More

    VIDEO| ಸಾಮಾಜಿಕ ಜಾಲತಾಣದಲ್ಲಿ ಸಿಎಂ ಉದ್ಧವ್​ ಠಾಕ್ರೆ ಟೀಕಿಸಿದ್ದಕ್ಕೆ ಸರ್ಕಾರಿ ನೌಕರನಿಗೆ ಇದೆಂಥಾ ಶಿಕ್ಷೆ?

    ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ವಿರುದ್ಧ ಪೋಸ್ಟ್​ ಮಾಡಲಾಗಿದೆ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬನ ಮೇಲೆ ಶಿವಸೇನಾ ಮಹಿಳಾ ಕಾರ್ಯಕರ್ತೆಯೊಬ್ಬಳು ಇಂಕ್​ ಸುರಿದು ಅಮಾನವೀಯವಾಗಿ ನಡೆದುಕೊಂಡ ಘಟನೆ ಮಂಗಳವಾರ ವರದಿಯಾಗಿದೆ.

    ಮಹಾರಾಷ್ಟ್ರದ ಸರ್ಕಾರಿ ನೌಕರನಾಗಿರುವ ಸಂತ್ರಸ್ತನ ಮೇಲೆ ಇಂಕ್​ ಸುರಿದಿದ್ದಲ್ಲದೆ, ಶಿವಸೇನಾ ಕಾರ್ಯಕರ್ತರು ಹಲ್ಲೆಯನ್ನು ನಡೆಸಿ ಆತನನ್ನು ನಾಲಾಯಕ್​ ಎಂದು ಜರಿದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಿಎಂ ಉದ್ಧವ್​ ಠಾಕ್ರೆಯನ್ನು ಟೀಕಿಸಿದ್ದಕ್ಕೆ ಈ ರೀತಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

    ಈ ಸಂಬಂಧ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ವಿಡಿಯೋದಲ್ಲಿ ಶಿವಸೇನಾ ಕಾರ್ಯಕರ್ತೆ ಎನ್ನಲಾದ ಮಹಿಳೆಯೊಬ್ಬಳು ವ್ಯಕ್ತಿಯ ಮೇಲೆ ಇಂಕ್​ ಸುರಿಯುತ್ತಿರುವುದನ್ನು ಕಾಣಬಹುದಾಗಿದೆ.

    ಇದೇ ತೆರನಾದ ಘಟನೆಯೊಂದು ಕಳೆದ ಭಾನುವಾರ ಮುಂಬೈ ವಾಡ್ಲಾ ಏರಿಯಾದಲ್ಲಿ ನಡೆದಿತ್ತು. ಠಾಕ್ರೆ ವಿರುದ್ಧ ಅವಹೇಳನಕಾರಿಯಾದ ಪೋಸ್ಟ್​ ಹಾಕಿದ್ದಾನೆಂದು 30 ವರ್ಷದ ಹಿರಾಮನಿ ತಿವಾರಿ ಎಂಬಾತನ ಮೇಲೆ ಶಿವಸೇನಾ ಕಾರ್ಯಕರ್ತರು ಹಲ್ಲೆ ಮಾಡಿದ್ದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts