More

    ಕನ್ನಡ ಭಾಷೆ ಬಹಳ ಸಮೃದ್ಧವಾಗಿರುವ ಭಾಷೆ : ಸಿದ್ಧರಾಮ ಶ್ರೀಗಳು

    ವಿಜಯವಾಣಿ ಸುದ್ದಿಜಾಲ ಗದಗ
    ನಮ್ಮ ದೇಶದಲ್ಲಿ ನೂರಾರು ಭಾಷೆಗಳಿವೆ. ಸಾವಿರಾರು ಜಾತಿಗಳಿವೆ. ಕನ್ನಡ ಸಾಹಿತ್ಯವು ಭಾರತೀಯ ಸಾಹಿತ್ಯಗಳಲ್ಲಿ ಉತ್ಕಷ್ಟತೆಯನ್ನು ಮತ್ತು ವಿಶಿಷ್ಟತೆಯನ್ನು ಹೊಂದಿದೆ ಎಂದು ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
    ತೋಂಟದಾರ್ಯ ಮಠದಲ್ಲಿ ಏರ್ಪಡಿಸಿದ್ದ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಕನ್ನಡ ಭಾಷೆ ಬಹಳ ಸಮೃದ್ಧವಾಗಿರುವ ಭಾಷೆ. ಕನ್ನಡದ ಬಗ್ಗೆ ವಿಶೇಷ ಪ್ರೀತಿ, ಆದರ, ಅಭಿಮಾನವನ್ನು ಕನ್ನಡಿಗರು ಹೊಂದಬೇಕು. ಕರ್ನಾಟಕದಲ್ಲಿರುವ ಪ್ರತಿಯೊಬ್ಬರು ಕನ್ನಡವನ್ನು ಬಳಸಬೇಕು, ಬೆಳೆಸಬೇಕು, ಉಳಿಸಬೇಕು. ಕನ್ನಡದ ಸಾಹಿತಿಗಳಿಗೆ ಅತಿಹೆಚ್ಚು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ. ಕನ್ನಡ ಭಾಷೆಯ ಸಾಹಿತಿಗಳೆಲ್ಲರೂ ವೈಜ್ಞಾನಿಕತೆಗೆ, ವೈಚಾರಿಕತೆಗೆ, ಮನೋವೈಜ್ಞಾನಿಕತೆಗೆ ಬಹಳ ಹೆಸರುವಾಸಿಯಾಗಿದ್ದಾರೆ ಎಮದು ಶ್ರೀಗಳು ತಿಳಿಸಿದರು.
    “ಕನ್ನಡ, ಕರ್ನಾಟಕ, ಹಿಂದಣ ವಾಸ್ತವಗಳು, ಮುಂದಣ ಅಪೇೆಗಳು’ ಕುರಿತು ಡಾ. ಅಮರೇಶ ನುಗಡೋಣಿ ಉಪನ್ಯಾಸ ನೀಡಿ ಮಾತನಾಡಿ, ಮಠಮಾನ್ಯಗಳು ಕನ್ನಡ ಭಾಷೆ, ಸಂಸತಿ, ಸಾಹಿತ್ಯವನ್ನು ಉಳಿಸುವಲ್ಲಿ ಸಾಕಷ್ಟು ಶ್ರಮವಹಿಸುತ್ತಿವೆ. ಜಾಗತೀಕರಣದಲ್ಲಿ ಮಕ್ಕಳಿಗಿಂತಲೂ ಪಾಲಕರಿಗೆ ಇಂಗ್ಲೀಷ, ಹಿಂದಿ ಭಾಷೆಗಳ ವ್ಯಾಮೋಹ ಹೆಚ್ಚುತ್ತಿದೆ. ಪೋಷಕರು, ಶಿಕರು ಮಕ್ಕಳಿಗೆ ಕನ್ನಡವನ್ನು ಕಲಿಸಲು ಪ್ರಾಧಾನ್ಯತೆ ನೀಡಬೇಕು. ಬಾಳುವುದಕ್ಕೆ ಕನ್ನಡ ಕಲಿಯಲೇಬೇಕು. ಬದುಕುವುದಕ್ಕೆ ಇಂಗ್ಲೀಷ ಕಲಿತರೆ ಸಾಕು ಎಂದು ಅಭಿಪ್ರಾಯಪಟ್ಟರು.
    ಕಾರ್ಯಕ್ರಮದಲ್ಲಿ ಈಶ್ವರಪ್ಪ ಮುನವಳ್ಳಿ, ತಾತನಗೌಡ ಪಾಟೀಲ, ಶರಣಬಸಪ್ಪ ಗುಡಿಮನಿ, ಪ್ರಕಾಶ ಉಗಲಾಟದ, ರಾಜಣ್ಣ ಮಲ್ಲಾಡದ, ಸದಾಶಿವಯ್ಯ ಮದರಿಮಠ, ಅಶೋಕ ಪಾಟೀಲ ಇವರನ್ನು ಸನ್ಮಾನಿಸಲಾಯಿತು.
    ಗವಿಮಠದ ಡಾ. ಹಿರಿಶಾಂತವೀರ ಶ್ರೀಗಳು, ಬಸವಾನಂದ ಶ್ರೀಗಳು, ಶಿವಾನಂದ ಶ್ರೀಗಳು ಸಮ್ಮುಖ ವಹಿಸಿದ್ದರು. ಮಾಜಿ ಸಚಿವ ಎಸ್​. ಎಸ್​. ಪಾಟೀಲ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts