More

    ದೇವಳ ಕೆರೆಯಿಂದ ಮೀನು ಹಿಡಿಯಲು ಯತ್ನ, 7 ಮಂದಿಯನ್ನು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

    ಉಪ್ಪಿನಂಗಡಿ: ಬ್ರಿಟಿಷರ ಕಾಲದಿಂದಲೇ ಮೀನುಗಾರಿಕೆಗೆ ನಿಷೇಧ ವಿಧಿಸಲಾಗಿರುವ ಶಿಶಿಲ ಶ್ರೀ ಶಿಶಿಲೇಶ್ವರ ದೇವಾಲಯದ ಮತ್ಸೃ ತೀರ್ಥ ಕ್ಷೇತ್ರದಲ್ಲಿ ಮೀನುಗಳನ್ನು ಹಿಡಿಯಲು ಯತ್ನಿಸಿದ ಏಳು ಮಂದಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.

    ಪಶ್ಚಿಮಘಟ್ಟದಿಂದ ಹರಿದು ಬರುವ ಕಪಿಲಾ ನದಿಯಲ್ಲಿ ಈ ಮತ್ಸೃತೀರ್ಥ ಬಹುಬಗೆಯ ಹಾಗೂ ಬಹು ಗಾತ್ರದ ಮೀನುಗಳಿಂದ ಜನಾಕರ್ಷಣೆಯ ಕೇಂದ್ರ. ಇಲ್ಲಿನ ಮೀನುಗಳಿಗೆ ಭಕ್ತರು ಆಹಾರ ನೀಡುವ ಪರಿಪಾಠವಿದೆ. ಇಲ್ಲಿನ ಮೀನುಗಳ ರಕ್ಷಣೆಗಾಗಿ ಈ ಪ್ರದೇಶದ 2 ಕಿ.ಮೀ.ವ್ಯಾಪ್ತಿಯಲ್ಲಿ ಮೀನುಗಾರಿಕೆ ನಿಷೇಧಿಸಲಾಗಿದೆ.

    ಅರಸಿನಮಕ್ಕಿ ನಿವಾಸಿಗರು ಎನ್ನಲಾದ 7 ಮಂದಿ, ಮೀನು ಹಿಡಿಯುವ ಪರಿಕರಕಗಳೊಂದಿಗೆ ಸೋಮವಾರ ರಾತ್ರಿ ಈ ಪರಿಸರಕ್ಕೆ ಬಂದರು. ಮೀನು ಹಿಡಿಯುವ ಮುಂದಾದಾಗ ಕಾವಲು ಕಾಯುತ್ತಿದ್ದ ದೇವಳದ ಭಕ್ತರು ಹಾಗೂ ಹಿಂದು ಸಂಘಟನೆಗಳ ಕಾರ್ಯ ಕರ್ತರು ಆರೋಪಿಗಳನ್ನು ಹಿಡಿದು ಧರ್ಮಸ್ಥಳ ಪೊಲೀಸರಿಗೆ ಒಪ್ಪಿಸಿದರು.

    ದೂರು ಸ್ವೀಕರಿಸಿದ ಧರ್ಮಸ್ಥಳ ಠಾಣಾಧಿಕಾರಿ ಪವನ್ ಕುಮಾರ್ ಆರೋಪಿಗಳಿಂದ ಮುಚ್ಚಳಿಕೆ ಬರೆಸಿ, ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts