More

    ನಂಜನಗೂಡಿನಲ್ಲಿ ಶತಚಂಡಿ ಹೋಮ

    ನಂಜನಗೂಡು: ಕಪಿಲಾ ನದಿ ತೀರದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ಅಮ್ಮನವರ ವರ್ಧಂತಿ ಮಹೋತ್ಸವ ಅಂಗವಾಗಿ ಸೋಮವಾರ ಶತಚಂಡಿ ಹೋಮ ನೆರವೇರಿಸಲಾಯಿತು.

    ಬೆಳಗ್ಗೆ ಶ್ರೀ ಚಾಮುಂಡೇಶ್ವರಿ ದೇವಿಯ ವಿಗ್ರಹಕ್ಕೆ ಕ್ಷೀರಾಭಿಷೇಕ, ಅರಿಶಿಣ, ಕುಂಕುಮ ನೈವೇದ್ಯ, ಪಂಚಾಮೃತ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳನ್ನು ನೆರವೇರಿಸಿ ವಿಶೇಷ ಪುಷ್ಪಾಲಂಕಾರ ಮಾಡಲಾಯಿತು.

    ದೇವಾಲಯದ ಹೊರ ಆವರಣದಲ್ಲಿ ಲೋಕ ಕಲ್ಯಾಣಕ್ಕಾಗಿ ಶ್ರೀಕಂಠೇಶ್ವರಸ್ವಾಮಿ ಹಾಗೂ ಶ್ರೀ ಚಾಮುಂಡೇಶ್ವರಿ ದೇವಾಲಯದ ಅರ್ಚಕರ ನೇತೃತ್ವದಲ್ಲಿ ಶತಚಂಡಿ ಹೋಮವನ್ನು ನೆರವೇರಿಸಲಾಯಿತು.

    ಚಾಮುಂಡೇಶ್ವರಿ ತಾಯಿ ದರ್ಶನಕ್ಕೆ ಬೆಳಗ್ಗೆಯಿಂದ ಭಕ್ತಸಾಗರವೇ ಹರಿದು ಬಂದಿತು. ಸರದಿಯಲ್ಲಿ ಭಕ್ತರು ಸಾಗಲು ತಾತ್ಕಾಲಿಕ ವ್ಯವಸ್ಥೆ ಮಾಡಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಮಹಿಳೆಯರು ನಿಂಬೆ ಹಣ್ಣಿನ ದೀಪದಾರತಿ ಬೆಳಗಿಸಿದರು

    ಶ್ರೀ ಚಾಮುಂಡೇಶ್ವರಿ ವರ್ಧಂತಿ ಅಂಗವಾಗಿ ಪಟ್ಟಣದ ವಿವಿಧೆಡೆ ಪ್ರಸಾದ ವಿನಿಯೋಗ ನಡೆಯಿತು. ನೆಹರು ವೃತ್ತದಲ್ಲಿ ರಸ್ತೆಬದಿ ವ್ಯಾಪಾರಿಗಳ ಸಹಯೋಗದಲ್ಲಿ 10 ಸಾವಿರಕ್ಕೂ ಹೆಚ್ಚು ಭಕ್ತರಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ರಾಷ್ಟ್ರಪತಿ ರಸ್ತೆಯ 12ನೇ ತಿರುವಿನಲ್ಲಿ ಗೆಳೆಯರ ಬಳಗ, ಹುಲ್ಲಹಳ್ಳಿ ವೃತ್ತ ಸೇರಿದಂತೆ ನಾನಾ ಕಡೆ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts