More

    ರಷ್ಯಾ-ಯೂಕ್ರೇನ್​​​​ ಯುದ್ಧದಿಂದ ಸೂರತ್​​ ಕಾರ್ಖಾನೆಯಲ್ಲಿ ವಜ್ರದ ಕೊರತೆ!

    ಸೂರತ್​​: ರಷ್ಯಾ-ಯೂಕ್ರೇನ್​ ಯುದ್ಧದಿಂದಾಗಿ ಜಾಗತಿಕ ವ್ಯಾಪಾರದ ಮೇಲೆ ಭಾರೀ ಪರಿಣಾಮ ಬೀರಿದ್ದು, ಇದಕ್ಕೆ ಭಾರತ ಕೂಡ ಹೊರತಾಗಿಲ್ಲ.

    ಗೃಹಬಳಕೆ ಎಣ್ಣೆ ಕೊರತೆ ಬಳಿಕ ಇದೀಗ ಮತ್ತೊಂದು ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ. ಡೈಮಂಡ್​ ಉತ್ಪನಕ್ಕೆ ಹೆಸರುವಾಸಿಯಾಗಿದ್ದ ಸೂರತ್​​ ಉದ್ಯಮದ ಮೇಲೆ ಭಾರೀ ಪರಿಣಾಮ ಬೀರಿದೆ.

    ಬಹುತೇಕ ಡೈಮಂಡ್​ ಪೂರೈಕೆಯಾಗುತ್ತಿದ್ದುದು ಯೂಕ್ರೇನ್​ನಿಂದಲೇ ಆದರೆ ಯುದ್ಧ ಪ್ರಾರಂಭವಾದಾಗಿನಿಂದ ವಜ್ರ ಪೂರೈಕೆಯೇ ನಿಂತುಬಿಟ್ಟಿದೆ. ಪ್ರತಿ ತಿಂಗಳು 1.75 ಲಕ್ಷ ಕ್ಯಾರೆಟ್​​ ವಜ್ರವನ್ನು ಯೂಕ್ರೇನ್​​ ನಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ ಇದಕ್ಕೆ ಈಗ ಕತ್ತರಿ ಬಿದ್ದಿದೆ. ಇದರಿಂದಾಗಿ ಭಾರೀ ನಷ್ಟ ಅನುಭವಿಸುತ್ತಿರವುದಾಗಿ ಜೆಮ್ಸ್​ ಜ್ಯೂವೆಲ್ಸ್​​ನ ಅಧ್ಯಕ್ಷ ದಿನೇಶ್​ ನವಾಡಿಯಾ ತಿಳಿಸಿದ್ದಾರೆ.

    ಕಚ್ಚಾ ವಜ್ರಗಳನ್ನು ಪಾಲಿಷಿಂಗ್​​​ ಹಾಗೂ ಕಟ್ಟಿಂಗ್​ ಮಾಡುವುದು ಸೂರತ್​​ ಹಾಗೂ ಮುಂಬೈ ಎರಡು ಸ್ಥಳಗಳಲ್ಲಿ ಮಾತ್ರ. ಹಾಗಾಗಿ ವಜ್ರ ಉದ್ಯಮಗಳು ಇಲ್ಲೇ ನೆಲೆಗೊಂಡಿವೆ. ವಜ್ರಗಳ ಕೊರತೆಯಿಂದಾಗಿ ವಜ್ರದ ಕಾರ್ಖಾನೆಗಳಲ್ಲಿ ವಾರದಲ್ಲಿ ನಾಲ್ಕು ದಿನಗಳಷ್ಟೇ ಕೆಲಸ ನಡೆಯುತ್ತಿದೆ ಎಂದು ಹೇಳಿದರು.

    ಪ್ರಸ್ತುತ ಶೇ.30 ರಿಂದ 25 ರಷ್ಟು ವಜ್ರಗಳ ಕೊರತೆ ಇದೆ. ಭಾರತದ ಮಾರುಕಟ್ಟೆಯಲ್ಲಿ ವಜ್ರಗಳ ಬೇಡಿಕೆ ಇದೆ. ಈ ಬಗ್ಗೆ ಗುಜರಾತ್​ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ವಜ್ರ ಪೂರೈಕೆಗೆ ಸಹಕರಿಸಬೇಕೆಂದು ಕೇಳಿಕೊಳ್ಳಲಾಗಿದೆ ಎಂದು ನವಾಡಿಯಾ ಹೇಳಿದ್ದಾರೆ. (ಏಜೆನ್ಸೀಸ್​)

    ಮತ್ತೆ ಸೈಕ್ಲೋನ್ ಆತಂಕ? ಆದರೆ, ರಾಜ್ಯಕ್ಕೆ ಇಲ್ಲ ಪರಿಣಾಮ

    ಮದುವೆಯ ಹಿಂದಿನ ದಿನವೇ ಮೃತಪಟ್ಟ ವೈದ್ಯ ವಧು: ಆಗಿದ್ದೇನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts