More

    ತಾಯಿಯ ಋಣ ತೀರಿಸುವ ಶಕ್ತಿ ಯಾರಿಗೂ ಇಲ್ಲ: ಸಭಾಪತಿ ಬಸವರಾಜ ಹೊರಟ್ಟಿ

    ಗದಗ : ಒಂಭತ್ತು ತಿಂಗಳು ತನ್ನ ಗರ್ಭದಲ್ಲಿರಿಸಿಕೊಂಡು ಜನ್ಮನೀಡುವ ತಾಯಿ ದೈವಿಕ ಶಕ್ತಿಯ ಪ್ರತಿರೂಪವಾಗಿದ್ದು, ಅವಳ ಋಣವನ್ನು ತೀರಿಸುವ ಶಕ್ತಿ ಜಗತ್ತಿನಲ್ಲಿ ಯಾರಿಗೂ ಇಲ್ಲ ಎಂದು ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ ನುಡಿದರು.
    ಅವರು ನಗರದ ತೋಂಟದಾರ್ಯ ಮಠದಲ್ಲಿ ದಿ.೨೫ ರಂದು ಸೋಮವಾರ ಲಿಂಗಾಯತ ಪ್ರಗತಿಶೀಲ ಸಂಘ ಹಾಗೂ ಅವ್ವ ಸೇವಾ ಟ್ರಸ್ಟ್ ಹುಬ್ಬಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಮಾತೋಶ್ರೀ ಗುರವ್ವ ಶಿವಲಿಂಗಪ್ಪ ಹೊರಟ್ಟಿ ಸ್ಮರಣಾರ್ಥ ಜರುಗಿದ ಅವ್ವನ ಕುರಿತ ವಿಶೇಷ ಶಿವಾನುಭವ' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಚಿಕ್ಕವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದರಿAದ ನನಗೆ ತಾಯಿಯೇ ಸರ್ವಸ್ವವಾಗಿದ್ದಳು. ನನ್ನ ವಿದ್ಯಾಭ್ಯಾಸಕ್ಕಾಗಿ ತನ್ನ ಆಭರಣಗಳನ್ನು ಮಾರಿ ಹಣ ನೀಡಿದ್ದು ಇನ್ನೂ ನೆನಪಿದೆ. ನಾನು ಹೈಸ್ಕೂಲು ಕಲಿಯಲು ತೆರಳಿದಾಗ ಪ್ರತಿ ತಿಂಗಳು ನಮ್ಮ ತಾಯಿಯೇ ಸ್ವತ: ಹೈನುಗಾರಿಕೆ ಮಾಡಿ ನನ್ನ ಶೈಕ್ಷಣಿಕ ಖರ್ಚು-ವೆಚ್ಚಗಳನ್ನು ಪೂರೈಸುತ್ತಿದ್ದಳು. ಶ್ರಮಜೀವಿಯಾಗಿದ್ದ ನಮ್ಮ ತಾಯಿ ಹೊಲದಲ್ಲಿ ಇಳಿ ವಯಸ್ಸಿನಲ್ಲೂ ಕೃಷಿ ಕಾಯಕದಲ್ಲಿ ತೊಡಗಿಸಿಕೊಳ್ಳುತ್ತಿದ್ದಳು. ನಾನು ವಿಧಾನ ಪರಿಷತ್ ಸದಸ್ಯನಾದ ಬಳಿಕ ಕುಮಾರಸ್ವಾಮಿ ಸರ್ಕಾರದಲ್ಲಿ ಶಿಕ್ಷಣ ಮಂತ್ರಿಯಾದಾಗ ಹೆಣ್ಣುಮಕ್ಕಳು ಪ್ರೌಢಶಿಕ್ಷಣದಿಂದ ವಂಚಿತರಾಗದAತೆ ಕ್ರಮ ವಹಿಸಿದೆ. ನನ್ನ ತಂಗಿ ಚಿಕ್ಕವಯಸ್ಸಿನಲ್ಲಿ ನಮ್ಮೂರಿನಲ್ಲಿ ಹೈಸ್ಕೂಲು ಇಲ್ಲದ ಕಾರಣ ಶಿಕ್ಷಣದಿಂದ ವಂಚಿತಳಾದಳು, ಈ ಘಟನೆ ನನ್ನ ಮನಸ್ಸಿನ ಮೇಲೆ ಪ್ರಭಾವ ಬೀರಿತ್ತು, ಕರ್ನಾಟಕದಲ್ಲಿ ಯಾವ ಬಾಲಕಿಯೂ ಸಹ ಹೈಸ್ಕೂಲ ಶಿಕ್ಷಣದಿಂದ ವಂಚಿತಳಾಗಬಾರದೆAಬ ಉದ್ದೇಶದಿಂದ ಸರ್ವೇ ಮಾಡಿಸಿ ೧೦೦೦ಕ್ಕೂ ಹೆಚ್ಚು ಹೈಸ್ಕೂಲುಗಳು ಹಾಗೂ ೬೦೦ ಜ್ಯೂನಿಯರ್ ಕಾಲೇಜುಗಳ ಸ್ಥಾಪನೆಗೆ ಅನುಮೋದನೆ ನೀಡಿದೆ. ವಿದ್ಯಾರ್ಥಿಗಳು ಸಕಾಲಕ್ಕೆ ಶಾಲೆ ತಲುಪಲಿ ಎಂಬ ಕಾರಣಕ್ಕೆ ಸೈಕಲ್ ನೀಡುವ ಪರಿಪಾಠ ಆರಂಭಿಸಿದೆವು. ನಮ್ಮ ಹುಟ್ಟೂರಾದ ಯಡಹಳ್ಳಿಯಲ್ಲಿ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಕೊಟ್ಯಾಂತರ ಬೆಲೆಬಾಳುವ ನಮ್ಮ ೭ಎಕರೆ ಜಮೀನಿನಲ್ಲೇ ಸರ್ಕಾರಿ ಶಾಲೆ-ಕಾಲೇಜನ್ನು ಆರಂಭಿಸಿದೆವು. ಅದಕ್ಕೆ ಸರಕಾರ ೩೦ಕೋಟಿಗೂ ಅಧಿಕ ಅನುದಾನ ಬಿಡುಗಡೆ ಮಾಡಿ ರಾಷ್ಟçಮಟ್ಟದ ಸಂಸ್ಥೆಯನ್ನಾಗಿ ರೂಪಿಸಿದೆ ಎಂದರು. ನಮ್ಮ ತಾಯಿ ಬಹಳ ಸರಳ ಸಂಸ್ಕಾರವAತೆ. ನಮ್ಮ ತಾಯಿಯ ನನ್ನನ್ನು ಸಾಕಲು ಆಕೆ ಪಟ್ಟ ಕಷ್ಟ ಮನಸ್ಸಿನಲ್ಲಿ ಹಚ್ಚಹಸಿರಾಗಿದೆ. ನನ್ನ ತಾಯಿಯ ಹೆಸರಿನಲ್ಲಿ ಸ್ಥಾಪನೆಯಾಗಿರುವಅವ್ವ’ ಸೇವಾ ಟ್ರಸ್ಟ್ ಉದ್ಘಾಟನೆ ಮಾಡಿದ್ದು ಲಿಂಗೈಕ್ಯ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು. ನಾನು ಜೀವನದಲ್ಲಿ ಅವರನ್ನು ಬಿಟ್ಟು ಯಾವುದೇ ಕಾರ್ಯಕ್ರಮ ಮಾಡಿಲ್ಲ. ಅವರ ಅಗಲಿಕೆಯಿಂದ ಸಾಕಷ್ಟು ನೋವುಂಟಾಗಿದೆ, ಈ ಪರಂಪರೆಯನ್ನು ಸಿದ್ಧರಾಮ ಶ್ರೀಗಳು ಮುಂದುವರೆಸಿರುವುದು ಸಮಾಧಾನ ತಂದಿದೆ ಎಂದರು. ಇತ್ತೀಚಿನ ದಿನಗಳಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು ತಂದೆ-ತಾಯಿಗಳ ಆರೈಕೆ ಮಾಡುವಂತೆ ಕರೆ ನೀಡಿದರು.
    ಇತ್ತೀಚೆಗೆ ಬೆಳಗಾವಿ ರುದ್ರಾಕ್ಷಿಮಠದಿಂದ ಕೊಡಮಾಡುವ ಸೇವಾರತ್ನ' ಪ್ರಶಸ್ತಿಗೆ ಭಾಜನರಾದ ತೋಂಟದಾರ್ಯ ಮಠದ ಆಡಳಿತಾಧಿಕಾರಿಗಳಾದ ಪ್ರೊ.ಶಿವಾನಂದ ಪಟ್ಟಣಶೆಟ್ಟರನ್ನು ಸನ್ಮಾನಿಸಲಾಯಿತು, ಸನ್ಮಾನೋತ್ತರವಾಗಿ ಅವರು ಮಾತನಾಡಿ, ಬಸವರಾಜ ಹೊರಟ್ಟಿಯವರಿಗೂ ಹಾಗೂ ಲಿಂಗೈಕ್ಯ ಸಿದ್ಧಲಿಂಗ ಶ್ರೀಗಳಿಗೂ ಅವಿನಾಭಾವ ಸಂಬAಧವಿತ್ತು. ಲಿಂಗೈಕ್ಯ ಗುರುಗಳು, ಬಸವರಾಜ ಹೊರಟ್ಟಿಯವರು ಹಾಗೂ ಇಂದಿನ ಸಿದ್ಧರಾಮ ಶ್ರೀಗಳ ನಡುವೆ ಅಪ್ತ ಬಾಂಧವ್ಯವಿದ್ದು, ಈ ಮೂವರು ಹಳೆ ಬಿಜಾಪೂರ ಜಿಲ್ಲೆಗೆ ಸೇರಿದವರು ಎನ್ನುವುದು ವಿಶೇಷ. ಗೋಕಾಕ ಚಳುವಳಿ, ಮೂರು ಸಾವಿರ ಮಠದ ಪ್ರಕರಣ ಹೀಗೆ ಅನೇಕ ಸಮಸ್ಯೆಗಳು ಬಂದಾಗ ಮಾನ್ಯ ಹೊರಟ್ಟಿಯವರು ಲಿಂಗೈಕ್ಯ ಗುರುಗಳಿಗೆ ನೆರವಾಗಿದ್ದರು. ಬಸವತತ್ವದಲ್ಲಿ ಹೊರಟ್ಟಿಯವರಿಗೆ ಇರುವ ನಂಬಿಕೆ ಪ್ರಶ್ನಾತೀತವಾಗಿದ್ದು, ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟಕ್ಕಾಗಿ ಜಾಗತಿಕ ಲಿಂಗಾಯತ ಮಹಾಸಭೆ ಸ್ಥಾಪನೆಯಾಗಿದ್ದರಿಂದ ಹೊರಟ್ಟಿಯವರ ಹಾಗೂ ಬಸವಾನುಯಾಯಿಗಳ ನಡುವಿನ ಬಾಂಧವ್ಯ ಬೆಳೆಯಲು ಕಾರಣವಾಯಿತು. ಅವರ ರಾಜಕೀಯ ಸಾಧನೆಗಳು ಕರ್ನಾಟಕದ ಪಾಲಿಗೆ ಮಹತ್ವದ ಮೈಲಿಗಲ್ಲಾಗಿದ್ದು, ಅವರ ಕುರಿತು ರಚಿತವಾದಹೋರಾಟದ ಹೊರಟ್ಟಿ’ ಎಂಬ ಪುಸ್ತಕ ಓದಿದರೆ ಶ್ರೀಯುತರ ದಿಟ್ಟ ಹೋರಾಟದ ಮಜಲುಗಳನ್ನು ತಿಳಿಯಬಹುದು. ಅವರು ಕಾನೂನು ವಿಶ್ವವಿದ್ಯಾಲಯ ಹಾಗೂ ಉತ್ತರ ಕರ್ನಾಟಕದ ಹೈಕೋರ್ಟ ಪೀಠಗಳ ಬೆಳವಣಿಗೆಗೆ ಸಾಕಷ್ಟು ಪರಿಶ್ರಮಿಸಿದ್ದಾರೆ. ೧೯೯೫ರಿಂದ ಇಚೆಗೆ ಆರಂಭವಾದ ಪ್ರಾಥಮಿಕ, ಪ್ರೌಢ, ಪದವಿಪೂರ್ವ, ಸಂಸ್ಕೃತ ಪಾಠಶಾಲೆ, ಕಲಾಮಂದಿರಗಳು ಸೇರಿದಂತೆ ಅನೇಕ ವಿದ್ಯಾಸಂಸ್ಥೆಗಳನ್ನು ಅನುದಾನಕ್ಕೆ ಒಳಪಡಿಸಿ ಶ್ರೀಯುತರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸುಮಾರು ೧ ಲಕ್ಷ ಜನರು ಸರ್ಕಾರಿ ಹಾಗೂ ಅನುದಾನಿತ ನೌಕರಿ ಪಡೆದುಕೊಳ್ಳಲು ಕಾರಣರಾಗಿದ್ದಾರೆ. ಇವರಂತೆ ಯಾವುದೇ ಸರ್ಕಾರದ ಶಿಕ್ಷಣ ಮಂತ್ರಿಗಳೂ ಇಷ್ಟು ಪ್ರಮಾಣದಲ್ಲಿ ಕೆಲಸ ಮಾಡಲು ಸಾಧ್ಯವಾಗಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಹೊರಟ್ಟಿಯವರು ಮಾಡಿದ ಸಾಧನೆ ಅಸಮಾನ್ಯವಾಗಿದ್ದು, ೮ ಸತ ಸತತವಾಗಿ ಚುನಾವಣೆಯಲ್ಲಿ ಎಂ.ಎಲ್.ಸಿಯಾಗಿ ಆಯ್ಕೆಯಾದ ಏಕೈಕ ವ್ಯಕ್ತಿಯಾಗಿರುವ ಶ್ರೀಯುತರು ತಮ್ಮ ಹತ್ತಿದ ಅಹವಾಲು ಹಿಡಿದು ಬಂದ ಯಾರ ಹಿನ್ನೆಲೆಯನ್ನೂ ವಿಚಾರಿಸದೇ ಅವರ ಆಶೋತ್ತರ ಈಡೇರಿಸುವುದು ಅವರ ದೊಡ್ಡಗುಣ. ನಮ್ಮ ಶಿಕ್ಷಣ ಸಂಸ್ಥೆಗಳಿಗೂ ಸಹಾಯ ಮಾಡಿದ್ದಾರೆ ಎಂದು ಸ್ಮರಿಸಿದರು. ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳ ಸಾನಿಧ್ಯವಹಿಸಿದ್ದರು. ಸಿದ್ಧಲಿಂಗನಗರದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಶ್ರೀಮತಿ ಸಂಜೀವಿನಿ ಕೂಲಗುಂಡಿ,ಅವ್ವ' ಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಶಶಿ ಸಾಲಿ,ಅವ್ವ’ ಸೇವಾ ಟ್ರಸ್ಟ್ ಗದಗ ಸಂಚಾಲಕ ಬಸವರಾಜ ಧಾರವಾಡ ಅತಿಥಿಗಳಾಗಿ ಭಾಗವಹಿಸಿದ್ದರು. ಸಾವಿತ್ರಿ ಲಮಾಣಿ ಸಂಗೀತ ಸೇವೆ ನೀಡಿದರು. ಗದುಗಿನ ಸ್ಪಂದನ ಕಿವುಡ ಹಾಗೂ ಮೂಗ ಮಕ್ಕಳ ಶಾಲೆಯ ವಿದ್ಯಾರ್ಥಿಗಳಿಗೆ ಬಟ್ಟೆ ಹಾಗೂ ಅವಶ್ಯಕ ಸಾಮಗ್ರಿ ವಿತರಿಸಲಾಯಿತು. ರಕ್ಷಿತಾ ಬಡಿಗೇರ ಧರ್ಮಗ್ರಂಥ ಪಠಿಸಿದರೆ ಸರಸ್ವತಿ ಹೊಸಮನಿ ವಚನ ಚಿಂತನಗೈದರು. ಹುಬ್ಬಳ್ಳಿ `ಅವ್ವ’ ಸೇವಾ ಟ್ರಸ್ಟ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ದಾಸೋಹ ಸೇವೆ ವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts