More

    ಜ್ಞಾನವಾಪಿಯಲ್ಲಿ ಸಿಕ್ಕ ಶಿವಲಿಂಗದ ಬಗ್ಗೆ ಈ ರೀತಿ ಹೇಳಿ ಬಂಧನಕ್ಕೊಳಗಾದ ಇತಿಹಾಸಕಾರ!

    ನವದೆಹಲಿ: ಜ್ಞಾನವಾಪಿ ಮಸೀದಿಯಲ್ಲಿ ದೊರೆತಿರುವ ಶಿವಲಿಂಗ ಪ್ರಕರಣ ಸದ್ಯ ನ್ಯಾಯಾಲಯದಲ್ಲಿದ್ದು, ಸದ್ಯ ಪ್ರಕರಣವನ್ನು ಸೂಕ್ಷ್ಮವಾಗಿ ಪರಿಗಣಿಸಿರುವ ಕೋರ್ಟ್​​ ಶಿವಲಿಂಗ ಪತ್ತೆಯಾದ ಜಾಗವನ್ನು ಸೀಲ್​ ಮಾಡುವಂತೆ ಆದೇಶಿಸಿದೆ.

    ಈ ಬಗ್ಗೆ ಹೇಳಿಕೆ ನೀಡುವ ಮೂಲಕ ದಿಲ್ಲಿ ವಿಶ್ವ ವಿದ್ಯಾಲಯದ ಪ್ರೊಫೆಸರ್​ ಭಗವಾನ್​ ಸಿಂಗ್​​, ಮಸೀದಿಯಲ್ಲಿ ದೊರೆತಿರುವ ಶಿವಲಿಂಗ ಗುಪ್ತ ಸಾಮ್ರಾಜ್ಯ ಕಾಲದಲ್ಲಿದ್ದ ದೇವಾಲಯಗಳ ಮಾದರಿಯಲ್ಲಿದ್ದು, ಇನ್ನು ಮಸೀದಿ ಆವಣರದಲ್ಲಿರುವ ಚಿಹ್ನೆಗಳು ಗುಪ್ತ ಸಾಮ್ರಾಜ್ಯದ ಕುರುಹುಗಳೇ ಆಗಿವೆ ಎಂದು ಹೇಳಿಕೆ ನೀಡಿದ್ದಾರೆ.

    ಅಲ್ಲದೇ ಜ್ಞಾನವಾಪಿ ಮಸೀದಿ ಸುತ್ತಮುತ್ತಲಿನ ಪ್ರದೇಶ ಗುಪ್ತರ ರಾಜಧಾನಿಯಾಗಿತ್ತು. ಪ್ರಸ್ತುತ ಸಂಗ್ರಹಾಲಯದಲ್ಲಿರುವ ಶಿವಲಿಂಗವನ್ನು ಹಲವು ವರ್ಷಗಳ ಹಿಂದೆ ಅನ್ವೇಷಿಸಲಾಗಿತ್ತು, ಸೌದಾಪುರ ಮತ್ತು ಅದರ ಅಕ್ಕಪಕ್ಕದ ಸ್ಥಳಗಳು ಗುಪ್ತ ಸಾಮ್ಯಾಜ್ಯದ ಆಡಳಿತಕ್ಕೆ ಒಳಪಟ್ಟಿದ್ದವು ಎಂದು ಅವರು ಹೇಳಿದ್ದಾರೆ.

    ಸದ್ಯ ಪತ್ತೆಯಾಗಿರುವ ಶಿವಲಿಂಗದ ವಿನ್ಯಾಸವನ್ನು ಗಮನಿಸಿದರೆ ಇದು ಯಾವ ಕಾಲದ್ದು ಎಂದು ಹೇಳಬಹುದು. ಇದೇ ರೀತಿಯ ಶಿವಲಿಂಗವನ್ನು ಹಡಪ್ಪ ಮತ್ತು ಮೆಹೆಂಜೋದಾರೋ ನಾಗರಿಕತೆಗಳಲ್ಲಿ ಸಹ ಕಂಡುಬಂದಿದ್ದವು ಎಂದು ಅವರು ವಾದಿಸಿದ್ದಾರೆ.

    ಸದ್ಯ ಅವರ ಈ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದ್ದು, ಶಿವಲಿಂಗ ಪತ್ತೆಯಾಗಿರುವುದು ಹಿಂದೂಗಳ ದೇವರು ಆಗಿದ್ದರೂ ಸಹ ಪ್ರಕರಣ ನ್ಯಾಯಾಲಯದಲ್ಲಿ ಇರುವ ಹಾಗೆ ಹೇಳಿಕೆ ನೀಡಿರುವುದರಿಂದ ಬಂಧನಕ್ಕೊಳಗಾಗಿದ್ದಾರೆ. (ಏಜೆನ್ಸೀಸ್​)

    ರಷ್ಯಾ-ಯೂಕ್ರೇನ್​​​​ ಯುದ್ಧದಿಂದ ಸೂರತ್​​ ಕಾರ್ಖಾನೆಯಲ್ಲಿ ವಜ್ರದ ಕೊರತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts