More

    ಕರೊನಾ ನಿರ್ಬಂಧಗಳ ನಡುವೆಯೇ ಆಚರಿಸಲಾದ ಛತ್ರಪತಿ ಶಿವಾಜಿ ಜಯಂತಿ

    ಮುಂಬೈ: ಮಹಾರಾಷ್ಟ್ರದ ವಿವಿಧೆಡೆ ವಿಧಿಸಲಾಗಿರುವ ಕರೊನಾ ನಿರ್ಬಂಧಗಳ ನಡುವೆಯೇ, ಶುಕ್ರವಾರ(ಫೆಬ್ರವರಿ 19) ಸಲ್ಲುವ ಛತ್ರಪತಿ ಶಿವಾಜಿ ಜಯಂತಿಯನ್ನು ವಿವಿಧ ರೀತಿಯಲ್ಲಿ ಆಚರಿಸಲಾಯಿತು. “ಶಿವಾಜಿ ಮಹರಾಜ್ ಕಿ ಜೈ”, “ಜೈ ಶಿವಾಜಿ ಜೈ ಭವಾನಿ” ಘೋಷಣೆಗಳೊಂದಿಗೆ ಪಟ್ಟಣ ಮತ್ತು ಗ್ರಾಮ ಮಟ್ಟದಲ್ಲಿ ಹಲವಾರು ಉತ್ಸವಗಳನ್ನೂ ನಡೆಸಲಾಯಿತು. ಬಹುತೇಕ ಪಟ್ಟಣ ಮತ್ತು ಗ್ರಾಮಗಳಲ್ಲಿ ಮಹಾರಾಷ್ಟ್ರ ಕ್ರಾಂತಿ ಮೋರ್ಚಾ, ರೈತ ಕ್ರಾಂತಿ ಪಾರ್ಟಿ ಮತ್ತು ರಾಜಕೀಯ ಪಕ್ಷಗಳು ಸೇರಿದಂತೆ ವಿವಿಧ ಸಂಘಟನೆಗಳು ಮೆರವಣಿಗೆ ಮತ್ತು ಉತ್ಸವಗಳನ್ನು ಹಮ್ಮಿಕೊಂಡಿದ್ದವು.

    ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮತ್ತು ಡೆಪ್ಯೂಟಿ ಸಿಎಂ ಅಜಿತ್ ಪವಾರ್ ಪ್ರತಿವರ್ಷ ಶಿವಾಜಿ ಜನ್ಮದಿನೋತ್ಸವ ನಡೆಯುವ ರಾಯಗಡದ ಶಿವನೇರಿ ಕೋಟೆಗೆ ಭೇಟಿ ನೀಡಿದರು. ಜಿಲ್ಲೆಯಲ್ಲಿ ನೂರು ಜನಕ್ಕಿಂತ ಹೆಚ್ಚು ಜನ ಸೇರದಂತೆ ನಿರ್ಬಂಧ ವಿಧಿಸಲಾಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯ ನಿಯೋಜನೆಯ ನಡುವೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಉದ್ಧವ್​ ಠಾಕ್ರೆ, ಛತ್ರಪತಿ ಶಿವಾಜಿ ಅವರ ಜೀವನ ಮತ್ತು ಆಡಳಿತದಿಂದ ನಾವು ಪ್ರೇರಣೆ ಪಡೆಯುತ್ತೇವೆ. ಅವರ ಮಹತ್ವ ಕೇವಲ ಒಂದು ದಿನಕ್ಕೆ ಸೀಮಿತವಾದುದಲ್ಲ, ಬದಲಿಗೆ ದಿನನಿತ್ಯವೂ ಅಳವಡಿಸಿಕೊಳ್ಳುವಂಥದ್ದು ಎಂದಿದ್ದಾರೆ.

    ಇದನ್ನೂ ಓದಿ: ಮತ್ತೆ ಹಬ್ಬುತ್ತಿದೆ ಕರೊನಾ… ಮತ್ತೊಬ್ಬ ಸಚಿವರಲ್ಲಿ ಕರೊನಾ ಸೋಂಕು ಪತ್ತೆ !

    ರಾಜ್ಯದಲ್ಲಿ ಕರೊನಾ ಪ್ರಕರಣ ಹೆಚ್ಚಿದ ಹಿನ್ನೆಲೆಯಲ್ಲಿ ಹಲವೆಡೆ ವಿಧಿಸಿರುವ ನಿರ್ಬಂಧಗಳ ಬಗ್ಗೆ ವಿರೋಧ ಪಕ್ಷದ ನಾಯಕ ದೇವೆಂದ್ರ ಫಡ್ನವೀಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಡಳಿತ ಪಕ್ಷವು ರಾಜಕೀಯ ಮೆರವಣಿಗೆಗಳನ್ನು ಎಲ್ಲಾ ಕಡೆ ನಡೆಸಿತು. ಅದಕ್ಕೆ ನಿರ್ಬಂಧಗಳನ್ನು ಹೇರಲಿಲ್ಲ. ಆದರೆ ಜನಸಾಮಾನ್ಯರು ಆಚರಿಸುವ ಶಿವಾಜಿ ಜಯಂತಿಯ ವಿಷಯ ಬಂದಾಗ ಸರ್ಕಾರ ನಿರ್ಬಂಧಗಳನ್ನು ಹೇರಿದೆ ಎಂದಿದ್ದಾರೆ.

    ಈ ನಡುವೆ ಔರಂಗಾಬಾದ್​ನಲ್ಲಿ ಆರ್.ಆರ್.ಪಾಟೀಲ್ ಫೌಂಡೇಶನ್ ವತಿಯಿಂದ ಕರೊನಾ ಹಿನ್ನೆಲೆಯಲ್ಲಿ ವಿನೂತನವಾಗಿ ಶಿವಾಜಿ ಜಯಂತಿ ಆಚರಿಸಲಾಯಿತು. ಜಿಲ್ಲೆಯ ವಿವಿಧೆಡೆ ಇರುವ 60 ಶಿವಾಜಿ ಪ್ರತಿಮೆಗಳಿಗೆ ಫೌಂಡೇಶನ್ ನಾಯಕ ವಿನೋದ್ ಪಾಟೀಲ್ ಗುಲಾಬಿ ಹೂವುಗಳ ಎಸಳುಗಳನ್ನು ಹೆಲಿಕಾಪ್ಟರ್​ನಿಂದ ಚೆಲ್ಲಿ ಸಂಭ್ರಮಿಸಿದರು.(ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

     

    ಕರೊನಾ ನಿವಾರಣೆಗೆ ಪಣತೊಟ್ಟ ಸರ್ಕಾರ… ಲಸಿಕೆ ನಿರಾಕರಿಸಿದವರಿಗೆ ಶಿಕ್ಷೆ !

     

    ರಾಜಕಾರಣಿಗಳ, ಪೊಲೀಸ್ ಅಧಿಕಾರಿಗಳ ನಕಲಿ ಖಾತೆ ಮಾಡಿದ್ದ, ಹಣ ಪಡೆಯುತ್ತಿದ್ದ !

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts