More

    ಶಿಮುಲ್‌ಗೆ ಎಫ್‌ಎಸ್‌ಎಸ್‌ಒ ಗರಿ

    ಶಿವಮೊಗ್ಗ: ಶಿಮುಲ್ (ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ)ಗೆ ಉತ್ಕೃಷ್ಟ ಗುಣಮಟ್ಟ ಹಾಗೂ ಆಹಾರ ಸುರಕ್ಷತೆ ದೃಷ್ಟಿಯಿಂದ ಎಫ್‌ಎಸ್‌ಎಸ್‌ಸಿ (ಫುಡ್ ಸೇಫ್ಟಿ ಸಿಸ್ಟಂ ಸರ್ಟಿಫೀಕೇಶನ್) ವಿಶ್ವ ಮಾನ್ಯತೆ ದೊರೆತಿದೆ.
    ಎಫ್‌ಎಸ್‌ಎಸ್‌ಸಿ ದೃಢೀಕರಣವು ಐಎಸ್‌ಒ(ಇಂಟರ್ನ್ಯಾಷನಲ್ ಆರ್ಗನೈಸೇಶನ್ ಫಾರ್ ಸ್ಟ್ಯಾಂಡರ್ಡೈಸೇಶನ್)ನ ಮುಂದುವರಿದ ಭಾಗವಾಗಿದ್ದು ಎಫ್‌ಎಸ್‌ಎಸ್‌ಸಿ22000:ವಿ5.1 ಪ್ರಮಾಣಪತ್ರವು 2022ರ ಜುಲೈನಲ್ಲಿ ಒಕ್ಕೂಟಕ್ಕೆ ಲಭಿಸಿದೆ. ಇಲ್ಲಿ ಆಯ್ದ ಪ್ರಮಾಣೀಕರಣ ಸಂಸ್ಥೆಗಳಿಂದ ಅಧಿಕಾರಿಗಳು, ನಿಯೋಜಿಸಿದ ಸಮಯದಲ್ಲಿ ಒಕ್ಕೂಟಕ್ಕೆ ಭೇಟಿ ನೀಡಿ ಗುಣಮಟ್ಟ ಹಾಗೂ ಆಹಾರ ಸುರಕ್ಷತೆಗೆ ಸಂಬಂಧಿಸಿದಂತೆ ಕೂಲಂಕಶವಾಗಿ ಪರಿಶೀಲಿಸಿ ಅವರ ಸಮಾನತ ನಿಯತಾಂಕಗಳು ಸಮರ್ಪಕವಾಗಿ ಪೂರ್ತಿಯಾದ ಬಳಿಕ ಸಂಬಂಧಿಸಿದ ದೃಢೀಕರಣ ಪ್ರಮಾಣಪತ್ರ ನೀಡಿದ್ದಾರೆ.
    ಒಮ್ಮೆ ದೃಢೀಕರಣ ಪಡೆದ ನಂತರ ಸಂಬಂಧಿಸಿದ ಪ್ರಮಾಣೀಕರಿಸಿದ ಸಂಸ್ಥೆಗಳಿಂದ ಅಧಿಕಾರಿಗಳು ಮೂರು ವರ್ಷದ ಅವಧಿಯೊಳಗೆ ಯಾವುದೇ ಸಮಯದಲ್ಲಿ ಮುನ್ನೆಚ್ಚರಿಕೆ ಇಲ್ಲದೆ ಒಕ್ಕೂಟಕ್ಕೆ ಭೇಟಿ ನೀಡಿ ಪರಿಶೀಲಿಸಬಹುದು. ಈ ದೃಢೀಕರಣವು ಅಂತಾರಾಷ್ಟ್ರೀಯಮಟ್ಟದಲ್ಲಿ ತನ್ನದೇ ಆದ ಮಹತ್ವ ಹೊಂದಿದೆ. ಈ ದೃಢೀಕರಣ ಪಡೆದ ಸಂಸ್ಥೆಗಳು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತವೆ. ಆದೇ ರೀತಿ ನಮ್ಮ ಒಕ್ಕೂಟವು ಜಾಗತಿಕಮಟ್ಟದಲ್ಲಿ ಗುರುತಿಸಿಕೊಂಡಿದ್ದು, ನಮ್ಮ ಒಕ್ಕೂಟಕ್ಕೆ ಸಂಬಂಧಿಸಿದ ಮಾಹಿತಿಗಳು ಅಂತಾರಾಷ್ಟ್ರೀಯಮಟ್ಟದಲ್ಲಿ ವ್ಯವಹರಿಸುವ ಸಂಸ್ಥೆಗಳಿಗೆ ಸುಲಭವಾಗಿ ಸಿಗುತ್ತವೆ. ಇದರಿಂದ ನಮ್ಮ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಕಲ್ಪಿಸಿಕೊಡುವಲ್ಲಿ ಸಹಕಾರಿಯಾಗಲಿದೆ.
    ಒಕ್ಕೂಟದ ಅಧ್ಯಕ್ಷ ಎನ್.ಎಚ್.ಶ್ರೀಪಾದರಾವ್, ನಿರ್ದೇಶಕರಾದ ಸಿ.ವೀರಭದ್ರಬಾಬು, ಡಿ.ಆನಂದ, ವಿದ್ಯಾಧರ, ಜಗದೀಶಪ್ಪ ಬಣಕಾರ್, ಪಿ.ತಿಪ್ಪೇಸ್ವಾಮಿ, ಎಚ್.ಬಿ.ದಿನೇಶ್, ಬಿ.ಜಿ.ಬಸವರಾಜಪ್ಪ, ಕೆ.ಎ.ತಾರನಾಥ, ಸೋಮಶೇಖರಪ್ಪ, ಜೆ.ಪಿ.ಯಶವಂತರಾಜು, ಎನ್.ಎಚ್.ಭಾಗ್ಯಾ, ಎಸ್.ಡಿ.ಹರೀಶ್, ವಿಕ್ರಮ್ ಎಂ.ಪಾಟೀಲ್, ವ್ಯವಸ್ಥಾಪಕ ನಿರ್ದೇಶಕ ಡಾ. ಕೆ.ಎಸ್.ಬಸವರಾಜ ಸಮ್ಮುಖದಲ್ಲಿ ಎಫ್‌ಎಸ್‌ಎಸ್‌ಸಿ-22000 ವಿ5.1 ದೃಢೀಕರಣ ಪಡೆದ ಪತ್ರ ಬಿಡುಗಡೆ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts