More

    ಸಾನಿಯಾ ನೋಡಲು ಶೋಯಿಬ್‌ಗೆ ಸಿಕ್ತು ಗ್ರೀನ್ ಸಿಗ್ನಲ್..!

    ಕರಾಚಿ: ಪಾಕಿಸ್ತಾನದ ಹಿರಿಯರ ಆಲ್ರೌಂಡರ್ ಶೋಯಿಬ್ ಮಲಿಕ್ ಹಾಗೂ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಲಾಕ್‌ಡೌನ್‌ನಿಂದಾಗಿ ಕಳೆದ 5 ತಿಂಗಳಿಂದ ಭೇಟಿಯಾಗಿಲ್ಲ. ಶೋಯಿಬ್ ದೂರದ ಪಾಕಿಸ್ತಾನದಲ್ಲಿ ಲಾಕ್ ಆಗಿದ್ದರೆ, ಸಾನಿಯಾ ಒಂದೂವರೆ ವರ್ಷದ ಮಗ ಇಝಾನ್ ಜತೆಗೆ ಹೈದರಾಬಾದ್‌ನಲ್ಲಿ ಉಳಿದಿದ್ದಾರೆ. ಅಂತಾರಾಷ್ಟ್ರೀಯ ವಿಮಾನಯಾನ ರದ್ದುಗೊಂಡಿದ್ದರಿಂದ ಇವರಿಬ್ಬರೂ ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಸದ್ಯ ಟಿ20 ಕ್ರಿಕೆಟ್ ಅಷ್ಟೇ ಆಡುತ್ತಿರುವ ಶೋಯಿಬ್ ಮಲಿಕ್ ಇಂಗ್ಲೆಂಡ್ ಪ್ರವಾಸಕ್ಕೆ ತಡವಾಗಿ ಬರಲು ಕೇಳಿದ್ದ ಅನುಮತಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಒಪ್ಪಿಗೆ ಸೂಚಿಸಿದೆ. ಇದರಿಂದ ಫುಲ್ ಖುಷಿಯಾಗಿರುವ ಶೋಯಿಬ್ ಮಲಿಕ್, ಇದೀಗ ಪತ್ನಿ, ಮಗನನ್ನು ನೋಡಲು ತುದಿಗಾಲಲ್ಲಿ ನಿಂತಿದ್ದಾರೆ.

    ಇದನ್ನೂ ಓದಿ: ಮದಗಜನಿಗೆ ಸಾಥ್​ ಕೊಟ್ಟಿದ್ದ ಪ್ರಶಾಂತ್​ ನೀಲ್​, ಈ ಸಿನಿಮಾಕ್ಕೂ ಕೈ ಜೋಡಿಸಿದ್ದಾರೆ!

    29 ಸದಸ್ಯರ ಪಾಕಿಸ್ತಾನ ತಂಡ ಜೂನ್ 28 ರಂದು ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ಗೆ ಪ್ರಯಾಣ ಬೆಳೆಸಲಿದೆ. ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ) ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಮಲಿಕ್ ಜುಲೈ 24 ರಂದು ತೆರಳಲಿದ್ದಾರೆ. ಮಲಿಕ್ ಹೊರತುಪಡಿಸಿ ತಂಡದ ಉಳಿದ ಆಟಗಾರರು ಒಟ್ಟಿಗೆ ಪ್ರಯಾಣ ಬೆಳೆಸಲಿದ್ದು, ಕೌಟುಂಬಿಕ ಕಾರಣದಿಂದಾಗಿ ಮಲಿಕ್ ತಡವಾಗಿ ಇಂಗ್ಲೆಂಡ್‌ಗೆ ತೆರಳಿದ್ದಾರೆ ಎಂದು ಪಿಸಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಾಸಿಂ ಖಾನ್ ತಿಳಿಸಿದ್ದಾರೆ. ಈ ಕುರಿತು ಇಸಿಬಿ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಶೋಯಿಬ್ ಕುಟುಂಬ ಸೇರಿಕೊಳ್ಳಲು ಅನುಮತಿ ನೀಡಲಾಯಿತು. ಇಂಗ್ಲೆಂಡ್‌ಗೆ ಆಗಮಿಸುವುದಕ್ಕೂ ಮುನ್ನ ಶೋಯಿಬ್ ಅಲ್ಲಿನ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಲಿದ್ದಾರೆ ಎಂದಿದ್ದಾರೆ. ಆದರೆ, ಶೋಯಿಬ್ ಪತ್ನಿ ನೋಡಲು ಭಾರತಕ್ಕೆ ಆಗಮಿಸುವರ ಅಥವಾ ಸಾನಿಯಾರನ್ನೇ ದುಬೈಗೆ ಕರೆಸಿಕೊಳ್ಳುತ್ತಾರಾ ಎಂಬುದು ಸ್ಪಷ್ಟವಾಗಿಲ್ಲ.

    ಸಾನಿಯಾ ನೋಡಲು ಶೋಯಿಬ್‌ಗೆ ಸಿಕ್ತು ಗ್ರೀನ್ ಸಿಗ್ನಲ್..!

    ಶೋಯಿಬ್ ಮಲಿಕ್ ಈಗಾಗಲೇ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 3 ಪಂದ್ಯಗಳ ಟಿ20 ಸರಣಿ ಆಗಸ್ಟ್ 29 ರಿಂದ ಆರಂಭವಾಗಲಿದ್ದು, ಜಲೈ 30 ರಂದು ಟೆಸ್ಟ್ ಸರಣಿ ನಡೆಯಲಿದೆ. ಪಾಕಿಸ್ತಾನ ತಂಡ ಮ್ಯಾಂಚೆಸ್ಟರ್‌ಗೆ ತಲುಪಿದ ಬಳಿಕ ಡರ್ಬಿಷೈರ್‌ಗೆ ಪ್ರಯಾಣ ತೆರಳಲಿದ್ದು, 14 ದಿನ ಕ್ವಾರಂಟೈನ್‌ಗೆ ಒಳಗಾಗಲಿದೆ. ಕಳೆದ ವರ್ಷ ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವಕಪ್ ಟೂರ್ನಿ ಬಳಿಕ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.

    ಜೂನ್ 20: ಮೂವರು ದಿಗ್ಗಜರು ಟೆಸ್ಟ್‌ಗೆ ಪದಾರ್ಪಣೆ ಮಾಡಿದ ದಿನ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts