More

    ರಾಮಜನ್ಮಭೂಮೀಲಿ ಶಿವಲಿಂಗ ಪ್ರಕಟ!

    ಲಖನೌ: ಸುಪ್ರೀಂಕೋರ್ಟ್ ಆದೇಶದ ಬಳಿಕ ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಕಾರ್ಯ ಆರಂಭವಾಗಿರುವ ಬೆನ್ನಲ್ಲೇ ಭೂಗರ್ಭದಿಂದ ಶಿವಲಿಂಗ, ದೇವತೆಗಳ ವಿಗ್ರಹ ಹಾಗೂ ಮಂದಿರದ ಅವಶೇಷಗಳು ಮೇಲೆದ್ದಿವೆ. ಮೇ 11ರಿಂದ ಆರಂಭಿಕ ಹಂತದ ಭೂಮಿ ಸಮತಟ್ಟು ಕಾರ್ಯ ಭರದಿಂದ ನಡೆಯುತ್ತಿದ್ದು, ಮಣ್ಣಿನಲ್ಲಿ ಹುದುಗಿ ಹೋಗಿರುವ ಹಳೆಯ ಮಂದಿರದ ಗರ್ಭಗುಡಿ ಸುತ್ತಲಿನ ಪ್ರದೇಶವನ್ನೂ ಸ್ಚಚ್ಛಗೊಳಿಸಲಾಗುತ್ತಿದೆ.

    ಈ ವೇಳೆ ವಿಭಿನ್ನ ಕಲಾಕೃತಿಗಳು, ದೇವಿ-ದೇವತೆಗಳ ಮೂರ್ತಿಗಳು, ಹೂವು, ಕಲಶದ ಕೆತ್ತನೆಗಳು, ದೇವಾಲಯದ ಕಂಬ ಹಾಗೂ ಶಿವಲಿಂಗ ಪತ್ತೆಯಾಗಿರುವುದಾಗಿ ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮಾಹಿತಿ ನೀಡಿದ್ದಾರೆ. ಲಾಕ್​ಡೌನ್ ಹಿನ್ನೆಲೆಯಲ್ಲಿ ಸ್ಥಗಿತವಾಗಿದ್ದ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಉತ್ತರ ಪ್ರದೇಶ ಸರ್ಕಾರ ಅನುಮತಿ ನೀಡಿದ ಬಳಿಕ ಕಾರ್ವಿುಕರಿಗೆ ಮಾಸ್ಕ್, ಸಾಮಾಜಿಕ ಅಂತರದಂತಹ ಕಠಿಣ ನಿಯಮಗಳಿಗೊಳಪಡಿಸಿ ಕಾಮಗಾರಿ ಆರಂಭಿಸಲಾಗಿದೆ. ಸದ್ಯ ಎರಡು ಜೆಸಿಬಿ, ಒಂದು ಕ್ರೇನ್, ಎರಡು ಟ್ರಾ್ಯಕ್ಟರ್ ನೆರವಿನಿಂದ 10 ಜನ ಕಾರ್ವಿುಕರು ಕಾಮಗಾರಿಯಲ್ಲಿ ತೊಡಗಿದ್ದಾರೆ.

    ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಶುಭಸುದ್ದಿ: ಶೀಘ್ರವೇ ಏಕಕಾಲದಲ್ಲಿ 2 ಪದವಿ ವ್ಯಾಸಂಗ ಮಾಡುವ ಅವಕಾಶ ನಿಮ್ಮದಾಗಲಿದೆ…

    ಈವರೆಗೆ ಸಿಕ್ಕಿದ್ದೇನು?: ಭೂಮಿ ಸಮತಟ್ಟು ಕಾರ್ಯ ಆರಂಭಗೊಂಡ ಬಳಿಕ ದೇವತೆಗಳ ವಿಗ್ರಹ, ಹೂವು, ಬಾಗಿಲು, ಗೋಪುರದ ಕೆತ್ತನೆ, ವಿವಿಧ ರೀತಿಯ ಕಲಾಕೃತಿಗಳು, ಕಮಾನು ಕಲ್ಲುಗಳು, ಬ್ಲಾಕ್​ಟಚ್ ಕಲ್ಲಿನ 7 ಕಂಬಗಳು ಹಾಗೂ ರೆಡ್​ಸ್ಯಾಂಡ್ ಕಲ್ಲಿನ 8 ಕಂಬ, ಐದು ಅಡಿ ಎತ್ತರದ ಶಿವಲಿಂಗ ದೊರೆತಿವೆ. ಈ ಎಲ್ಲವನ್ನು ಸಂರಕ್ಷಿಸಿಡಲು ಮಂದಿರ ಟ್ರಸ್ಟ್ ಯೋಜನೆ ರೂಪಿಸುತ್ತಿದೆ.

    ರಾಮಲಲ್ಲಾ ಸ್ಥಳಾಂತರ: ಶೆಡ್ ಮಾದರಿಯ ಪುಟ್ಟ ದೇಗುಲದಲ್ಲಿದ್ದ ರಾಮಲಲ್ಲಾ ಮೂರ್ತಿಯನ್ನು ಭವ್ಯ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವವರೆಗೆ ಮಾನಸ್ ಭವನ್ ಬಳಿಯ ತಾತ್ಕಾಲಿಕ ದೇವಾಲಯಕ್ಕೆ ಸ್ಥಳಾಂತರಿಸಲಾಗಿದೆ.ಈ ದೇಗುಲ ಮಳೆ, ಬಿಸಿಲು ಸೇರಿ ಗುಂಡು ನಿರೋಧಕ ಸಾಮರ್ಥ್ಯ ಹೊಂದಿದೆ. ಸಿಎಂ ಯೋಗಿ ಆದಿತ್ಯನಾಥ್​ರ ಉಪಸ್ಥಿತಿಯಲ್ಲಿ ಕಳೆದ ಮಾರ್ಚ್ ನಲ್ಲೇ ಈ ಕಾರ್ಯ ನಡೆದಿದೆ.

    ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಶುಭಸುದ್ದಿ: ಶೀಘ್ರವೇ ಏಕಕಾಲದಲ್ಲಿ 2 ಪದವಿ ವ್ಯಾಸಂಗ ಮಾಡುವ ಅವಕಾಶ ನಿಮ್ಮದಾಗಲಿದೆ…

    ಐತಿಹಾಸಿಕ ತೀರ್ಪು: ಶತಮಾನಗಳಿಂದ ದೊಡ್ಡ ವ್ಯಾಜ್ಯವಾಗಿ ಪರಿಣಮಿಸಿದ್ದ ಅಯೋಧ್ಯೆ ರಾಮಮಂದಿರ, ಬಾಬ್ರಿ ಕಟ್ಟಡ ವಿವಾದಕ್ಕೆ ಸುಪ್ರೀಂಕೋರ್ಟ್ ನವೆಂಬರ್​ನಲ್ಲಿ ಐತಿಹಾಸಿಕ ತೀರ್ಪು ನೀಡಿ ಪೂರ್ಣ ವಿರಾಮ ಇಟ್ಟಿತು. ವಿವಾದಿತ 2.77 ಎಕರೆ ಭೂಮಿಯನ್ನು ಸಂಪೂರ್ಣವಾಗಿ ರಾಮ ಮಂದಿರ ನಿರ್ವಣಕ್ಕಾಗಿ ಕೇಂದ್ರ ಸರ್ಕಾರ ರಚಿಸುವ ಟ್ರಸ್ಟ್​ಗೆ ನೀಡಿ, ಮಸೀದಿ ನಿರ್ವಣಕ್ಕೆ ಅಯೋಧ್ಯೆ ಹೊರವಲಯದಲ್ಲಿ ಸುನ್ನಿ ವಕ್ಪ್ ಮಂಡಳಿಗೆ ಐದು ಎಕರೆ ಭೂಮಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಆದೇಶಿಸಿತ್ತು.

    ಶೀಘ್ರ ಭೂಮಿ ಪೂಜೆ: ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ನ ಮುಂದಿನ ಸಭೆಯಲ್ಲಿ, ಕರೊನಾ ಪರಿಸ್ಥಿತಿ ಅವಲೋಕಿಸಿದ ಬಳಿಕ ಭೂಮಿ ಪೂಜೆಗೆ ದಿನಾಂಕ ನಿಗದಿಪಡಿಸುವ ಸಾಧ್ಯತೆ ಇದೆ. ಈ ತಿಂಗಳ ಆರಂಭದಲ್ಲಿ ಅಯೋಧ್ಯೆ ಸ್ಥಳದ ಸುತ್ತಲೂ ಹಾಕಲಾಗಿದ್ದ ಕಬ್ಬಿಣದ ಬ್ಯಾರಿಕೇಡ್​ಗಳನ್ನು ತೆಗೆದುಹಾಕಲಾಗಿದೆ.

    ಇದನ್ನೂ ಓದಿ:  ಕಾಶ್ಮೀರದಲ್ಲೇ ಉಗ್ರ ನೆಲೆ ಸ್ಥಾಪಿಸಲು ಹವಣಿಸುತ್ತಿದೆ ಪಾಕ್​- ಟಿಆರ್​ಎಫ್​, ಟಿಎಂಐ, ಜಿಇಎಚ್​ಗಳು ಎಲ್​ಇಟಿ, ಜೆಇಎಂಗಳ ಹೊಸ ರೂಪ!!!

    ಇದೇ ಮೊದಲಲ್ಲ: 1992ರಲ್ಲಿ ಬಾಬ್ರಿ ಕಟ್ಟಡ ನೆಲಸಮಗೊಳಿಸುವುದಕ್ಕೂ ಮೊದಲೇ ಆ ಪ್ರದೇಶದಲ್ಲಿ ದೇವಾಲಯದ 14 ಕಂಬಗಳು ಪತ್ತೆಯಾಗಿದ್ದವು. ಅವುಗಳ ಕೆಳ ಭಾಗದಲ್ಲಿ ಕೆತ್ತಿದ ಪೂರ್ಣ ಕಲಶ ಕಲಾಕೃತಿಗಳಿದ್ದವು. ಪ್ರಾಚೀನ ಭಾರತೀಯ ದೇವಾಲಯದ ಕಲೆಯಲ್ಲಿ, ‘ಪೂರ್ಣ ಕಲಶ’ವನ್ನು ಸಮೃದ್ಧಿಯ ಎಂಟು ಶುಭ ಸಂಕೇತಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಅಯೋಧ್ಯೆ ಭೂವಿವಾದದ ಹಿನ್ನೆಲೆಯಲ್ಲಿ ಪುರಾತತ್ವ ಇಲಾಖೆ ವಿವಾದಿತ ಭೂಮಿಯಲ್ಲಿ ಹಲವು ಸಮೀಕ್ಷೆಗಳನ್ನು ನಡೆಸಿತ್ತು. ಭಾರತೀಯ ಪುರಾತತ್ವ ಇಲಾಖೆಯ ಪ್ರಾದೇಶಿಕ ಮಾಜಿ ನಿರ್ದೇಶಕ ಕೆ.ಕೆ. ಮೊಹಮ್ಮದ್ ಮಂದಿರ ಅಸ್ತಿತ್ವದಲ್ಲಿತ್ತು ಎನ್ನುವ ಬಗ್ಗೆ 2018ರಲ್ಲೇ ಮಾಹಿತಿ ನೀಡಿದ್ದರು. ಬಾಬ್ರಿ ಕಟ್ಟಡದ ಗೋಡೆಗಳಲ್ಲಿ ದೇವಾಲಯದ ಕಂಬಗಳನ್ನು ಹುದುಗಿಸಲಾಗಿದ್ದು, ಈ ಕಂಬಗಳನ್ನು ಬ್ಲಾ್ಯಕ್ ಬಸಾಲ್ಟ್ ಕಲ್ಲಿನಿಂದ ಕೆತ್ತಲಾಗಿತ್ತೆಂದು ಮೊಹಮ್ಮದ್ ಲೇಖನವೊಂದರಲ್ಲಿ ಬರೆದಿದ್ದರು.

    ಮಹಿಳೆಯರ ಮೇಲೆ ಖಾರಾಪುಡಿ ದಾಳಿ: ಸಿಕ್ಕದ ಸುಳಿವಿನ ಕಾರಣಕ್ಕೆ ಹೆಚ್ಚಿದ ನಿಗೂಢತೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts