More

    ‘ರುದ್ರಪ್ರಯಾಗ’ ಚಿತ್ರದಲ್ಲಿ ನಟಿಸುವ ಬಗ್ಗೆ ಶೈನ್ ಏನಂತಾರೆ ಗೊತ್ತಾ?

    ರಿಷಭ್ ಶೆಟ್ಟಿ ನಿರ್ದೇಶನದ ‘ರುದ್ರಪ್ರಯಾಗ’ ಚಿತ್ರ ಇಷ್ಟರಲ್ಲಿ ಶುರುವಾಗಿರಬೇಕಿತ್ತು. ಆದರೆ, ಅಷ್ಟರಲ್ಲಿ ಲಾಕ್‌ಡೌನ್ ಘೋಷಣೆಯಾಗಿದ್ದರಿಂದ, ಅದು ಮುಗಿಯುವವರೆಗೂ ಕಾಯುತ್ತಿದ್ದಾರೆ ರಿಷಭ್ ಶೆಟ್ಟಿ . ಅಷ್ಟೇ ಅಲ್ಲ, ಈ ಸಮಯದಲ್ಲಿ ತಮ್ಮ ಚಿತ್ರದ ಕಥೆಯನ್ನು ಅವರು ಫೈನ್‌ಟ್ಯೂನ್ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ.

    ಈ ಮಧ್ಯೆ, ‘ರುದ್ರಪ್ರಯಾಗ’ ಚಿತ್ರದಲ್ಲಿ ಶೈನ್ ಶೆಟ್ಟಿ ಒಂದು ಪ್ರಮುಖ ಪಾತ್ರ ಮಾಡುತ್ತಿದ್ದಾರೆ ಎಂಬ ಸುದ್ದಿ ಕಳೆದೆರೆಡು ದಿನಗಳಿಂದ ಕೇಳಿ ಬರುತ್ತಿದೆ. ಈ ವಿಷಯವಾಗಿ ಶೈನ್ ಶೆಟ್ಟಿ ಅವರನ್ನು ಸಂಪರ್ಕಿಸಿದರೆ, ಚಿತ್ರದಲ್ಲಿ ನಟಿಸುತ್ತಿರುವ ವಿಷಯ ನನಗೇ ಗೊತ್ತಿಲ್ಲ ಎನ್ನುತ್ತಾರೆ.

    ಇದನ್ನೂ ಓದಿ: ಸೋಷಿಯಲ್ ಮೀಡಿಯಾದಲ್ಲಿ ಹೊಸ ದಾಖಲೆ ನಿರ್ಮಿಸಿದ ತಾರಕ್!

    ಈ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಅವರು, ‘ಚಿತ್ರದಲ್ಲಿ ನಾನು ನಟಿಸುತ್ತಿರುವ ವಿಷಯ ನನಗೇ ಗೊತ್ತಿಲ್ಲ. ಹಾಗಂತ ಇದು ಸುಳ್ಳು ಸುದ್ದಿಯಲ್ಲ. ಹಾಗೆಯೇ ಈ ವಿಷಯ ಪಕ್ಕಾ ಸಹ ಅಲ್ಲ’ ಎನ್ನುತ್ತಾರೆ ಅವರು.

    ಈ ವಿಷಯವಾಗಿ ಇನ್ನಷ್ಟು ಬೆಳಕು ಚೆಲ್ಲುವ ಅವರು, ‘ರಿಷಭ್ ಅವರೊಡನೆ ನಾನು ಸಿನಿಮಾ ಮಾಡುವುದು ಹಳೆಯ ವಿಷಯ. ‘ಬಿಗ್ ಬಾಸ್’ಗೆ ಹೋಗುವ ಮುಂಚೆಯೇ ನಾವಿಬ್ಬರೂ ಜತೆಯಾಗಿ ಸಿನಿಮಾ ಮಾಡಬೇಕು ಎಂದು ಮಾತುಕತೆಯಾಗಿತ್ತು. ಈ ಮಧ್ಯೆ ನಾನು ‘ಬಿಗ್ ಬಾಸ್’ ಮನೆಗೆ ಹೋದೆ. ಅಲ್ಲಿಂದ ಬಂದ ನಂತರವೂ ಅವರ ಜತೆಗೆ ಟಚ್‌ನಲ್ಲಿದ್ದೇನೆ. ಹಾಗೆಯೇ ಜತೆಯಾಗಿ ಚಿತ್ರ ಮಾಡುವ ವಿಷಯವೂ ಆಗಾಗ ಪ್ರಸ್ತಾಪವಾಗುತ್ತಿರುತ್ತದೆ. ಹಾಗಾಗಿ ನಾನು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದೀನಾ ಅಥವಾ ಮುಂದಿನ ಚಿತ್ರದಲ್ಲಾ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಈ ಬಗ್ಗೆ ಅವರ ಜತೆಗೆ ಇನ್ನಷ್ಟೇ ಮಾತನಾಡಬೇಕಿದೆ. ಈ ಚಿತ್ರವಲ್ಲದಿದ್ದರೆ, ಮುಂದಿನ ಚಿತ್ರದಲ್ಲಾದರೂ ಅವರ ಜತೆಗೆ ಕೆಲಸ ಮಾಡುವುದು ಹೌದು’ ಎನ್ನುತ್ತಾರೆ ಶೈನ್.

    ಇದನ್ನೂ ಓದಿ: ಅಗತ್ಯವಿರುವವರಿಗೆ ನೆರವಾಗಿ … ಸಣ್ಣ ವ್ಯಾಪಾರಿಗಳ ಪರ ನಿಂತ ದರ್ಶನ್ ಪತ್ನಿ

    ಈ ಮಧ್ಯೆ, ಇನ್ನೊಂದು ಚಿತ್ರ ಪ್ಲಾನಿಂಗ್ ನಡೆಯುತ್ತಿದೆಯಂತೆ. ಲಾಕ್‌ಡೌನ್ ಮುಗಿದ ಮೇಲೆ, ಆ ಚಿತ್ರ ಶುರುವಾಗಬಹುದು ಎಂಬ ಉತ್ತರ ಅವರಿಂದ ಬರುತ್ತದೆ.

    ಈ ‘ಕೆಜಿಎಫ್​’ ನಟಿ ಹತ್ತಿರ ಇರೋದು ನಾಲ್ಕೇ ಬಟ್ಟೆಯಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts