More

    ‘ಜೈಲರ್​’ ಜತೆಯಾದ ಶಿವಣ್ಣ; ಚಿತ್ರೀಕರಣದಲ್ಲಿ ಭಾಗಿ

    ಚೆನ್ನೈ: ರಜನಿಕಾಂತ್​ ಅಭಿನಯದ ‘ಜೈಲರ್​’ ಚಿತ್ರವು ಪ್ರಾರಂಭವಾಗಿ ಕೆಲವು ತಿಂಗಳುಗಳೇ ಆಗಿವೆ. ಈಗಾಗಲೇ ಶೇ. 40ರಷ್ಟು ಭಾಗದ ಚಿತ್ರೀಕರಣವೂ ಮುಗಿದಿದೆಯಂತೆ. ಆದರೆ, ಶಿವರಾಜಕುಮಾರ್​ ಯಾವಾಗಿನಿಂದ ಚಿತ್ರೀಕರಣದಲ್ಲಿ ಭಾಗವಹಿಸುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಆ ಕುತೂಹಲ ಕೊನೆಗೂ ತಣಿದಿದ್ದು, ಚಿತ್ರೀಕರಣದಲ್ಲಿ ಶಿವರಾಜಕುಮಾರ್​ ಭಾಗವಹಿಸಿರುವುದಷ್ಟೇ ಅಲ್ಲ, ಅವರ ಒಂದು ಫೋಟೋ ಸಹ ಬಿಡುಗಡೆಯಾಗಿದೆ.

    ಇದನ್ನೂ ಓದಿ: ತಮನ್ನಾ ಮದುವೆಯಂತೆ! ಅಭಿಮಾನಿಗಳಿಗೆ ಹುಡುಗನ ದರ್ಶನ ಮಾಡಿಸಿದ ನಟಿ

    ‘ಜೈಲರ್​’ ಚಿತ್ರದಲ್ಲಿ ಶಿವಣ್ಣ ನಟಿಸುತ್ತಾರೆ ಎಂಬುದು ಹಳೆಯ ಸುದ್ದಿ. ಈ ವಿಷಯವನ್ನು ಅವರು ಒಪ್ಪಿಕೊಂಡೇ ಆರು ತಿಂಗಳುಗಳಾಗಿವೆ. ಹಿಂದೊಮ್ಮೆ ಮಾಧ್ಯಮದವರೊಂದಿಗೆ ಮಾತಿಗೆ ಸಿಕ್ಕಾಗ, ಆಗಸ್ಟ್​ನಲ್ಲಿ ಚಿತ್ರೀಕರಣ ಎಂದು ಹೇಳಿದ್ದರು. ಕಾರಣಾಂತರಗಳಿಂದ ಅದು ಮುಂದಕ್ಕೆ ಹೋಗಿ, ಇದೀಗ ಚೆನ್ನೈನಲ್ಲಿ ಚಿತ್ರೀಕರಣ ಶುರುವಾಗಿದೆಯಂತೆ. ಗುರುವಾರ ಸೋಷಿಯಲ್​ ಮೀಡಿಯಾದಲ್ಲಿ ಮೂಲಕ ಅವರನ್ನು ಚಿತ್ರತಂಡಕ್ಕೆ ಬರಮಾಡಿಕೊಂಡಿರುವ ಸನ್​ ಪಿಕ್ಚರ್ಸ್​ ಸಂಸ್ಥೆಯು, ಅವರ ಒಂದು ಫೋಟೋವನ್ನು ಸಹ ಬಿಡುಗಡೆ ಮಾಡಿದೆ.

    ‘ಜೈಲರ್​’ ಚಿತ್ರವು ರಜನಿಕಾಂತ್​ ಅಭಿನಯದ 169ನೇ ಚಿತ್ರವಾಗಿದ್ದು, ಇದಕ್ಕೂ ಮುನ್ನ ಚಿತ್ರಕ್ಕೆ ‘ತಲೈವಾ 169′ ಎಂದು ಕರೆಯಲಾಗುತ್ತಿತ್ತು. ಕೆಲವು ದಿನಗಳ ಹಿಂದೆ ಚಿತ್ರಕ್ಕೆ “ಜೈಲರ್​’ ಎಂಬ ಹೆಸರಿಡಲಾಗಿದೆ ಎಂದು ಅಧಿಕೃತವಾಗಿ ಘೋಷಿಸಲಾಯ್ತು.

    ಈ ಚಿತ್ರದಲ್ಲಿ ರಜನಿಕಾಂತ್​ಗೆ ನಾಯಕಿಯಾಗಿ ಐಶ್ವಯಾ ರೈ ನಟಿಸುತ್ತಾರೆ ಎಂದು ಮೊದಲು ಹೇಳಲಾಯ್ತು. ಆ ನಂತರ ತಮನ್ನಾ ಭಾಟಿಯಾ ನಟಿಸಬಹುದು ಎಂಬ ಇನ್ನೊಂದು ಸುದ್ದಿ ಕೇಳಿ ಬಂತು. ಸದ್ಯಕ್ಕಂತೂ ಚಿತ್ರತಂಡದವರು ನಾಯಕಿ ಯಾರು ಎಂದು ಅಧಿಕೃತವಾಗಿ ಘೋಷಿಸಿಲ್ಲ.

    ಇದನ್ನೂ ಓದಿ: ಥಾಯ್​ ಭಾಷೆಗೆ ಡಬ್​ ಆದ ‘777 ಚಾರ್ಲಿ; ಡಿ.1ಕ್ಕೆ ಥಾಯ್ಲೆಂಡ್​ನಲ್ಲಿ ಬಿಡುಗಡೆ

    ‘ಜೈಲರ್​’ನಲ್ಲಿ ರಜನಿಕಾಂತ್​ ಜತೆಗೆ ರಮ್ಯಾ ಕೃಷ್ಣ, ಪ್ರಿಯಾಂಕಾ ಅರುಳ್​ ಮೋಹನ್​ ಮುಂತಾದವರು ನಟಿಸುತ್ತಿದ್ದು, ಶಿವರಾಜಕುಮಾರ್​ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ಸನ್​ ಪಿಕ್ಚರ್ಸ್​ ಸಂಸ್ಥೆಯು ನಿರ್ಮಿಸುತ್ತಿದ್ದು, ನೆಲ್ಸನ್​ ದಿಲೀಪ್​ ಕುಮಾರ್​ ನಿರ್ದೇಶನ ಮಾಡುತ್ತಿದ್ದಾರೆ.

    ಬಹುನಿರೀಕ್ಷೆಯ ‘ವಿಜಯಾನಂದ’ ಟ್ರೇಲರ್​ ಬಿಡುಗಡೆಗೆ ಇನ್ನು 1 ದಿನವಷ್ಟೇ ಬಾಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts