More

    ಒಂದೇ ಮಗು ಎಂಬ ಚಿಂತನೆ ಬಿಡಿ

    ಶಿವಮೊಗ್ಗ: ಒಂದೇ ಮಗು ಸಾಕು ಎಂಬ ಮನೋಭಾವವನ್ನು ದಂಪತಿ ಹೊಂದುವುದು ಸೂಕ್ತವಲ್ಲ. ಇದರಿಂದ ಅನೇಕ ಕುಟುಂಬಗಳು ಸಮಸ್ಯೆ, ಸಂಕಷ್ಟ, ನೋವು ಎದುರಿಸಿರುವ ನಿದರ್ಶನಗಳಿವೆ ಎಂದು ಸೋಂದಾ ಸ್ವರ್ಣವಲ್ಲಿ ಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
    ನಗರದಲ್ಲಿ ಸೋಮವಾರ ಗುರು ಪಾದುಕಾ ಪೂಜೆ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಇತ್ತೀಚೆಗೆ ಹಿಂದು ಸಮಾಜದ ದಂಪತಿ ಒಂದು ಎಂಬ ಅನುಸರಣೆಯಲ್ಲಿ ತೊಡಗಿದ್ದಾರೆ. ಇದನ್ನು ಕೈ ಬಿಡುವುದು ಅವಶ್ಯ. ಒಂದೇ ಮಗುವಿಗೆ ಜನ್ಮ ನೀಡಿ ಅದು ಅಕಾಲ ಮರಣಕ್ಕೀಡಾದರೆ ದಂಪತಿ ಜೀವನ ಪರ್ಯಂತ ನೋವು ಅನುಭವಿಸಬೇಕಾಗುತ್ತದೆ ಎಂದರು.
    ನಮ್ಮ ಮಠದ ಭಕ್ತರಾಗಿದ್ದ ಪೂನಾದ ಆಯುರ್ವೇದ ವೈದ್ಯ ದಂಪತಿ ಅನೇಕ ಬಾರಿ ಮಠಕ್ಕೆ ಬಂದಿದ್ದರು. ಕೆಲ ವರ್ಷಗಳ ಹಿಂದೆ ಅವರ ವಂಶದ ಕುಡಿ ಆತ್ಮಹತ್ಯೆಗೆ ಶರಣಾಯಿತು. ನಂತರ ಆ ದಂಪತಿ ಜೀವನೋತ್ಸಾಹವನ್ನೇ ಕಳೆದುಕೊಂಡರು. ಇಂತಹ ಅನೇಕ ಘಟನೆಗಳನ್ನು ನಾವು ಗಂಭೀರವಾಗಿ ಕಾಣಬೇಕು ಎಂದು ತಿಳಿಸಿದರು.
    ಇದ್ದ ಒಂದೇ ಮಗುವನ್ನು ಕಳೆದುಕೊಂಡ ಕೆಲ ಪಾಲಕರು ಅದೇ ವೇದನೆಯಲ್ಲಿ ಅಂತ್ಯಕಂಡ ನಿದರ್ಶನಗಳೂ ಇವೆ. ಹೀಗಾಗಿ ಒಂದು ದಂಪತಿ-ಒಂದು ಮಗು ಎಂಬ ಚಿಂತನೆಯನ್ನು ಕೈಬಿಡುವುದು ಒಳಿತು. ದಂಪತಿ ಕನಿಷ್ಟ ಮೂರು ಮಕ್ಕಳನ್ನಾದರೂ ಪಡೆಯಬೇಕೆಂದು ಹೇಳಿದರು.
    ಹವ್ಯಕ ಸಮಾಜದ ಪ್ರಮುಖರಾದ ಅಶೋಕ ಜಿ.ಭಟ್ಟ, ಟಿ.ಟಿ.ಹೆಗಡೆ, ಲಕ್ಷ್ಮೀನಾರಾಯ ಕಾಶಿ, ಮೋಹನ್ ಹೆಗಡೆ, ಸುಮಾ, ರಮೇಶ್, ಲಕ್ಷ್ಮೀನಾರಾಯಣ, ದೇವೇಂದ್ರ ಮುಂತಾದವರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts