More

    ಶಿವಮೊಗ್ಗದಲ್ಲಿ ಗಮನಸೆಳೆದ ವಸ್ತು ಪ್ರದರ್ಶನ

    ಶಿವಮೊಗ್ಗ: ನಗರದ ಡಿವಿಎಸ್‌ನ 700ಕ್ಕೂ ಹೆಚ್ಚು ವಿದ್ಯಾರ್ಥಿಗಳು 15 ವಿಷಯಗಳಲ್ಲಿ 250ಕ್ಕೂ ಹೆಚ್ಚು ಮಾದರಿಗಳನ್ನು ಸಿದ್ಧಪಡಿಸಿ ಪ್ರದರ್ಶಿಸುವ ಮೂಲಕ ಗಮನಸೆಳೆದರು. ರಾಬರ್ಟ್ ಬೆಡಗಿ ನಟಿ ಆಶಾ ಭಟ್ ಈ ವಸ್ತು ಪ್ರದರ್ಶನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
    ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪ್ರಥಮ ವರ್ಷದ ಪಠ್ಯದಲ್ಲಿರುವ ವಿಷಯಗಳನ್ನು ಆಧರಿಸಿ ಮಾಧರಿಗಳನ್ನು ಸಿದ್ಧಪಡಿಸಲಾಗಿತ್ತು. ವಿಜ್ಞಾನ, ಗಣಿತ, ಇತಿಹಾಸ, ಜೀವಶಾಸ್ತ್ರ, ಭೂಗೋಳ ಮಾತ್ರವಲ್ಲದೇ ಉರ್ದು, ಕನ್ನಡ, ಹಿಂದಿ, ಸಂಸ್ಕೃತ ಭಾಷೆಗಳಿಗೆ ಸಂಬಂಧಿಸಿದಂತೆಯೂ ಮಾದರಿಗಳನ್ನು ಪ್ರದರ್ಶಿಸಿದ್ದು ವಿಶೇಷವಾಗಿತ್ತು.
    ವಿದ್ಯುತ್ ಉತ್ಪಾದನೆಗೆ ಸಂಬಂಧಿಸಿದಂತೆ ಎನರ್ಜಿ ಹಾರ್ವೆಸ್ಟಿಂಗ್ ಟೆಕ್ನಾಲಜೀಸ್ ಶೀರ್ಷಿಕೆಯಡಿ ಗಾಳಿಯಿಂದ, ಸಮುದ್ರದ ಅಲೆಗಳಿಂದ, ಹರಿಯುವ ನೀರಿನಿಂದ, ಚಲಿಸುತ್ತಿರುವ ವಾಹನಗಳ ಗಾಳಿಯಿಂದ, ಭೂಗರ್ಭದ ಅಂತರಾಳದಿಂದ ಬರುವ ಬಿಸಿ ಗಾಳಿಯ ಒತ್ತಡದಿಂದ ರಸ್ತೆಯ ಹಂಪುಗಳಿಂದಲೂ ಹೇಗೆ ವಿದ್ಯುತ್ ಉತ್ಪಾದಿಸಬಹುದು ಎಂಬ ಕೌತುಕದ ವಿಷಯಗಳ ಮಾದರಿಯನ್ನು ಪ್ರದರ್ಶಿಸಿದ ವಿದ್ಯಾರ್ಥಿಗಳು ಮೆಚ್ಚುಗೆಗೆ ಪಾತ್ರರಾದರು.
    ದೂರದರ್ಶಕಗಳ ಮೂಲಕ ಸೌರಮಂಡಲದ ಗ್ರಹಗಳ ನೇರ ವೀಕ್ಷಣೆ, ಗಣಿತ ಶಾಸ್ತ್ರಕ್ಕೆ ಸಂಬಂಧಪಟ್ಟ ಮಾದರಿಗಳು, ಮಣ್ಣಿನ ಸವಕಳಿ ತಡೆಗಟ್ಟುವ ರೀತಿ, ಇತಿಹಾಸದ ಘಟನೆಗಳು, ಅರ್ಥಶಾಸಕ್ಕೆ ಸಂಬಂಧಿಸಿದ ವಿಷಯಗಳ ಮಾದರಿಗಳು ವಿಶೇಷ ಎನಿಸಿದವು.
    ಸುಸಜ್ಜಿತ ನಗರಗಳ ಮಾದರಿ, ಅಂಚೆ ಚೀಟಿ, ನಾಣ್ಯಗಳ ಪ್ರದರ್ಶನ, ಚುನಾವಣೆ ವ್ಯವಸ್ಥೆಯನ್ನು ವಿವರಿಸುವ ಮಾದರಿಗಳು, ಸೋಲಾರ್ ಶಕ್ತಿಯ ಮೂಲಕ ಸ್ಮಾಟ್ ಸಿಟಿಗಳ ದೈನಂದಿನ ಚಟುವಟಿಕೆ ನಡೆಸುವುದು, ಜಿಎಸ್‌ಟಿ ಮಾದರಿ, ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಕಾರ್ಯನಿರ್ವಹಿಸುವ ಬಗ್ಗೆಗಳನ್ನು ವಿಶಿಷ್ಟವಾಗಿ ಪರಿಚಯಿಸಲಾಗಿತ್ತು.

     

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts