ಶಿವಾಜಿ ಸುರತ್ಕಲ್ 2.0 ಫೆಬ್ರವರಿಯಲ್ಲಿ ಚಾಲನೆ

Shivaji Suratkal
Published on

ಬೆಂಗಳೂರು: ರಮೇಶ್ ಅರವಿಂದ್ ಅಭಿನಯದ ‘ಶಿವಾಜಿ ಸುರತ್ಕಲ್’ ಚಿತ್ರದ ಬಿಡುಗಡೆಗೆ ಮುಂಚೆಯೇ, ಆ ಚಿತ್ರದ ಮುಂದುವರಿದ ಭಾಗ ಮಾಡಬಹುದು ಎಂದು ನಿರ್ದೇಶಕ ಆಕಾಶ್ ಶ್ರೀವತ್ಸ ಹೇಳಿದ್ದರು. ಇದೊಬ್ಬ ಪೊಲೀಸ್ ಪತ್ತೇದಾರಿಯ ಸಾಹಸದ ಕಥೆಯಾದ್ದರಿಂದ, ಎಷ್ಟು ಭಾಗಗಳಲ್ಲಿ ಬೇಕಾದರೂ ಚಿತ್ರ ಮಾಡಬಹುದು ಎಂದಿದ್ದರು.

ದರಂತೆ ಇದೀಗ ಶಿವಾಜಿ ಸುರತ್ಕಲ್​ನ ಇನ್ನೊಂದು ಸಾಹಸವನ್ನು ತೆರೆಯ ಮೇಲೆ ತರುವುದಕ್ಕೆ ಅವರು ಸಿದ್ಧತೆ ನಡೆಸಿದ್ದಾರೆ. ಎಲ್ಲ ಅಂದುಕೊಂಡಂತೆ ಆದರೆ, ಫೆಬ್ರವರಿಯಲ್ಲಿ ಚಿತ್ರದ ಅಧಿಕೃತ ಘೋಷಣೆಯಾಗುವ ಸಾಧ್ಯತೆ ಇದೆ. ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ಆಕಾಶ್, ‘ಕಥೆ ಅಂತಿಮವಾಗಿದೆ. ಚಿತ್ರಕಥೆ ಬರೆಯುತ್ತಿದ್ದು, ಇನ್ನು 10 ದಿನಗಳಲ್ಲಿ ಆ ಕೆಲಸ ಮುಗಿಯಲಿದೆ.

ಇದು ನಿಜಕ್ಕೂ ಮೊದಲ ಚಿತ್ರಕ್ಕಿಂತ ಇನ್ನೊಂದು ಲೆವೆಲ್ ಹೆಚ್ಚಿರುತ್ತದೆ. ಕಳೆದ ಒಂದು ವರ್ಷದಿಂದ ಈ ಕಥೆ ಮಾಡುತ್ತಿದ್ದೇವೆ. ಲಾಕ್​ಡೌನ್ ಸಮಯದಲ್ಲೂ ವಿಡಿಯೋ ಕಾಲ್ ಮೂಲಕ ಸಾಕಷ್ಟು ಚರ್ಚೆ ಮಾಡಿದ್ದೇವೆ. ‘ರಣಗಿರಿ ರಹಸ್ಯ’ ತರಹ ಇಲ್ಲಿ ಒಂದೇ ಕಥೆ ಇರುವುದಿಲ್ಲ. ಕಥೆಗಳು ಇಂಟರ್​ಲಿಂಕ್ ಆಗಿರುತ್ತವೆ. ಪ್ರೇಕ್ಷಕರಿಗೆ ನಿಜಕ್ಕೂ ವಿಭಿನ್ನ ಅನುಭವ ಕೊಡಲಿದೆ’ ಎನ್ನುತ್ತಾರೆ. ಸದ್ಯಕ್ಕೆ ‘ಶಿವಾಜಿ ಸುರತ್ಕಲ್ 2’ ಹೆಸರಿನಲ್ಲಿ ಕೆಲಸಗಳು ಶುರುವಾಗಿದ್ದು, ಮುಂದಿನ ತಿಂಗಳು ಸ್ಪಷ್ಟ ಚಿತ್ರಣ ಸಿಗಲಿದೆಯಂತೆ. ‘ರಣಗಿರಿ ರಹಸ್ಯ’ ಚಿತ್ರ ನಿರ್ವಿುಸಿದ್ದ ರೇಖಾ ಮತ್ತು ಅನೂಪ್ ಗೌಡ ನಿರ್ವಿುಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net