More

    ರಾಜ್ ಕುಂದ್ರಾ ಜೊತೆ ಮಸ್ಸೂರಿಯಲ್ಲಿ ಶಿಲ್ಪಾ ಶೆಟ್ಟಿ ವಿಹಾರ! ಫೋಟೋ ವೈರಲ್

    ಮುಂಬೈ: ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ತಿಂಗಳುಗಳ ಕಾಲ ಜೈಲಿನಲ್ಲಿ ಬಂಧಿಯಾಗಿದ್ದ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್‌ ಕುಂದ್ರಾ ಅವರಿಗೆ ಈಚೆಗೆ ಜಾಮೀನು ದೊರೆತು ಅವರು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಆರಂಭದಲ್ಲಿ ಶಿಲ್ಪಾ ಶೆಟ್ಟಿ ತುಂಬಾ ದುಃಖದಲ್ಲಿದ್ದರೂ ನಂತರ ಸಹಜ ಜೀವನಕ್ಕೆ ಬಂದಿದ್ದ ಅವರು ಸಾರ್ವಜನಿಕವಾಗಿ ಗುರುತಿಸಿಕೊಳ್ಳಲು ಶುರುಮಾಡಿದ್ದರು. ಇದೇ ಪ್ರಕರಣದಲ್ಲಿ ಶಿಲ್ಪಾ ವಿರುದ್ಧ ಆರೋಪ ಕೇಳಿಬರುತ್ತಿದೆಯಾದರೂ ನಟಿ ಈ ಬಗ್ಗೆ ಹೆಚ್ಚಿಗೆ ತಲೆಕೆಡಿಸಿಕೊಂಡಂತೆ ತೋರಿಸಿಕೊಳ್ಳುತ್ತಿಲ್ಲ. ಇನ್ನು, ಪ್ರಸ್ತುತ ಪತಿ ರಾಜ್ ಕುಂದ್ರಾ ಮತ್ತು ಮಕ್ಕಳಾದ ವಿಯಾನ್ ಮತ್ತು ಸಮೀಶಾ ಅವರೊಂದಿಗೆ ಉತ್ತರಾಖಂಡದ ಮಸ್ಸೂರಿಯಲ್ಲಿ ಎಂಜಾಯ್ ಮಾಡುತ್ತಿರುವ ಶಿಲ್ಪಾ ಶೆಟ್ಟಿ, ಇನ್‌ಸ್ಟಾಗ್ರಾಮ್‌ನಲ್ಲಿ ಒಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವರು ಶೇರ್ ಮಾಡಿರುವ ಫೋಟೋಗಳು ಈಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ

    ರಾಜ್ ಕುಂದ್ರಾ ಜೊತೆ ಮಸ್ಸೂರಿಯಲ್ಲಿ ಶಿಲ್ಪಾ ಶೆಟ್ಟಿ ವಿಹಾರ! ಫೋಟೋ ವೈರಲ್ ರಾಜ್ ಕುಂದ್ರಾ ಜೊತೆ ಮಸ್ಸೂರಿಯಲ್ಲಿ ಶಿಲ್ಪಾ ಶೆಟ್ಟಿ ವಿಹಾರ! ಫೋಟೋ ವೈರಲ್

    ಜೊತೆಗೆ, ‘ತಪ್ಪುಗಳು ಮಾಡುವುದುಸಹಜ ಎಂಬಂತೆ ತಮ್ಮ ಪೋಸ್ಟ್​ಗೆ ಕ್ಯಾಪ್ಷನ್ ನೀಡಿದ್ದಾರೆ. ಹೌದು, ತಪ್ಪುಗಳನ್ನು ಮಾಡುವ ಬಗ್ಗೆ ನಟ ತಲ್ಲುಲಾ ಬ್ಯಾಂಕ್‌ಹೆಡ್ ಅವರ ಉಲ್ಲೇಖವನ್ನು ಹೊಂದಿರುವ ಪುಸ್ತಕದ ಫೋಟೋವನ್ನು ಶಿಲ್ಪಾ ತಮ್ಮ ಒಂದು ಪೋಸ್ಟ್ ಜೊತೆಗೆ ಹಂಚಿಕೊಂಡಿದ್ದಾರೆ. ಅಶ್ಲೀಲ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ ಕುಂದ್ರಾ ಜಾಮೀನು ಪಡೆದ ತಿಂಗಳುಗಳ ನಂತರ ಇತ್ತೀಚೆಗೆ ಕ್ರಿಸ್‌ಮಸ್ ದಿನದಂದು ಶಿಲ್ಪಾ ಪತಿಯೊಂದಿಗೆ ಫೋಟೋವನ್ನು ಪೋಸ್ಟ್ ಮಾಡಿದ್ದರು. ಶಿಲ್ಪಾ ಕೊನೆಯದಾಗಿ ಹಂಗಾಮಾ 2′ ಸಿನಿಮಾದಲ್ಲಿ ಮೀಜಾನ್, ಪ್ರಣಿತಾ ಸುಭಾಷ್ ಮತ್ತು ಪರೇಶ್ ರಾವಲ್ ಜತೆ ಕಾಣಿಸಿಕೊಂಡಿದ್ದರು. ಮುಂದೆ, ನಟಿ ಅಭಿಮನ್ಯು ದಸ್ಸಾನಿ ಮತ್ತು ಶೆರ್ಲಿ ಸೆಟಿಯಾ ಜತೆಗೆ ಸಬ್ಬೀರ್ ಖಾನ್ ಅವರ ನಿಕಮ್ಮಚಿತ್ರದಲ್ಲಿ ತೆರೆ ಮೇಲೆ ಮಿಂಚಲಿದ್ದಾರೆ.

    ಹೊಸ ವರ್ಷಕ್ಕೆ ಹಾಟ್ ಸಮಂತಾಳ ಹೊಸ ಸಂಕಲ್ಪ! ವಿಡಿಯೋ ವೈರಲ್

    ಆಸ್ಪತ್ರೆಯಲ್ಲಿದ್ದ ಸಲ್ಮಾನ್ ಖಾನ್ ಫೋಟೋ ವೈರಲ್; ಸೆಲೆಬ್ರಿಟಿಗಳಿಗೆ ಪ್ರೈವೆಸಿ ಇಲ್ವಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts