More

    ಬಹುನಿರೀಕ್ಷೆಯ ‘ವಿಜಯಾನಂದ’ ಟ್ರೇಲರ್​ ಬಿಡುಗಡೆಗೆ ಇನ್ನು 1 ದಿನವಷ್ಟೇ ಬಾಕಿ

    ಬೆಂಗಳೂರು: ವಿಆರ್​ಎಲ್​ (VRL) ಸಮೂಹ ಸಂಸ್ಥೆಗಳ ಚೇರ್ಮನ್​ ಪದ್ಮಶ್ರೀ ಡಾ. ವಿಜಯ ಸಂಕೇಶ್ವರ (Vijay Sankeshwar) ಅವರ ಬಯೋಪಿಕ್ (biopic)​ ಆದ ‘ವಿಜಯಾನಂದ’ ಚಿತ್ರದ ಡ್ಯುಯೆಟ್​ ಹಾಡು ಇತ್ತೀಚೆಗಷ್ಟೇ ಬಿಡುಗಡೆಯಾಗಿ ಸೂಪರ್​ ಹಿಟ್​ ಆಗಿದೆ. ಎರಡು ಕೋಟಿಗೂ ಹೆಚ್ಚು ವೀಕ್ಷಣೆಯಾಗಿರುವ ಈ ಹಾಡಿನ ನಂತರ ಇದೀಗ ಚಿತ್ರದ ಟ್ರೇಲರ್​ ಬಿಡುಗಡೆಗೆ ಸಜ್ಜಾಗಿದೆ.

    ‘ವಿಜಯಾನಂದ’ (Vijayanand movie) ಚಿತ್ರದ ಟ್ರೇಲರ್​​ ಬಿಡುಗಡೆಗೆ ಇನ್ನು ಕೇವಲ 1 ದಿನವಷ್ಟೇ ಇದ್ದು, ನ. 19ರಂದು ಸಂಜೆ ಒರಾಯನ್​ ಮಾಲ್​ನ ಪಿವಿಆರ್​ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ. ಯೂಟ್ಯೂಬ್​ನ ಆನಂದ್​ ಆಡಿಯೋ (Anand audio) ಚಾನಲ್​ನಲ್ಲಿ ಈ ಟ್ರೇಲರ್​ ಐದು ಭಾಷೆಗಳಲ್ಲಿ ಸಿಗಲಿದೆ.

    ‘ವಿಜಯಾನಂದ’ ಚಿತ್ರವು 1976ರಲ್ಲಿ ಒಂದು ಟ್ರಕ್​ನಿಂದ ಪ್ರಾರಂಭವಾಗಿ ಇಂದು ಭಾರತದ ಅತಿ ದೊಡ್ಡ ಲಾಜಿಸ್ಟಿಕ್ಸ್​ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವಿಆರ್​​ಎ​ಲ್​ ಸಂಸ್ಥೆಯ ಮಾಲೀಕರಾಗಿರುವ ವಿಜಯ ಸಂಕೇಶ್ವರ ಅವರ ಅದ್ಭುತ ಮತ್ತು ರೋಮಾಂಚನಕಾರಿ ಕಥೆಯಾಗಿದೆ. ಈ ಕಥೆಯು ವಿಜಯ ಸಂಕೇಶ್ವರ ಮತ್ತು ಅವರ ಮಗ ಡಾ. ಆನಂದ ಸಂಕೇಶ್ವರ ಅವರ ಯಶಸ್ಸಿನ ಪ್ರಯಾಣವನ್ನು ಒಳಗೊಂಡಿದೆ.

    ‘ವಿಜಯಾನಂದ’ ಚಿತ್ರವು ಕನ್ನಡ ಚಿತ್ರರಂಗದ ಅಫಿಷಿಯಲ್​ ಮತ್ತು ಕಮರ್ಷಿಯಲ್​ ಜೀವನಚರಿತ್ರೆಯಾಗಿದ್ದು, ಡಿ.9ರಂದು ಪ್ಯಾನ್​ ಇಂಡಿಯಾ ಚಿತ್ರವಾಗಿ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

    ವಿಆರ್​ಎಲ್​ ಪ್ರೊಡಕ್ಷನ್ಸ್​ನಡಿ ಡಾ. ಆನಂದ ಸಂಕೇಶ್ವರ (Anand Sankeshwar) ನಿರ್ಮಿಸುತ್ತಿರುವ ‘ವಿಜಯಾನಂದ’ ಚಿತ್ರದಲ್ಲಿ ನಿಹಾಲ್ ರಜಪೂತ್ (Nihal R)​​, ಡಾ. ವಿಜಯ ಸಂಕೇಶ್ವರ ಅವರ ಪಾತ್ರದಲ್ಲಿ ನಟಿಸಿದ್ದಾರೆ. ಅನಂತ್​ ನಾಗ್​, ರವಿಚಂದ್ರನ್​, ವಿನಯಾ ಪ್ರಸಾದ್​, ಸಿರಿ ಪ್ರಹ್ಲಾದ್​, ಪ್ರಕಾಶ್​ ಬೆಳವಾಡಿ, ಭರತ್​ ಬೋಪಣ್ಣ ಮುಂತಾದವರು ನಟಿಸಿದ್ದಾರೆ. ರಿಷಿಕಾ ಶರ್ಮ (Rishika sharma) ಚಿತ್ರಕಥೆ ರಚಿಸುವುದರ ಜತೆಗೆ ನಿರ್ದೇಶನ ಮಾಡಿದ್ದಾರೆ.

    ದಕ್ಷಿಣ ಭಾರತದ ಜನಪ್ರಿಯ ಸಂಗೀತ ನಿರ್ದೇಶಕರಾದ ಗೋಪಿ ಸುಂದರ್​ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.

    ಏಡ್ಸ್, ಕ್ಯಾನ್ಸರ್​ಗೆ ಸ್ವಮೂತ್ರಪಾನವೇ ಮದ್ದು! ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಪಠ್ಯ ಪುಸ್ತಕದಲ್ಲಿ ವಿವಾದಾತ್ಮಕ ವಿವರ

    ರಾಷ್ಟ್ರನಾಯಕರಿಗೆ ಗೌರವ ಸಮರ್ಪಣೆ ನಾಳೆ: ಸಂಸತ್​ನಲ್ಲಿ ಕೋಲಾರದ ಸ್ಫೂರ್ತಿ ಭಾಷಣ

    ಕುಕ್ಕೆಯಲ್ಲಿ ನ.20ರಂದು ಮಧ್ಯಾಹ್ನವರೆಗೆ ದೇವರ ದರ್ಶನವಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts