More

  ಅಸಮಾಧಾನ ಇರುವುದು ನಿಜ; ಮತದಾನಕ್ಕೆ ಗೈರು ಹಾಜರಾಗಿದ್ದಕ್ಕೆ ಕಾರಣ ಬಿಚ್ಚಿಟ್ಟ ಶಿವರಾಮ್​ ಹೆಬ್ಬಾರ್

  ಬೆಂಗಳೂರು: ಆರೋಗ್ಯದಲ್ಲಿ ಏರುಪೇರು ಉಂಟಾದ ಕಾರಣ ರಾಜ್ಯಸಭೆ ಚುನಾವಣೆ ಮತದಾನ ಮಾಡಲು ಸಾಧ್ಯವಾಗಲಿಲ್ಲ. ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಯಲ್ಲಿ ದಾಖಲಾಗಿದ್ದೆ ಎಂದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ್​ ಹೆಬ್ಬಾರ್ ಹೇಳಿದ್ದಾರೆ.

  ರಾಜ್ಯಸಭೆ ಚುನಾವಣೆ ಮತದಾನಕ್ಕೆ ಗೈರಾದ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಬ್ಬಾರ್, ಆರೋಗ್ಯ ಸ್ಥಿತಿ ಸ್ಥಿರವಾಗಲು ತಡವಾಯಿತು ಹೀಗಾಗಿ ಮತದಾನ ಮಾಡಲು ಸಾಧ್ಯವಾಗಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

  ಮಂಗಳವಾರ ಬೆಳಗ್ಗೆ ನನ್ನ ಆರೋಗ್ಯ ಸರಿ ಇರಲಿಲ್ಲ ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಾಗಿದ್ದೆ. ಮಧ್ಯಾಹ್ನದ ವೇಳೆ ಬಿಡುಗಡೆ ಮಾಡುವುದಾಗಿ ಹೇಳಿದರು. ಆದರೆ, ನನ್ನ ಆರೋಗ್ಯ ಸ್ಥಿರವಾಗಲು ತಡವಾಯಿತು. ಅಸಮಾಧಾನವಿದ್ದಿದ್ದರೇ ಅಡ್ಡ ಮತದಾನ ಮಾಡುವ ಅವಕಾಶ ಇತ್ತು. ನಾನು ಹಾಗೆ ಮಾಡಲಿಲ್ಲ.

  ಅಸಮಾಧಾನ ಇರುವುದು ನಿಜ; ಮತದಾನಕ್ಕೆ ಗೈರು ಹಾಜರಾಗಿದ್ದಕ್ಕೆ ಕಾರಣ ಬಿಚ್ಚಿಟ್ಟ ಶಿವರಾಮ್​ ಹೆಬ್ಬಾರ್

  ಇದನ್ನೂ ಓದಿ: ಹಿಮಾಚಲದಲ್ಲಿ ಕಾಂಗ್ರೆಸ್​ ಶಾಸಕರಿಂದ ಅಡ್ಡಮತದಾನ; ಸರ್ಕಾರ ಬಹುಮತ ಕಳೆದುಕೊಂಡಿದೆ ಎಂದ ಬಿಜೆಪಿ

  ಕಳೆದ ನಾಲ್ಕು ದಶಕದಿಂದ ರಾಜಕಾರಣದಲ್ಲಿ ಇದ್ದೇನೆ. ನಾನು ಯಾರಿಗೂ ಹೆದರಿ ಮತದಾನಕ್ಕೆ ಹೋಗಿಲ್ಲ. ನಾನು ಅಡ್ಡ ಮತದಾನ ಮಾಡಬಹುದಿತ್ತು, ಇಲ್ಲವೇ ಮತದಾನ ಮಾಡದೆಯೇ ಇರಬಹುದಿತ್ತು. ನಾನು ಯಾರಿಗೂ ವಾರ್ನಿಂಗ್ ಕೊಡಲು ಹೋಗಿಲ್ಲ. ನನಗೆ ಅಸಮಾಧಾನ ಇರುವುದು ನಿಜ. ಆದರೆ, ಅದು ಜಿಲ್ಲಾ ಮಟ್ಟದಲ್ಲಿ ಮಾತ್ರ.

  ಕೇಂದ್ರ ಮತ್ತು ರಾಜ್ಯದ ಮುಖಂಡರ ಮೇಲೆ ಅಸಮಾಧಾನ ಇಲ್ಲ. ಸಮಸ್ಯೆ ಇರುವುದು ಜಿಲ್ಲಾ ಮಟ್ಟದ ನಾಯಕರಿಂದ ಮಾತ್ರ. ಯಾರು ಅಡ್ಡಗಾಲು ಹಾಕುತ್ತಿದ್ದಾರೆ ಎಂಬುದಕ್ಕೆ ಕಾಲವೇ ಉತ್ತರ ಕೊಡಲಿದೆ. ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ವಿರೋಧಿ ಕೆಲಸ ಮಾಡಿದವರ ಮೇಲೆ ಶಿಸ್ತು ಕ್ರಮ ಜರುಗಿಸದ ಕಾರಣಕ್ಕೆ ಪಕ್ಷದ ಕೆಲ ಮುಖಂಡರ ಮೇಲೆ ಬೇಸರವಿದೆ. ಈಚೆಗೆ ಜಿಲ್ಲೆ, ತಾಲ್ಲೂಕು ಘಟಕಗಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ವಿಷಯದಲ್ಲಿಯೂ ನನ್ನನ್ನು ವಿಶ್ವಾಸಕ್ಕೆ ಪಡೆದಿಲ್ಲ ಎಂದು ಅಸಮಾಧಾನವನ್ನು ಶಿವರಾಮ್​ ಹೆಬ್ಬಾರ್ ಹೊರಹಾಕಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts