More

    ಸಾವರ್ಕರ್ ಫೋಟೋ ವಿವಾದ; ಅಂಗಡಿ-ಮುಂಗಟ್ಟು ಬಂದ್, ಸ್ತಬ್ಧವಾದ ಶಿವಮೊಗ್ಗ

    ಶಿವಮೊಗ್ಗ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಮಾರಂಭದ ಪ್ರಯುಕ್ತ ಮಾಲ್​ವೊಂದರಲ್ಲಿ ವಿನಾಯಕ ದಾಮೋದರ ಸಾವರ್ಕರ್ ಅವರ ಫೋಟೋ ಹಾಕಿದ್ದಕ್ಕೆ ಉಂಟಾದ ವಿವಾದದಿಂದ ಈಗ ಸಂಪೂರ್ಣ ನಗರವೇ ಸ್ತಬ್ಧವಾಗಿದೆ.

    ನಗರದ ಮಾಲ್​ವೊಂದರಲ್ಲಿ ಎಸ್​ಡಿಪಿಐ ಕಾರ್ಯಕರ್ತರು ಸಾವರ್ಕರ್ ಫೋಟೋ ಹಾಕಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ನಂತರ ಸಾವರ್ಕರ್​ ಅವರ ಫೋಟೋ ತೆಗೆದು ಆ ಜಾಗದಲ್ಲಿ ಟಿಪ್ಪು ಸುಲ್ತಾನ್​ ಫೋಟೋ ಇಡಲು ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಉಂಟಾಗಿದ್ದ ಘರ್ಷಣೆ ಇದೀಗ ಮತ್ತೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

    ಅಂಗಡಿ-ಮುಂಗಟ್ಟು ಬಂದ್: ಶಿವಮೊಗ್ಗದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾದ ಕೂಡಲೇ ಎಲ್ಲ ಅಂಗಡಿ ಮುಂಗಟ್ಟುಗಳು ಬಂದ್ ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನಗರ ವ್ಯಾಪ್ತಿಯ ಎಲ್ಲಾ ಮದ್ಯದಂಗಡಿಗಳನ್ನು ಪೊಲೀಸರು ಬಂದ್ ಮಾಡಿಸಿದ್ದಾರೆ. ನಗರದ ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ನೀಡಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿದೆ.

    ಇಬ್ಬರಿಗೆ ಚಾಕು ಇರಿತ: ಶಿವಮೊಗ್ಗದ ಅಮೀರ್​ ಅಹಮದ್​ ವೃತ್ತದಲ್ಲಿ ಭಾರಿ ಗಲಾಟೆ ನಡೆಯುತ್ತಿದ್ದು, ಇದಾಗಲೇ 22 ವರ್ಷದ ಪ್ರೇಮ್​ ಸಿಂಗ್​ ಎಂಬ ಯುವಕನನ್ನು ಮುಸ್ಲಿಂ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದಿದ್ದ. ಗಂಭೀರವಾಗಿ ಗಾಯಗೊಂಡಿರುವ ಪ್ರೇಮ್​ ಸಿಂಗ್​ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಇದರ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಕಿಡಿಗೇಡಿಗಳು ಮತ್ತೋರ್ವ ಹಿಂದೂ ಯುವಕನ ಮೇಲೆ ಹಲ್ಲೆ ಮಾಡಿ ಚಾಕು ಇರಿದಿದ್ದಾರೆ. ಅಶೋಕ‌ನಗರ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಪ್ರವೀಣ್ ಕುಮಾರ್ (27) ಎಂಬ ಯುವಕನಿಗೆ ಚಾಕು ಇರಿದಿದ್ದಾರೆ. ಅಂಗಡಿ ಬಾಗಿಲು ಮುಚ್ಚಿ ಮನೆಗೆ ಹೋಗುವ ಸಂದರ್ಭದಲ್ಲಿ ಚಾಕು ಇರಿಯಲಾಗಿದೆ. ಚಾಕು ಚುಚ್ಚಿ ಪರಾರಿಯಾಗಿದ್ದಾರೆ ದುಷ್ಕರ್ಮಿಗಳು. ಪ್ರವೀಣ್​ ಅವರನ್ನೂ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಇದಾಗಲೇ ಗಲಾಟೆಯ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದರೂ ಗಲಾಟೆ ಮುಂದುವರೆದಿದೆ. ಭಾರಿ ಗಲಾಟೆ ಹಿನ್ನೆಲೆಯಲ್ಲಿ ಗುಂಪು ಚದುರಿಸಲು ಪೊಲೀಸರು ಲಾಠಿ ಚಾರ್ಜ್​ ನಡೆಸಿದ್ದಾರೆ.

    ನಿಷೇಧಾಜ್ಞೆ ನಡುವೆಯೂ ಶಿವಮೊಗ್ಗದಲ್ಲಿ ನಿಲ್ಲದ ಹಿಂಸಾಚಾರ: ಮತ್ತೋರ್ವ ಹಿಂದೂ ಯುವಕನಿಗೆ ಚಾಕು ಇರಿತ

    ಮತ್ತೆ ಭುಗಿಲೆದ್ದ ಫೋಟೋ ವಿವಾದ: ಶಿವಮೊಗ್ಗದಲ್ಲಿ ಹಿಂದೂ ಯುವಕನಿಗೆ ಚಾಕು ಇರಿತ- ನಿಷೇಧಾಜ್ಞೆ ಜಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts