More

    ಧರೆಗಿಳಿದು ಬಂದ ದೇವಮಾನವ ಶಿಶುನಾಳ ಶರೀಫರು: ಗವಿಸಿದ್ದಯ್ಯ

    ವಿಜಯವಾಣಿ ಸುದ್ದಿಜಾಲ ಗದಗ
    ಶಿಶುನಾಳ ಶರೀಫರು ತಮ್ಮ ಅನುಭವ ಮತ್ತು ಮಾತುಗಳನ್ನೇ ತತ್ವ ಪದಗಳಲ್ಲಿ ಕಟ್ಟಿಕೊಟ್ಟ ಪದಗಾರುಡಿಗ. ಮಹಾನ್​ ಪವಾಡ ಪುರುಷ. ತಮ್ಮ ತತ್ವ ಪದಗಳ ಮೂಲಕವೇ ಸಮಾಜದ ಡೊಂಕುಗಳನ್ನು ತಿದ್ದುವ ಪ್ರಯತ್ನ ಮಾಡಿದರು ಎಂದು ಜನಪದ ಕಲಾವಿದ ಗವಿಸಿದ್ದಯ್ಯ ಹಳ್ಳಿಕೇರಿಮಠ ಅಭಿಮತ ವ್ಯಕ್ತಪಡಿಸಿದರು.
    ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಬುಧವಾರ ತಾಲೂಕಿನ ನರಸಾಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ “ಗದಗ ಮನೆಯಂಗಳದಲ್ಲಿ ಸಾಹಿತ್ಯ ಕಾರ್ಯಕ್ರಮ’ ಉದ್ಘಾಟಿಸಿ “ಶಿಶುನಾಳ ಶರೀಫರ ಸ್ಮರಣೆ ಮತ್ತು ಸ್ವರಚಿತ ತತ್ವ ಪದಗೋಷ್ಠಿ’ ಕುರಿತು ಉಪನ್ಯಾಸ ನೀಡಿದರು.
    ಶರೀಫರ ತಮ್ಮ ಬದುಕಿನ ಣಣದ ಸಂದರ್ಭವನ್ನು ಮಾನವನ ಜೀವನದ ಸಾರವನ್ನು ತತ್ವ ಪದಗಳಲ್ಲಿ ಕಟ್ಟಿಕೊಟ್ಟ ಮಹಾತ್ಮರು. “ಆರನ್ನು ಅದುಮಿಟ್ಟು ಬದುಕಿದವರು ಮಾತ್ರ ಈ ಸಮಾಜದ ಶ್ರೇಷ್ಟರಾಗಿ ಬದುಕಿ ಬಾಳುತ್ತಾರೆ. ಮೋಹದ ಮಾಯೆಯೊಳಗ ಮರುಳಾದವರು ನೆನಪಿಲ್ಲದೆ ಮಾಯವಾಗುತ್ತಾರೆ’ ಎಂಬುವದನ್ನು ಶರೀಫರ ತತ್ವ ಪದಗಳಲ್ಲಿ ನಾವು ಕಂಡಿದ್ದೇವೆ. ಪದ ಪುಂಜಗಳ ತತ್ವ ಪದರಚನೆಯಲ್ಲಿ ನಮ್ಮ ಬದುಕಿನ ಮೌಲ್ಯವನ್ನು ಸಾರಪಡಿಸಿದ ಮಾಹಾನ ಸಂತ ಶಿಶುನಾಳ ಶರೀರಾಗಿದ್ದಾರೆ ಎಂದರು.
    ದೊಡ್ಡಾಟ ಕಲಾವಿದ ಅಶೋಕ ಸುತಾರ ಮಾತನಾಡಿ, ಶರೀಫರ​ ಅವರ ಜೀವನದತತ್ವ ಪದ ಮತ್ತು ಸಿದ್ದಾಂತ ಮತ್ತು ಪವಾಡಗಳನ್ನು ಸ್ಮರಿಸಿ ಅವರ ಸನ್ಮಾರ್ಗದಲ್ಲಿ ಸಾಗಬೇಕು ಎಂದರು.
    ಕಾರ್ಯಕ್ರಮದ ಅಧ್ಯತೆ ವಹಿಸಿ ರಶ್ಮಿ ಅಂಗಡಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತು ಮನೆಯಂಗಳದಲ್ಲಿ ಸಾಹಿತ್ಯ ಕಾರ್ಯಕ್ರಮದ ಉದ್ದೇಶ ಸಾಹಿತ್ಯ ಮನೆ ಮನೆಗೂ ತಲುಪಬೇಕು. ಸಾಹಿತ್ಯಯದಿಂದ ಬದುಕಿನ ಸತ್ವವವನ್ನು ತಿಳಿಸಿ ಕುಟುಂಬಗಳನ್ನು ಬಾಂಧವ್ಯದಿಂದ ಪ್ರಭಲ ಮಾಡುವ ಶಕ್ತಿ ಸಾಹಿತ್ಯಕ್ಕಿದೆ. ಅದರಂತೆ ಸಾಹಿತ್ಯ ಸೇವೆಗೆ ಯಾರು ಇಚ್ಚಿಸುತ್ತಾರೋ ಅವರ ಮನೆ ಅಂಗಳಕ್ಕೆ ಕಲಾವಿದರು ಕವಿಗಳು ಬರುತ್ತೇವೆ. ನಾವೆಲ್ಲರು ಸಂಸತಿ ಸಾಂಪ್ರದಾಯಗಳನ್ನು ಉಳಿಸಿ ಬೆಳೆಸುವಲ್ಲಿ ಶ್ರಮಿಸೋಣ ಎಂದು ಕರೆ ನೀಡಿರದರು.
    ಡಾ. ರಾಜೇಂದ್ರ ಗಡಾದ, ಶಿವಾನಂದ ಭಜಂತ್ರಿ, ರತ್ನಕ್ಕ ಪಾಟೀಲ, ಕೆ. ಜಿ, ಹೊನ್ನಮ್ಮದೇವಿ. ಧಮೇರ್ಂದ್ರ ಇಟಗಿ ಉಪಸ್ಥಿತದ್ದರು. ಕಳಕಪ್ಪ ಜಲ್ಲಿಗೇರಿ, ಅಶ್ವಿನಿ ಜೋಶಿ, ಶಿವಲೀಲಾ ಧನ್ನಾ, ಮಧುರಾಜ್​ ರಾಂಪೂರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts