More

    ಡಾನ್​ನಿಂದ ತಪ್ಪಿಸಿಕೊಳ್ಳಲು ಮದುವೆಯಾದರಂತೆ ರಾಖಿ!

    ಮುಂಬೈ: ರಿತೇಶ್​ ಎಂಬ ಲಂಡನ್​ ಉದ್ಯಮಿಯನ್ನು ನಟಿ ಮತ್ತು ಬಿಗ್​ ಬಾಸ್​ ಸ್ಪರ್ಧಿ ರಾಖಿ ಸಾವಂತ್ ಕೆಲವು ವರ್ಷಗಳ ಹಿಂದೆ ಮದುವೆಯಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಆತ ಯಾರು, ಹೇಗಿದ್ದಾರೆ ಎಂದು ಯಾರಿಗೂ ಗೊತ್ತಿಲ್ಲ. ಏಕೆಂದರೆ, ರಿತೇಶ್​ ಇದುವರೆಗೂ ಬಹಿರಂಗವಾಗಿ ಹೊರಗೆ ಬಂದು ತಾನು ರಾಖಿ ಗಂಡನೆಂದು ಹೇಳಿಕೊಂಡಿಲ್ಲ. ಕಾರಣ, ರಿತೇಶ್​ಗೆ ಈಗಾಗಲೇ ಒಂದು ಮದುವೆಯಾಗಿದ್ದು ಮತ್ತು ರಾಖಿ ತನ್ನ ಎರಡನೇ ಪತ್ನಿ ಎಂದು ಹೇಳಿಕೊಂಡರೆ ಸಾಂಸಾರಿಕವಾಗಿ ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕೆ ರಿತೇಶ್​, ರಾಖಿ ಜತೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.

    ಇದನ್ನೂ ಓದಿ: ಯಶ್ ಅವರದ್ದು ಬದಲಾಗದ ವ್ಯಕ್ತಿತ್ವ; ರಾಕಿಂಗ್ ಸ್ಟಾರ್ ಗುಣಗಾನ ಮಾಡಿದ ಡಿಎಸ್​ಪಿ..

    ಈ ಬಗ್ಗೆ ರಾಖಿಗೂ ಸಾಕಷ್ಟು ಬೇಸರವಿದೆ ಮತ್ತು ಮುಂದಿನ ದಿನಗಳಲ್ಲಿ ಆತ ಬಹಿರಂಗವಾಗಿ ತನ್ನನ್ನು ಮದುವೆಯಾಗಿದ್ದನ್ನು ಒಪ್ಪಿಕೊಳ್ಳದಿದ್ದರೆ, ಆತನಿಂದ ದೂರವಾಗುವುದರ ಜತೆಗೆ, ಆತ ಯಾರು ಎಂದು ಬಹಿರಂಗಪಡಿಸುವುದಾಗಿ ಹೇಳಿಕೊಂಡಿದ್ದರು. ರಿತೇಶ್​ ಬಗ್ಗೆ ಇಷ್ಟೆಲ್ಲ ಗೊತ್ತಿದ್ದರೂ, ಆತನನ್ನು ರಾಖಿ ಮದುವೆಯಾಗಿದ್ದೇಕೆ ಎಂಬ ಪ್ರಶ್ನೆ ಸಹಜ. ಅದಕ್ಕೂ ಕಾರಣವಿದೆ. ಡಾನ್​ ಒಬ್ಬನಿಂದ ತಪ್ಪಿಸಿಕೊಳ್ಳುವುದಕ್ಕೆ ರಿತೇಶ್​ನನ್ನು ಮದುವೆಯಾಗಿದ್ದಾಗಿ ರಾಖಿ ಇದೀಗ ಹೇಳಿಕೊಂಡಿದ್ದಾರೆ.

    ಕೆಲವು ವರ್ಷಗಳ ಹಿಂದೆ ಗುಜರಾತ್​ನ ಡಾನ್​ ಒಬ್ಬ ರಾಖಿ ಹಿಂದೆ ಬಿದ್ದಿದ್ದನಂತೆ. ತನ್ನನ್ನು ಮದುವೆಯಾಗುವುದಕ್ಕೆ ಪೀಡಿಸುತ್ತಿದ್ದನಂತೆ. ಅವನಿಂದ ದೂರವಾಗುವುದು ಹೇಗೆ ಎಂದು ಮಾರ್ಗ ಹುಡುಕುತ್ತಿದ್ದಾಗ, ಅದೊಮ್ಮೆ ಯಾವುದೋ ಕಾರಣಕ್ಕೆ ರಾಖಿಗೆ ರಿತೇಶ್​ ಫೋನ್​ ಮಾಡಿದ್ದರಂತೆ. ಆಗ ತನಗೊಬ್ಬ ಒಳ್ಳೆಯ ಹುಡುಗನನ್ನು ಹುಡುಕು, ತಾನು ಮದುವೆಯಾಗಬೇಕು ಎಂದು ರಿತೇಶ್​ಗೆ ರಾಖಿ ಹೇಳಿದ್ದರಂತೆ. ಅದು ಏನೇನೋ ಆಗಿ, ಕೊನೆಗೆ ರಿತೇಶ್​ನನ್ನೇ ಕೈಡಿಯಬೇಕಿದೆ. ಡಾನ್​ನಿಂದ ತಪ್ಪಿಸಿಕೊಳ್ಳುವುದಕ್ಕೆ ಹೋದ ರಾಖಿ, ಇದೀಗ ಇನ್ನೊಂದು ಸಮಸ್ಯೆಗೆ ಸಿಲುಕಿದ್ದಾರೆ.

    ಇದನ್ನೂ ಓದಿ: ಕೋವಿಡ್ ಕಷ್ಟಕಾಲದಲ್ಲಿ ದತ್ತು ಪಡೆದ ಗ್ರಾಮದ ಜನರಿಗೆ ಮಹೇಶ್ ಬಾಬು ವಿಶೇಷ ಸೇವೆ

    ಈ ಮಧ್ಯೆ, ರಿತೇಶ್​, ರಾಖಿ ಜತೆಗೆ ಬಹಿರಂಗವಾಗಿ ಕಾಣಿಸಿಕೊಳ್ಳುವುದಕ್ಕೆ ಒಪ್ಪಿಕೊಂಡಿದ್ದರೂ, ಸದ್ಯಕ್ಕೆ ಲಾಕ್​ಡೌನ್​ ಇರುವುದರಿಂದ ಲಂಡನ್​ ಬಿಟ್ಟು ಮುಂಬೈಗೆ ಬರುವುದಕ್ಕೆ ಆಗುವುದಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರಂತೆ. ಒಂದು ಪಕ್ಷ ಮುಂದಿನ ದಿನಗಳಲ್ಲಿ ಅದು ಸಾಧ್ಯವಾಗದಿದ್ದರೆ, ರಿತೇಶ್​ನಿಂದ ದೂರವಾಗುವುದಷ್ಟೇ ಅಲ್ಲ, ಇನ್ನೆಂದೂ ಮದುವೆಯಾಗುವುದಿಲ್ಲ ಎಂದು ಶಪಥ ಮಾಡಿದ್ದಾರೆ.

    ಸ್ಟ್ರೇಟ್ ಫಾರ್ವರ್ಡ್ ಪ್ರಿಯಾಂಕಾ; ಬಿಗ್ ಬಾಸ್​ನ ಕಿರುಪಯಣ ನೆನೆದ ಪಟಾಕಿ ಸುಂದರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts