More

    ರಾಖಿ ಸಂಬಂಧ ಕಡಿದುಕೊಂಡಿದ್ದೇಕೆ? ಕೊನೆಗೂ ಅಸಲಿ ಕಾರಣ ಬಿಚ್ಚಿಟ್ಟ ಮೈಸೂರಿನ ಆದಿಲ್!

    ಮುಂಬೈ: ವಿವಾದಿತ ನಟಿ ರಾಖಿ ಸಾವಂತ್​ ಮಾಜಿ ಪತಿ ಆದಿಲ್​ ಖಾನ್​ ದುರಾನಿ, ಹಿಂದಿ ಬಿಗ್​ಬಾಸ್​ ಸೀಸನ್​ 12ರ ಸ್ಪರ್ಧಿ ಸೋಮಿ ಖಾನ್​ರನ್ನು ಮದುವೆಯಾಗಿದ್ದಾರೆ. ಇದರ ಬೆನ್ನಲ್ಲೇ ರಾಖಿ ಜತೆಗಿನ ತನ್ನ ಮದುವೆ ಶೂನ್ಯ ಮತ್ತು ಅನೂರ್ಜಿತ ಎಂದು ಮೈಸೂರಿನ ಆದಿಲ್​ ಖಾನ್ ಸಂದರ್ಶನವೊಂದರಲ್ಲಿ ಘೋಷಣೆ ಮಾಡಿದ್ದಾರೆ.

    ಸಂದರ್ಶನದಲ್ಲಿ ರಾಖಿ ವಿರುದ್ಧ ವಾಗ್ದಾಳಿ ನಡೆಸಿರುವ ಆದಿಲ್​ ಖಾನ್​ ಗಂಭೀರ ಆರೋಪವೊಂದನ್ನು ಸಹ ಮಾಡಿದ್ದಾನೆ. ನಾವಿಬ್ಬರು ಒಟ್ಟಿಗೆ ಇರುವಾಗಲೇ ಆಕೆ ಬೇರೊಬ್ಬನನ್ನು ಮದುವೆ ಆಗಿದ್ದಾಳೆ ಎಂದಿದ್ದಾರೆ. ಅಲ್ಲದೆ,​ ರಾಖಿ ಜತೆಗಿನ ವಿವಾಹಕ್ಕೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳ ಬಗ್ಗೆ ಮಾತನಾಡಿರುವ ಆದಿಲ್​ ಖಾನ್​, ಸೋಮಿ ಖಾನ್ ಜತೆಗಿನ ಇತ್ತೀಚಿನ ವಿವಾಹವನ್ನು ಸಮರ್ಥಿಸಿಕೊಂಡರು.

    ನಾನು ಹೇಗೆ ಮತ್ತೆ ಮದುವೆಯಾದೆ? ಎಂಬ ಪ್ರಶ್ನೆ ಅನೇಕರ ಮನಸ್ಸಿನಲ್ಲಿದೆ. ನಾನು ಮುಸ್ಲಿಂ ಆಗಿರುವುದರಿಂದ ಮತ್ತೆ ಮದುವೆಯಾಗಲು ನನಗೆ ಸಂಪೂರ್ಣ ಹಕ್ಕಿದೆ ಮತ್ತು ನಾನು ಮದುವೆಯಾಗಬಹುದು. ನಾನು ಕುಟುಂಬದ ಸಮ್ಮುಖದಲ್ಲೇ ಸೋಮಿ ಖಾನ್​ ಅವರನ್ನು ವರಿಸಿದ್ದೇನೆ ಮತ್ತು ಗುಟ್ಟಾಗಿ ಮದುವೆ ಆಗುವಂಥದ್ದು ಏನು ಇಲ್ಲ. ಸೋಮಿ ಮತ್ತು ನನ್ನ ಕುಟುಂಬದ ಸಮ್ಮತಿಯ ಮೇರೆಗೆ ಇಬ್ಬರ ನಿಖಾ ನಡೆದಿದೆ. ಆರತಕ್ಷತೆ ಕೂಡ ಆಗಿದೆ. ನಾನು ಅಧಿಕೃತವಾಗಿ ಸೋಮಿ ಅವರನ್ನು ಮದುವೆಯಾಗಿದ್ದೇನೆ ಎಂದು ಹೇಳಿದರು.ಮ

    ರಾಖಿ ಸಾವಂತ್​ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿದ ಆದಿಲ್​, ನನ್ನ ವಿರುದ್ಧ ನೆಗಿಟಿವಿಯನ್ನು ಹರಡಿದರು. ಒಳ್ಳೆಯ ಜೀವನ ನಡೆಸಲು ನನಗೂ ಕೂಡ ಹಕ್ಕಿದೆ. ಆದರೆ, ರಾಖಿ ಸದಾ ನೆಗಿಟಿವಿಟಿ ಹರಡುತ್ತಿದ್ದಳು. ಆಕೆ ಎಂದಿಗೂ, ಯಾರಿಗೂ ಸಂತೋಷವನ್ನು ಕೊಡಲಾರಳು. ನಂಗೆ ಆಕೆ ಇಷ್ಟವಿಲ್ಲ. ಸಂತೋಷವನ್ನು ಹರಡಲು ನಾನು ಇಷ್ಟಪಡುತ್ತೇನೆ ಮತ್ತು ಸೋಮಿ ನನ್ನ ಜೀವನದಲ್ಲಿ ಸಂತೋಷನ್ನು ತಂದಿದ್ದಾಳೆ. ನಾನು ಅವಳೊಂದಿಗೆ ಸಂತೋಷದ ಮತ್ತು ನೆಮ್ಮದಿಯಾದ ಜೀವನ ನಡೆಸುತ್ತೇನೆ ಎಂದು ಆದಿಲ್​ ತಿಳಿಸಿದ್ದಾರೆ.

    ಅಂದಹಾಗೆ ಆದಿಲ್​ ಮತ್ತು ಸೋಮಿ ಮಾರ್ಚ್​ 3ರಂದು ನಿಖಾ ಆದರು. ತುಂಬಾ ಅದ್ಧೂರಿಯಾಗಿ ವಿವಾಹವಾಗದೇ ಕುಟುಂಬ ಮತ್ತು ಕೆಲವೇ ಆಪ್ತರ ಸಮ್ಮುಖದಲ್ಲಿ ಸೋಮಿ ಮದುವೆಯಾದರು. ನಿಮ್ಮ ಆಶೀರ್ವಾದಕ್ಕಾಗಿ ನಾವು ಕೃತಜ್ಞರಾಗಿರುತ್ತೇವೆ ಮತ್ತು ನಮ್ಮ ಕುಟುಂಬಗಳು ಹಾಗೂ ಸ್ನೇಹಿತರ ಪ್ರೀತಿ ಮತ್ತು ಬೆಂಬಲಕ್ಕಾಗಿ ನಾವು ಋಣಿಯಾಗಿರುತ್ತೇವೆ. ಗಂಡ ಮತ್ತು ಹೆಂಡತಿಯಾಗಿ ನಾವಿಬ್ಬರು ಹೊಸ ಪ್ರಯಾಣವನ್ನು ಪ್ರಾರಂಭಿಸಲು ಉತ್ಸುಕರಾಗಿದ್ದೇವೆ ಎಂದು ಆದಿಲ್​ ಹೇಳಿದ್ದಾರೆ.

    ರಾಖಿ ಸಾವಂತ್​ ಮತ್ತು ಆದಿಲ್​ ಖಾನ್​ ದುರಾನಿ ಕಳೆದ ವರ್ಷ ಜುಲೈ ತಿಂಗಳಲ್ಲಿ ಮದುವೆಯಾದರು. ಆದರೆ, ಕೆಲವೇ ತಿಂಗಳುಗಳಲ್ಲಿ ಆತನಿಂದ ದೂರವಾದರು. ಅಲ್ಲದೆ, ಆದಿಲ್​ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿದರು. ಆದಿಲ್​ ನನಗೆ ಮೋಸ ಮಾಡಿದ್ದಾನೆ. ನನ್ನನ್ನು ಬಳಸಿಕೊಂಡು ಆತ ಬಾಲಿವುಡ್​ ಪ್ರವೇಶಿಸಲು ಬಯಸುತ್ತಿದ್ದಾನೆ. ಆದಿಲ್​ ಓರ್ವ ಸುಳ್ಳುಗಾರ. ಒಂದು ಹುಡುಗಿಯನ್ನು ಮೊಬೈಲ್​ನಲ್ಲಿ ಬ್ಲಾಕ್​ ಮಾಡುತ್ತೇನೆ ಅಂತಾ ಕುರಾನ್​ ಮೇಲೆ ಆಣೆ ಮಾಡಿದ್ದ. ಆದರೆ, ಅದರಂತೆ ಆತ ನಡೆದುಕೊಳ್ಳಲಿಲ್ಲ. ಇದೀಗ ಆ ಹುಡುಗಿ ಆತನನ್ನು ಬ್ಲಾಕ್​ಮೇಲ್​ ಮಾಡುತ್ತಿದ್ದಾಳೆ. ಅವಳ ಬಳಿ ಆದಿಲ್​ ಕುರಿತ ಕೆಲವು ಕೊಳಕು ವಿಡಿಯೋ ಸಾಕ್ಷಿಗಳು ಇವೆ. ನನ್ನನ್ನು ಸಾಯಿಸಲು ಸುಪಾರಿ ಕೂಡ ನೀಡಿದ್ದಾನೆ ಎಂದೆಲ್ಲ ರಾಖಿ ಆರೋಪ ಮಾಡಿದ್ದಳು. ರಾಖಿ ಆರೋಪ ಬಳಿಕ ಆದಿಲ್ ಅವರನ್ನು ಫೆಬ್ರವರಿ 2023 ರಲ್ಲಿ ಆದಿಲ್ ಅವರನ್ನು ಬಂಧಿಸಿ, ನಂತರ ಬಿಡುಗಡೆ ಮಾಡಲಾಯಿತು. (ಏಜೆನ್ಸೀಸ್​)

    ಗುಟ್ಟಾಗಿ 2ನೇ ಮದುವೆಯಾದ ರಾಖಿ ಸಾವಂತ್​ ಮಾಜಿ ಪತಿ ಆದಿಲ್! ಯಾರು ಈ ಸೋಮಿ ಖಾನ್?​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts