More

    ದಾಸೋಹ ಸಿದ್ಧಾಂತಗಳು ಶರಣರು ನೀಡಿದ ಕೊಡುಗೆಗಳು: ತೋಂಟದ ಸಿದ್ಧರಾಮ ಶ್ರೀಗಳು

    ವಿಜಯವಾಣಿ ಸುದ್ದಿಜಾಲ ಗದಗ
    ಬಸವಾದಿ ಶಿವಶರಣರು ಕಾಯಕ ಜೀವಿಗಳಾಗಿದ್ದರು. ಇಲ್ಲಿ ಯಾವುದೇ ಜಾತಿ, ಭೇದಗಳಿರಲಿಲ್ಲ. ಅವರು ತಮ್ಮ ಬದುಕಿನ ಮೂಲಕ ಸಮಾಜಕ್ಕೆ ಕಾಯಕ, ದಾಸೋಹ, ಸಮಾನತೆ ಸಿದ್ಧಾಂತಗಳನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
    ತೋಂಟದಾರ್ಯ ಮಠದಲ್ಲಿ ಇತ್ತೀಚೆಗೆ ಜರುಗಿದ ಲಿಂಗಾಯತ ಪ್ರಗತಿಶೀಲ ಸಂದ 2651ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಬಸವಾದಿ ಶಿವಶರಣರು ಕಾಯಕಕ್ಕೆ ಹೆಚ್ಚಿನ ಮಹತ್ವವನ್ನು ಕೊಟ್ಟಿದ್ದರು. ಪ್ರತಿಯೊಬ್ಬರು ಸಮಾನತೆಯಿಂದ ಬದುಕುತ್ತಿದ್ದರು. ಆ ಶರಣರ ಬದುಕು, ಸಾಧನೆ, ತತ್ತ್ವಾದರ್ಶಗಳು ಇವತ್ತಿಗೂ ಅನುಕರಣೀಯವಾಗಿವೆ ಎಂದು ಶ್ರೀಗಳು ಹೇಳಿದರು.
    ಪ್ರೊ. ಎಸ್​.ಎಸ್​. ಹರ್ಲಾಪೂರ ಉಪನ್ಯಾಸ ನೀಡಿ ಮಾತನಾಡಿದರು. ಶರಣ ಸಂಸತಿ ಎಂದೆಂದಿಗೂ ನಿತ್ಯ ಮತ್ತು ಸತ್ಯವಾಗಿದೆ. ಅಷ್ಟಾವರಣ, ಪಂಚಾಚಾರ, ಷಟಸ್ಥಲ್​, ಪ್ರಾಣ, ಆತ್ಮ ಸಿದ್ಧಾಂತಗಳನ್ನು ಅಳವಡಿಸಿಕೊಂಡು ನಿತ್ಯ ಬದುಕಿದವರು ಶರಣರು. ಪ್ರತಿಯೊಬ್ಬ ಶರಣರು ವಚನಗಳನ್ನು ರಚಿಸಿದ್ದಾರೆ. ಶರಣ ಸಂಸತಿ ಎಂದರೆ ಪರಿಶುದ್ಧವಾದ ನಡೆ, ನುಡಿ, ಸಿದ್ಧಾಂತವನ್ನು ಹೊಂದಿರುವ ಸಂಸತಿ ಎಂದು ತಿಳಿಸಿದರು.
    ರನ್ನ ಪ್ರಶಸ್ತಿ ಪುರಸತ ಪ್ರೊ. ಎಸ್​. ಎಸ್​. ಹರ್ಲಾಪೂರ, ಪಿಎಚ್​ಡಿ ಪದವಿ ಪಡೆದ ಡಾ. ನೇತ್ರಾವತಿ ಶಿವಲಿಂಗಪ್ಪ ಅಂಗಡಿ, ಸಿ.ಎ. ಪರೀೆಯಲ್ಲಿ ತೇರ್ಗಡೆ ಹೊಂದಿದ ಕಿರಣ ಮಾನೇದ, ಜೈಕಿಶನ್​ ಲೋಕನಾಥ ಕಬಾಡಿ, ವಿನಾಯಕ ಮೆಹರವಾಡೆ, ನಿಖಿಲ್​ ಹಬೀಬ ಹಲವರನ್ನು ಸನ್ಮಾನಿಸಲಾಯಿತು.
    ಸವಿತಾ ಗುಡ್ಡದ, ಮೃತ್ಯುಂಜಯ ಹಿರೇಮಠ, ಗುರುನಾಥ ಸುತಾರ, ಮಲ್ಲಿಕಾರ್ಜುನ ಇಟಗಿ, ಅಕ್ಕಿ ಕೊಟ್ರಪ್ಪ, ಶೇಖಣ್ಣ ಕಳಸಾಪೂರ, ರತ್ನಕ್ಕ ಪಾಟೀಲ, ಬಾಲಚಂದ್ರ ಭರಮಗೌಡರ, ರೇಣುಕಾ ಕರೇಗೌಡ್ರ, ಮಹೇಶ ಗಾಣಿಗೇರ, ವಿಜಯಕುಮಾರ ಹಿರೇಮಠ, ವಿರುಪಾಪ್ಪ ಅರಳಿ, ಅಶೋಕ ಹಾದಿ, ಸುರೇಶ ನಿಲೂಗಲ್​, ವಿವೇಕಾನಂದಗೌಡ ಪಾಟೀಲ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts