More

    ಅಯೋಧ್ಯೆ ರಾಮಮಂದಿರದಲ್ಲಿ ಶಿವನಿಗೂ ಸಿಗಲಿ ಸ್ಥಾನ

    ಹುಬ್ಬಳ್ಳಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಭೂಮಿ ಸಮತಟ್ಟುಗೊಳಿಸುವಾಗ 5 ಅಡಿ ಎತ್ತರದ ಶಿವಲಿಂಗ ಪತ್ತೆಯಾಗಿರುವುದರಿಂದ ಶಿವನಿಗೂ ಅಲ್ಲಿ ಪೂಜನೀಯ ಸ್ಥಾನ ದೊರಕಬೇಕು ಎಂಬ ಆಶಯ ಶಿವಭಕ್ತರಲ್ಲಿ ಮೂಡಿದೆ.

    ಶ್ರೀರಾಮ ಕೂಡ ಶಿವಭಕ್ತ. ಶ್ರೀರಾಮನಿಂದಲೇ ರಾಮೇಶ್ವರ ನಿರ್ಮಾಣವಾಗಿದೆ ಎನ್ನುವುದಕ್ಕೆ ಪೌರಾಣಿಕ ಹಾಗೂ ಐತಿಹಾಸಿಕ ದಾಖಲೆಗಳಿವೆ. ಶ್ರೀರಾಮನ ಜನ್ಮಸ್ಥಳ ಎನ್ನಲಾಗಿರುವ ಜಾಗದಲ್ಲೇ ಶಿವಲಿಂಗ ಪತ್ತೆಯಾಗಿದೆ. ಕುಬೇರಟೀಲಾ ಸಮತಟ್ಟುಗೊಳಿಸುವ ವೇಳೆ ಸುಮಾರು 5 ಅಡಿ ಎತ್ತರದ ಶಿವಲಿಂಗ ಮತ್ತು ಮರಳುಗಲ್ಲಿನಲ್ಲಿ ದೇವರ ಚಿತ್ರಗಳನ್ನು ಕೆತ್ತಲಾಗಿರುವ ಹಲವು ಪಿಲ್ಲರ್​ಗಳು ದೊರೆತಿವೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ಮೇ 21ರಂದು ಶಿವಲಿಂಗ ದೊರೆತಿರುವ ವಿಷಯವನ್ನು ಬಹಿರಂಗಪಡಿಸಿದ್ದರು. ಕ್ಷತ್ರಿಯ ರಾಜಕುಮಾರನಾಗಿ ಜನಿಸಿದ ಶ್ರೀರಾಮ ಮನುಷ್ಯ ಸಹಜವಾಗಿ ಮಹಾಶಿವನ ಪರಮಭಕ್ತನಾಗಿದ್ದು ಪುರಾಣಗಳಲ್ಲಿ ಉಲ್ಲೇಖವಾಗಿದೆ.

    ಅಲ್ಲದೆ, ಶ್ರೀರಾಮ ಶಿವಲಿಂಗ ಪೂಜೆಮಾಡುತ್ತಿದ್ದ ಎಂಬುದಾಗಿ ಅನೇಕ ಪುರಾಣ, ಐತಿಹಾಸಿಕ, ಪುರಾತತ್ವ ಅಧ್ಯಯನ ನಡೆಸಿದ ಪಂಡಿತರು ಈ ಹಿಂದೆಯೇ ಪ್ರತಿಪಾದಿಸಿದ್ದಾರೆ. ರಾಮ ಜನ್ಮಭೂಮಿ ಪ್ರದೇಶದಲ್ಲಿಯೇ ಶಿವಲಿಂಗ ದೊರೆತಿರುವುದರಿಂದ ಅದೇ ಪ್ರಾಂಗಣದಲ್ಲಿ ಶಿವನಿಗೂ ಪೂಜನೀಯ ಸ್ಥಾನ ಲಭ್ಯವಾಗಬೇಕು. ಅಲ್ಲಿ ಶಿವಮಂದಿರ ಸ್ಥಾಪನೆಗೆ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಚಿಂತಿಸಬೇಕು ಎಂಬುದು ಬಹುಸಂಖ್ಯಾತ ಶಿವಭಕ್ತರ ಒತ್ತಾಸೆ ಹಾಗೂ ಮನವಿಯಾಗಿದೆ. ಇದರಿಂದ ಶ್ರೀರಾಮನ ಆರಾಧ್ಯದೇವನಿಗೂ ಸೂಕ್ತ ಸ್ಥಾನ ಒದಗಿಸಿದಂತಾಗುತ್ತದೆ. ಈ ಸಂಬಂಧ ಚಿಂತನೆ ನಡೆಸುವುದು ಸೂಕ್ತ ಎನ್ನುವುದು ಶೈವ ಸಮುದಾಯದ ಮಹದಾಸೆಯಾಗಿದೆ.

    ಪ್ರಧಾನಿ ನರೇಂದ್ರ ಮೋದಿಗೆ ಡಾ.ವಿಜಯ ಸಂಕೇಶ್ವರ ಪತ್ರ

    ಶಿವಲಿಂಗ ಪತ್ತೆಯಾದ ವಿಷಯ ಪ್ರಧಾನಿ ನರೇಂದ್ರ ಮೋದಿ ಅವರ ಗಮನದಲ್ಲಿದ್ದರೂ ಪವಿತ್ರ ಕ್ಷೇತ್ರದಲ್ಲಿ ಶಿವನಿಗೆ ಗೌರವಯುತ ಸ್ಥಾನ ಸಿಗುವಂತಾಗಲು ಕ್ರಮ ತೆಗೆದುಕೊಳ್ಳುವಂತೆ ಕೋರಿ ಹಿರಿಯ ಉದ್ಯಮಿ, ಮಾಜಿ ಸಂಸದ ಡಾ.ವಿಜಯಸಂಕೇಶ್ವರ ಅವರು ಮೋದಿ ಅವರಿಗೆ ಪತ್ರ ಬರೆಯಲಿದ್ದಾರೆ. ಭಾರತೀಯ ಧರ್ಮ, ಸಂಸ್ಕೃತಿ ಉಳಿವಿಗಾಗಿ ಶ್ರಮಿಸುತ್ತಾ ಅಯೋಧ್ಯೆ ಅಭಿವೃದ್ಧಿಗೆ ಕಂಕಣ ತೊಟ್ಟಿರುವ ಪ್ರಧಾನಿ ಅವರು ಶ್ರೀರಾಮನ ಭಕ್ತರಿಗಾಗಿ ಪ್ರಶಸ್ತ ಸ್ಥಳದಲ್ಲಿ ಶಿವನ ಪ್ರತಿಷ್ಠಾಪನೆಗೆ ಅವಕಾಶ ನೀಡಬೇಕೆಂದು ಮನವಿ ಮಾಡಲಿದ್ದಾರ

    ಅಯೋಧ್ಯೆ ರಾಮಮಂದಿರದಲ್ಲಿ ಶಿವನಿಗೂ ಸಿಗಲಿ ಸ್ಥಾನಶ್ರೀರಾಮ ಶಿವನ ಭಕ್ತ. ಶಿವ ಸರ್ವಾದರಣೀಯ. ಅವನ ಜನ್ಮಸ್ಥಳದಲ್ಲಿಯೇ ದೊರೆತಿರುವುದರಿಂದ ಅದು ಶ್ರೀರಾಮ ಪೂಜಿಸಿದ್ದ ಶಿವಲಿಂಗ. ಹಾಗಾಗಿ ಶ್ರೀರಾಮ ಮಂದಿರದ ಪ್ರಾಂಗಣದಲ್ಲಿ ಶಿವನಿಗೂ ಪೂಜೆ, ಪುನಸ್ಕಾರ ಒದಗಿಸುವ ಚಿಂತನೆಯನ್ನು ಸಮಿತಿ ನಡೆಸಬೇಕು.
    | ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು                  ಕಾಶಿ ಜಗದ್ಗುರುಗಳು

    ಅಯೋಧ್ಯೆ ರಾಮಮಂದಿರದಲ್ಲಿ ಶಿವನಿಗೂ ಸಿಗಲಿ ಸ್ಥಾನಅಯೋಧ್ಯೆಯಲ್ಲಿ ಶಿವಲಿಂಗ ದೊರಕಿರುವುದು ಭಾರತೀಯ ಸಂಸ್ಕೃತಿಯಲ್ಲಿ ಶಿವನಿಗೆ ಇರುವ ಪ್ರಾಮುಖ್ಯವನ್ನು ಎತ್ತಿ ತೋರಿಸುತ್ತದೆ. ಶ್ರೀರಾಮನೂ ಶಿವನನ್ನು ಆರಾಧಿಸಿ ತನ್ನ ಇಷ್ಟಾರ್ಥ ಫಲಗಳನ್ನು ಪಡೆದುಕೊಂಡಿದ್ದು ಐತಿಹ್ಯ. ಆ. 5 ರಂದು ಶ್ರೀರಾಮ ಮಂದಿರ ನಿರ್ವಣಕ್ಕೆ ಶಿಲಾನ್ಯಾಸ ನೆರವೇರಿಸುವ ಅಪೂರ್ವ ಸಂದರ್ಭದಲ್ಲಿ ಶಿವನ ಮಂದಿರವನ್ನೂ ನಿರ್ಮಾಣಮಾಡಿ, ದೊರಕಿರುವ ಪ್ರಾಚೀನ ಶಿವಲಿಂಗದ ಪ್ರತಿಷ್ಠಾಪನೆಗೆ ಸಂಕಲ್ಪ ತೊಟ್ಟಿದ್ದಾದರೆ ಇಡೀ ಶಿವಭಕ್ತ ಸಮೂಹಕ್ಕೆ ಅಪಾರ ಹರುಷ ಉಂಟಾಗುತ್ತದೆ. ಮಂದಿರ ನಿರ್ಮಾಣ ಸಮಿತಿ ಮುಖ್ಯಸ್ಥರು ಅಥವಾ ಸಂಬಂಧಿಸಿದ ನ್ಯಾಸ್ ಮಂಡಳಿ ವಿಶೇಷ ಗಮನ ಕೊಟ್ಟು ಈ ಕಾರ್ಯ ಪೂರ್ಣಗೊಳಿಸಬೇಕೆಂದು ಆಗ್ರಹಿಸುತ್ತೇವೆ.
    | ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಬಾಳೆಹೊನ್ನೂರು

    ಅಯೋಧ್ಯೆ ರಾಮಮಂದಿರದಲ್ಲಿ ಶಿವನಿಗೂ ಸಿಗಲಿ ಸ್ಥಾನಶ್ರೀರಾಮಚಂದ್ರ ಮಹಾವಿಷ್ಣುವಿನ ಅವತಾರ. ಹಲವಾರು ಸಂದರ್ಭ ಗಳಲ್ಲಿ ಶಿವನ ಆರಾಧನೆ ಮಾಡಿರುವುದಕ್ಕೆ ಪುರಾಣ, ಸಾಹಿತ್ಯ ಹಾಗೂ ಇತಿಹಾಸದಲ್ಲಿ ಉಲ್ಲೇಖವಿದೆ. ಆದ್ದರಿಂದ ರಾಮ ಮಂದಿರದ ಆವರಣದಲ್ಲಿ ಭವ್ಯವಾದ ಶಿವ ಮಂದಿರವನ್ನು ನಿರ್ವಿುಸು ವುದು ಸೂಕ್ತ. ಇದರಿಂದ ಶಿವಭಕ್ತರಿಗಷ್ಟೇ ಅಲ್ಲ, ಶ್ರೀರಾಮ ನಿಗೂ ಸಂತೋಷವಾಗುತ್ತದೆ. ನಾವು ಸ್ವತಃ ಯಡೂರ ಕ್ಷೇತ್ರದಿಂದ ಮಣ್ಣನ್ನು ಕಳಿಸಿಕೊಟ್ಟಿದ್ದೇವೆ.
    | ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಶ್ರೀಶೈಲ ಪೀಠ

    ಅಯೋಧ್ಯೆ ರಾಮಮಂದಿರದಲ್ಲಿ ಶಿವನಿಗೂ ಸಿಗಲಿ ಸ್ಥಾನಶ್ರೀರಾಮ ಜನ್ಮಭೂಮಿಯಲ್ಲೇ ಶಿವಲಿಂಗ ದೊರೆತಿರುವುದು ಶಿವಭಕ್ತರಿಗೆಲ್ಲ ಪುಳಕವುಂಟು ಮಾಡಿದೆ. ಭಾರತೀಯ ಧರ್ಮ, ಸಂಸ್ಕೃತಿ, ಪರಂಪರೆ ಮತ್ತು ಸ್ವಾಭಿಮಾನದ ಪ್ರತೀಕವಾಗಿ ನಿರ್ವಣವಾಗುತ್ತಿರುವ ಶ್ರೀರಾಮ ಮಂದಿರದಲ್ಲಿ ಈಶ್ವರನಿಗೂ ಸ್ಥಾನ, ನಿತ್ಯಪೂಜೆ ಸಲ್ಲಬೇಕು. ಇದರಿಂದ ಅಯೋಧ್ಯಾ ಕ್ಷೇತ್ರಕ್ಕೆ ಇನ್ನಷ್ಟು ಮಹತ್ವ ಪ್ರಾಪ್ತವಾಗುತ್ತದೆ.
    | ವಿ.ಜಿ.ಪಾಟೀಲ ಹಿರಿಯ ನ್ಯಾಯವಾದಿ ಹುಬ್ಬಳ್ಳಿ

    ‘ನಾನೇ ಫಸ್ಟ್ ಟೆರರಿಸ್ಟ್’ ಹೀಗಂತ ಸರ್ಕಾರ ಸ್ವತಃ ಘೋಷಿಸಬೇಕು- ಎಂಥ ವಿಚಿತ್ರ ಬೇಡಿಕೆ ಈತನದ್ದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts