More

    ಮದಗಜನಿಗೆ ಸಾಥ್​ ಕೊಟ್ಟಿದ್ದ ಪ್ರಶಾಂತ್​ ನೀಲ್​, ಈ ಸಿನಿಮಾಕ್ಕೂ ಕೈ ಜೋಡಿಸಿದ್ದಾರೆ!

    ‘ಉಗ್ರಂ’ ಸಿನಿಮಾ ಮೂಲಕ ಸ್ಯಾಂಡಲ್​ವುಡ್ ಪ್ರವೇಶಿಸಿದ್ದ ನಿರ್ದೇಶಕ ಪ್ರಶಾಂತ್​ ನೀಲ್, ಅದಾದ ಬಳಿಕ ‘ಕೆಜಿಎಫ್‘ ಚಿತ್ರದಿಂದ ನ್ಯಾಶನಲ್​ ಲೆವೆಲ್​ಗೆ ಸ್ಟಾರ್ ನಿರ್ದೇಶಕನ ಪಟ್ಟ ಗಿಟ್ಟಿಸಿಕೊಂಡರು. ಹೀಗಿರುವಾಗಲೇ ಕೆಜಿಎಫ್​ ಚಾಪ್ಟರ್ 2 ಚಿತ್ರದ ಕೆಲಸಗಳ ಜತೆಯಲ್ಲಿಯೇ ಬೇರೆ ಬೇರೆ ಸಿನಿಮಾಗಳಿಗೂ ಅವರು ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಶ್ರೀಮುರಳಿ ನಾಯಕತ್ವದ ‘ಮದಗಜ’ ಚಿತ್ರದಲ್ಲಿ ಒಂದಷ್ಟು ಬದಲಾವಣೆ ಮಾಡಿದ್ದರು ಪ್ರಶಾಂತ್. ಈಗ ಇನ್ನೊಂದು ಹೊಸ ಸಿನಿಮಾಕ್ಕೆ ಕೈ ಜೋಡಿಸಿದ್ದಾರೆ. ಅದುವೇ ‘ರೌಡಿ ಫೆಲೋ’.

    ಇದನ್ನೂ ಓದಿ: ದಸರಾದಲ್ಲಿ ಪತ್ತೇದಾರಿ ಸತೀಶ್

    ರಾಕ್​ಸ್ಟಾರ್ ರೋಹಿತ್​ ಅಂತಲೇ ಖ್ಯಾತಿ ಪಡೆದಿರುವ ಆರ್​ಜೆ ಆಗಿ, ನಟನಾಗಿ ಗುರುತಿಸಿಕೊಂಡಿದ್ದ ರೋಹಿತ್​, ‘ರೌಡಿ ಫೆಲೋ’ ಸಿನಿಮಾದಲ್ಲಿ ನಾಯಕನಾಗಿ ನಟಿಸಲಿದ್ದಾರೆ. ಅವರ ಜನ್ಮ ದಿನದ ಪ್ರಯುಕ್ತ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿಕೊಂಡಿದ್ದು, ರಗಡ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅಚ್ಚರಿ ಏನೆಂದರೆ, ನಾಯಕನಾಗಿ ನಟಿಸುವುದರ ಜತೆಗೆ ನಿರ್ದೇಶಕನಾಗಿಯೂ ರೋಹಿತ್​ ಕೆಲಸ ಮಾಡಲಿದ್ದಾರೆ.

    ಇದನ್ನೂ ಓದಿ: ಮ್ಯೂಸಿಕ್​ ಮಾಫಿಯಾ ಕರಾಳ ಸತ್ಯ ಬಿಚ್ಚಿಟ್ಟ ಸೋನು ನಿಗಂ

    ಈ ಮೊದಲು ಕರ್ವ ಮತ್ತು ಬಕಾಸುರ ಸಿನಿಮಾದಲ್ಲಿ ನಟಿಸಿದ್ದ ರೋಹಿತ್​ಗೆ ‘ರೌಡಿ ಫೆಲೋ’ ಮೂರನೇ ಸಿನಿಮಾ. ಈ ಚಿತ್ರದ ಕಥೆಗೆ ಪ್ರಶಾಂತ್​ ನೀಲ್​ ಕಡೆಯಿಂದ ಗ್ರೀನ್​ ಸಿಗ್ನಲ್​ ಸಿಕ್ಕಿದ್ದು, ಇನ್ನೇನು ಶೀಘ್ರದಲ್ಲಿ ಕೆಲಸಗಳನ್ನು ಆರಂಭಿಸುವ ತವಕದಲ್ಲಿದ್ದಾರೆ ರೋಹಿತ್​. ಈ ಹಿಂದೆ ಕರ್ವ, 6-5=2 ಮತ್ತು ದಿಯಾ ಸಿನಿಮಾ ನಿರ್ಮಾಣ ಮಾಡಿದ್ದ ಪದ್ಮಾವತಿ ಬ್ಯಾನರ್​ನಲ್ಲಿಯೇ ಈ ಸಿನಿಮಾ ಸಿದ್ಧವಾಗಲಿದೆ. ಒಂದಲ್ಲ ಎರಡಲ್ಲ ಖ್ಯಾತಿಯ ಲವಿತ್​ ಕುಮಾರ್ ಛಾಯಾಗ್ರಹಣ, ನಕುಲ್​ ಅಭಯಂಕರ್​ ಸಂಗೀತ ನೀಡಲಿದ್ದಾರೆ. ರವಿ ಬಸ್ರೂರು ಹಿನ್ನೆಲೆ ಸಂಗೀತ ಚಿತ್ರಕ್ಕಿರಲಿದೆ.

    ಸಲ್ಮಾನ್​ ಖಾನ್​ ‘ಬೀಯಿಂಗ್​ ಹ್ಯೂಮನ್​’ ಚಾರಿಟಿಯ ಅಸಲಿ ಮುಖ ಬಹಿರಂಗ!

    ಸುಶಾಂತ್ ಸಾವಿಗೆ ಇಸ್ರೇಲ್​ನಲ್ಲೂ ಕಂಬನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts