More

    ಸ್ವಾಮಿತ್ವದ ಸಂಸ್ಕಾರ ನೀಡುವ ಶಿವಯೋಗ ಮಂದಿರ

    ಅಕ್ಕಿಆಲೂರ: ಹಾನಗಲ್ಲ ಕುಮಾರ ಶಿವಯೋಗಿಗಳು ಸ್ಥಾಪಿಸಿದ ಶಿವಯೋಗ ಮಂದಿರ ನಾಡಿನ ಮಠಗಳಿಗೆ ಪೀಠಾಧಿಪತಿಗಳಾಗಲು ಸ್ವಾಮಿತ್ವದ ಸಂಸ್ಕಾರ ನೀಡುತ್ತಿದೆ. ವಿರಕ್ತ ಪರಂಪರೆ ಸಾತ್ವಿಕ ಸಮಾಜಕ್ಕೆ ನಾಂದಿ ಹಾಡುತ್ತಿದೆ ಎಂದು ಹುಬ್ಬಳ್ಳಿ ಮೂರಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.

    ಸ್ಥಳೀಯ ಚನ್ನವೀರೇಶ್ವರ ವಿರಕ್ತಮಠದಲ್ಲಿ ಬುಧವಾರ ಷಟ್​ಸ್ಥಲ ಧ್ವಜಾರೋಹಣ ನೆರವೇರಿಸಿ ಲಿಂ. ಕುಮಾರೇಶ್ವರ ಮತ್ತು ಲಿಂ. ಚನ್ನವೀರ ಮಹಾಸ್ವಾಮಿಗಳ ಪುಣ್ಯಸ್ಮರಣೆ, ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ಆಯೋಜಿಸಿರುವ ಅಕ್ಕಿಆಲೂರ ಉತ್ಸವಕ್ಕೆ ಚಾಲನೆ ನೀಡಿ ಅವರು ಆಶಿರ್ವಚನ ನೀಡಿದರು.

    ಸಮಾಜ ಎಂಬ ವೃಕ್ಷಕ್ಕೆ ಬೆನ್ನೇರಿ ನಿಂತಿರುವ ಸಂತ ವರ್ಗ ಸದೃಢಗೊಳ್ಳಬೇಕು ಎಂಬ ಆಶಯದಿಂದ ಹಾನಗಲ್ಲ ಕುಮಾರ ಶಿವಯೋಗಿಗಳು ಶಿವಯೋಗ ಮಂದಿರ ಸ್ಥಾಪಿಸಿದರು. ಲಿಂ.ಚನ್ನವೀರ ಮತ್ತು ಲಿಂ. ಕುಮಾರ ಶಿವಯೋಗಿಗಳು ಕೇವಲ ಮಠಗಳಿಗೆ, ಧಾರ್ವಿುಕ ಕಾರ್ಯಕ್ಕೆ ಮಾತ್ರ ಸೀಮಿತವಾಗದೆ ಸಮಾಜದಲ್ಲಿನ ನ್ಯೂನತೆ ತೊಲಗಿಸಬೇಕೆಂಬ ಸಿದ್ಧಾಂತ ಹೊಂದಿದ್ದರು ಎಂದು ಶ್ಲಾಘಿಸಿದರು.

    ಬೆಳಗ್ಗೆ 6 ಗಂಟೆಗೆ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಮೂಜಗು ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ಶಾಂತಯ್ಯ ಮತ್ತು ಬಸಯ್ಯ ಶಾಸ್ತ್ರಿಗಳಿಂದ ವೇದ, ಸಂಸ್ಕೃತ ಮಂತ್ರಗಳು ಜರುಗಿದವು.

    ನಂತರ ವಿರಕ್ತಮಠದ ಆವರಣದ 1ರಿಂದ 7ನೇ ತರಗತಿವರೆಗಿನ ಗಂಗಪ್ಪ ಧಾರವಾಡ ಗ್ರಾಮೀಣ ಗುರುಕುಲ ಶಾಲೆಗೆ ಚನ್ನವೀರೇಶ್ವರ ಗ್ರಾಮೀಣ ಗುರುಕುಲ ಎಂದು ಮರುನಾಮಕರಣ ಮಾಡಲಾಯಿತು. ನೂತನ ಶುದ್ಧ ಕುಡಿಯುವ ನೀರಿನ ಘಟಕವನ್ನು ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಉದ್ಘಾಟಿಸಿದರು. ಶಿವಬಸವ ಸ್ವಾಮೀಜಿ ಮಾತನಾಡಿದರು.

    ಗ್ರಾಪಂ ಅಧ್ಯಕ್ಷೆ ಪಾರ್ವತಿ ಹರಿಜನ, ಉಪಾಧ್ಯಕ್ಷ ಶಿರಾಜ ಬಾಳೂರ, ಗಂಗಪ್ಪ ಸಾಲವಟಿಗಿ, ಸದಾನಂದ ಉಡುಪ, ಎನ್.ಸಿ. ಪಾವಲಿ, ಅಶೋಕ ಸಣ್ಣವೀರಪ್ಪನವರ, ಬಾಬಣ್ಣ ಮುತ್ತಿನಕಂತಿಮಠ, ಅಶೋಕ ವಿರಪಣ್ಣನವರ, ಸಿ.ಎಸ್. ಕಲ್ಲನಗೌಡ, ಜಯಣ್ಣ ಕೊಲ್ಲಾವರ, ಸಿದ್ಧಲಿಂಗೇಶ ತುಪ್ಪದ, ಕುಮಾರ ದೇಶಮುಖ, ಸದಾಶಿವ ಕಂಬಾಳಿ, ಪವನ ಜಾಬೀನ, ಚನ್ನಪ್ಪ ಪಾವಲಿ, ಅಕ್ಕನಬಳಗ, ಕದಳಿ ವೇದಿಕೆ, ಚೌಡೇಶ್ವರಿ ಮಹಿಳಾ ಸಂಘಟನೆಗಳ ಪದಾಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts