More

    ಕೋವಿಡ್​-19 ಪಿಡುಗಿನ ನಡುವೆಯೂ ರಾಜಕೀಯ; ಠಾಕ್ರೆ ಸರ್ಕಾರ ಬೀಳಿಸಲು ಬಿಜೆಪಿ ನಡೆಸಿದೆಯಂತೆ ಹುನ್ನಾರ

    ಮುಂಬೈ: ಮಹಾರಾಷ್ಟ್ರದಲ್ಲಿ ಕೋವಿಡ್​ ಪಿಡುಗು ಜೋರಾಗಿದ್ದು, ಪ್ರತಿದಿನವೂ ಸಹಸ್ರಾರು ಸಂಖ್ಯೆಯಲ್ಲಿ ಕರೊನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಪಿಡುಗನ್ನು ತಡೆಗಟ್ಟಲು ಉದ್ಧವ್​ ಠಾಕ್ರೆ ನೇತೃತ್ವದ ಮೈತ್ರಿ ಸರ್ಕಾರ ಹರಸಾಹಸ ಪಡುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಠಾಕ್ರೆ ಅವರ ಸರ್ಕಾರವನ್ನು ಬೀಳಿಸಲು ಯತ್ನಿಸುತ್ತಿದೆ ಎಂದು ಶಿವಸೇನೆ ಮುಖಂಡ ಸಂಜಯ್​ ರಾವತ್​ ಆರೋಪಿಸಿದ್ದಾರೆ.

    ಶಿವಸೇನೆಯ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಸಂಜಯ್​ ರಾವತ್​ ಈ ಆರೋಪ ಮಾಡಿದ್ದಾರೆ. ಈ ಪತ್ರಿಕೆಯ ಸಂಪಾದಕರೂ ಆಗಿರುವ ಅವರು, ಠಾಕ್ರೆ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಭಾರಿ ಹುನ್ನಾರ ನಡೆಸಿದೆ ಎಂದು ದೂರಿದ್ದಾರೆ.

    ಮಹಾರಾಷ್ಟ್ರದ ವಿಧಾನಪರಿಷತ್​ನಲ್ಲಿ 12 ಸ್ಥಾನಗಳು ತೆರವಾಗಲಿವೆ. ಈ ಸ್ಥಾನಗಳಿಗೆ ಬಿಜೆಪಿ ಅವರನ್ನೇ ತುಂಬುವ ಸಲುವಾಗಿ ಈ ಹುನ್ನಾರ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

    ಇದನ್ನೂ ಓದಿ: ಅಧಿಕಾರ ಉಳಿಸಿಕೊಳ್ಳಲು ಪಕ್ಷ ಒಡೆಯುವುದೊಂದೇ ದಾರಿ ನೇಪಾಳ ಪ್ರಧಾನಿ ಓಲಿಗೆ…!

    ಮಹಾರಾಷ್ಟ್ರದ ರಾಜಭವನವನ್ನು ಕೇಂದ್ರ ಗೃಹ ಸಚಿವಾಲಯ ನೇರವಾಗಿ ನಿಯಂತ್ರಿಸುತ್ತಿದೆ. ಪೂರ್ಣ ಬಹುಮತ ಇಲ್ಲದಿದ್ದರೂ ದೇವೇಂದ್ರ ಫಡ್ನವಿಸ್​ ಅವರನ್ನು ಸಿಎಂ ಆಗಿ ಮತ್ತು ಅಜಿತ್​ ಪವಾರ್​ ಅವರನ್ನು ಡಿಸಿಎಂ ಆಗಿ ಪ್ರಮಾಣವಚನ ಬೋಧಿಸಲು ಇದೇ ಸಚಿವಾಲಯ ರಾಜ್ಯಪಾಲರ ಮೇಲೆ ಒತ್ತಡ ಹೇರಿತ್ತು. ಇದೀಗ ಇದೇ ಸಚಿವಾಲಯ ಠಾಕ್ರೆ ಅವರ ಸರ್ಕಾರಕ್ಕೆ ತೊಂದರೆಯುಂಟು ಮಾಡಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.

    ಮಹಾರಾಷ್ಟ್ರ ವಿಧಾನಪರಿಷತ್​ನಲ್ಲಿ ತೆರವಾಗಿರುವ 12 ಸ್ಥಾನಗಳು ರಾಜ್ಯಪಾಲರ ಕೋಟಾಕ್ಕೆ ಸೇರಿದ್ದಾಗಿವೆ. ಕಲೆ, ಸಾಹಿತ್ಯ ಮತ್ತು ಕ್ರೀಡೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಔನತ್ಯ ಮೆರೆದವರನ್ನು ಈ ಸ್ಥಾನಗಳಿಗೆ ಆಯ್ಕೆ ಮಾಡಬೇಕಾಗುತ್ತಿದೆ. ಇದು ರಾಜ್ಯಪಾಲರ ವಿವೇಚನೆಗೆ ಬಿಟ್ಟ ವಿಷಯವಾಗಿರುತ್ತದೆ. ಆದರೆ, ಈ ಸ್ಥಾನಗಳನ್ನು ಭರ್ತಿ ಮಾಡಲು ರಾಜ್ಯಪಾಲರು ಅಸಡ್ಡೆ ತೋರುತ್ತಿದ್ದಾರೆ. ಈ ಸ್ಥಾನಗಳಿಗೆ ಅಕ್ಟೋಬರ್​ನಲ್ಲಿ ಆಯ್ಕೆ ಮಾಡುವುದಾಗಿ ಹೇಳುತ್ತಿದ್ದಾರೆ. ಠಾಕ್ರೆ ನೇತೃತ್ವದ ಮಹಾ ವಿಕಾಸ್​ ಅಗಡಿ ಸರ್ಕಾರವನ್ನು ಬೀಳಿಸಿದ ಬಳಿಕ ಈ ಸ್ಥಾನಗಳನ್ನು ತುಂಬಲು ಹುನ್ನಾರ ನಡೆದಿದೆ. ಆದರೆ, ಸರ್ಕಾರವನ್ನು ಬೀಳಿಸಿ, ಬಿಜೆಪಿ ಸರ್ಕಾರ ರಚಿಸುತ್ತೇವೆ ಎನ್ನುವುದು ಅವರ ಹಗಲಗನಸಾಗಿದೆ ಎಂದು ಹೇಳಿದ್ದಾರೆ.

    ಈ ರಾಜ್ಯದಲ್ಲಿ ಮಾಸ್ಕ್​ ಧರಿಸದೇ ಇದ್ದರೆ ಬೀಳುತ್ತೆ 10 ಸಾವಿರ ರೂಪಾಯಿ ಜುಲ್ಮಾನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts