿಸಲು ಸೂಚನೆ ನೀಡಲಾಗಿದೆ ಎಂದರು.

    ಎನ್‌ಎಚ್169ಎ ಯಲ್ಲಿ ಹಿರಿಯಡ್ಕದ ಓಂತಿಬೆಟ್ಟಿನಿಂದ ಪುತ್ತಿಗೆ ಸೇತುವೆವರೆಗೆ ಈಗಿರುವ ರಸ್ತೆಯನ್ನೇ ಅಗಲಗೊಳಿಸಿ ಅಭಿವೃದ್ಧಿ ಪಡಿಸಲಾಗುತ್ತದೆ. ಧಾರ್ಮಿಕ ಹಾಗೂ ಶ್ರದ್ಧಾಕೇಂದ್ರಗಳಿಗೆ ತೊಂದರೆ ಆಗದಂತೆ ಎಚ್ಚರ ವಹಿಸಲಾಗುವುದು. ಹಾಗಾಗಿ ಈ ಭಾಗದಲ್ಲಿ ಮನೆ ಇತ್ಯಾದಿ ಕಟ್ಟಡ ನಿರ್ಮಿಸುವವರು ಸ್ಥಳ ಬಿಡುವಂತೆ ಮನವಿ ಮಾಡಿದರು. ಶಾಸಕ ರಘುಪತಿ ಭಟ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್ ಮೊದಲಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts