More

    ಗುಜರಾತ್ ಮಾದರಿ ಕಬ್ಬು ನೀತಿಗೆ ಒತ್ತಾಯಿಸಿ ಪ್ರತಿಭಟನೆ

    ಶಿವಮೊಗ್ಗ: ಗುಜರಾತ್ ಮಾದರಿಯಲ್ಲಿ ಕರ್ನಾಟಕದಲ್ಲೂ ಖಾಸಗಿ ಸಕ್ಕರೆ ಕಾರ್ಖಾನೆಗಳನ್ನು ರಾಜ್ಯ ಸರ್ಕಾರದ ವ್ಯಾಪ್ತಿಗೆ ಒಳಪಡಿಸಬೇಕು. ಆ ಮೂಲಕ ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಸರ್ಕಾರ ಮುಂದಾಗಬೇಕೆಂದು ಒತ್ತಾಯಿಸಿ ಜೆಡಿಯು ಕಾರ್ಯದರ್ಶಿ ಶಶಿಕುಮಾರ್ ಗೌಡ ನೇತೃತ್ವದಲ್ಲಿ ಶುಕ್ರವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
    ಗುಜರಾತ್‌ನಲ್ಲಿರುವ ಸರ್ಕಾರಿ ಸ್ವಾಮ್ಯದ ಸಕ್ಕರೆ ಕಾರ್ಖಾನೆಗಳು ರೈತರಿಂದ ಕಬ್ಬು ಖರೀದಿಸಿದ 15 ದಿನದೊಳಗೆ ಪ್ರತಿ ಟನ್ ಕಬ್ಬಿಗೆ ಸರ್ಕಾರ ನಿಗದಿಪಡಿಸಿರುವ ಹಣದ ಪೈಕಿ ಶೇ.82ರಷ್ಟನ್ನು ರೈತರ ಖಾತೆಗೆ ಜಮಾ ಮಾಡುತ್ತವೆ. ಕಬ್ಬು ಅರಿಯುವ ಹಂಗಾಮು ಮುಗಿದ ನಂತರ ಉಳಿದ ಹಣ ರೈತನ ಖಾತೆಗೆ ಸೇರುತ್ತದೆ. ಒಂದು ವೇಳೆ ಕಬ್ಬು ನೀಡಿದ ರೈತನಿಗೆ 15 ದಿನದೊಳಗೆ ಹಣ ಪಾವತಿಸಿದೇ ಇದ್ದರೆ ಅಲ್ಲಿನ ಕೃಷಿ ಇಲಾಖೆ ಹಣವನ್ನು ರೈತನಿಗೆ ಪಾವತಿ ಮಾಡಿ ನಂತರ ಕಾರ್ಖಾನೆಯಿಂದ ವಸೂಲಿ ಮಾಡುತ್ತದೆ ಎಂದು ತಿಳಿಸಿದರು.
    ರಾಜ್ಯದಲ್ಲಿ ಸುಮಾರು 16 ಲಕ್ಷ ಹೆಕ್ಟೆರ್‌ನಲ್ಲಿ ರೈತರು ಕಬ್ಬು ಬೆಳೆಯುತ್ತಿದ್ದಾರೆ. ಅದಕ್ಕೆ ಸೂಕ್ತ ಬೆಲೆ ಸಿಗದೇ ಸಂಕಷ್ಟ ಎದುರಿಸುತ್ತಿದ್ದಾರೆ. ಪ್ರಭಾವಿ ರಾಜಕಾರಣಿಗಳ ಒಡೆತನದ ಸಕ್ಕರೆ ಕಾರ್ಖಾನೆಗಳು ನೂರಾರು ಕೋಟಿ ರೂ. ಹಣವನ್ನು ರೈತರಿಗೆ ಪಾವತಿಸಬೇಕಿದೆ. ಹೀಗಾಗಿ ನಮ್ಮಲ್ಲೂ ಗುಜರಾತ್ ಮಾದರಿ ಅನುಸರಿಸಿದರೆ ಕಬ್ಬು ಬೆಳೆಗರರಿಗೆ ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
    ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಜಿಲ್ಲಾಧ್ಯಕ್ಷ ಎಸ್.ಕೆ.ಪ್ರಭು, ಕಾರ್ಯದರ್ಶಿ ರವಿ, ಕೆಆರ್‌ಎಸ್ ಪಕ್ಷದ ಯುವ ಘಟಕದ ಜಿಲ್ಲಾಧ್ಯಕ್ಷ ಮಧು, ರೈತ ಘಟಕದ ಜಿಲ್ಲಾಧ್ಯಕ್ಷ ಶರತ್, ಅಯಾಜ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts