More

    ನದಿ ಉಳಿಸುವುದು ನಮ್ಮ ಜವಾಬ್ದಾರಿ

    ಅಫಜಲಪುರ: ಭೀಮಾ ನದಿಯಲ್ಲಿ ಮಳೆ ಬಂದರೆ ಪ್ರವಾಹ ಬರುತ್ತದೆ. ಬೇಸಿಗೆಯಲ್ಲಿ ಬರಿದಾಗುತ್ತದೆ. ಮಹಾರಾಷ್ಟç ಸರ್ಕಾರ ನದಿ ದಿಕ್ಕು ಬದಲಿಸಿದ್ದು, ಬಚಾವತ್ ತೀರ್ಪಿನ ಪ್ರಕಾರ ನಮ್ಮ ಹಕ್ಕಿನ ನೀರು ಪಡೆಯಲು ಹೋರಾಡೋಣ ಎಂದು ಶಾಸಕ ಎಂ.ವೈ.ಪಾಟೀಲ್ ಹೇಳಿದರು.
    ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಭೀಮಾ ನದಿಗೆ ನೀರು ಹರಿಸುವಂತೆ ಆಗ್ರಹಿಸಿ ಶಿವಕುಮಾರ ನಾಟಿಕಾರ ನೇತೃತ್ವದಲ್ಲಿ ನಡೆಯುತ್ತಿರುವ ಅಮರಣಾಂತ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಭಾನುವಾರ ಭೇಟಿ ನೀಡಿ ಮಾತನಾಡಿ, ಮಹಾ ಸರ್ಕಾರದ ಮೇಲೆ ಒತ್ತಡ ಹಾಕಿ ಉಜನಿ ಜಲಾಶಯದಿಂದ ಹಿಳ್ಳಿ ಬ್ಯಾರೇಜ್‌ಗೆ ಬರುತ್ತಿರುವ ನೀರನ್ನು ಭೀಮಾ ಜಲಾಶಯಕ್ಕೆ ಹರಿಸುವಂತೆ, ಉಜನಿ ಜಲಾಶಯಕ್ಕೆ ತಜ್ಞರ ಸಮಿತಿ ಕಳುಹಿಸಲು ಸರ್ಕಾರಕ್ಕೆ ಒತ್ತಡ ಹೇರಲಾಗುವುದು. ಸತ್ಯಾಗ್ರಹ ಕೈಬಿಡಬೇಕು ಎಂದರು.
    ಶಾಸಕ ಯಶವಂತರಾಯಗೌಡ ಪಾಟೀಲï ಮಾತನಾಡಿ, ನದಿ ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ.ಗಡಿವರೆಗೆ ನೀರು ಬಿಟ್ಟಿದ್ದು, ಹಿಳ್ಳಿಯಿಂದ ನೀರು ಹರಿಸಿದರೆ ನಮಗೆ ತಲುಪುತ್ತವೆ. ರಾಕೇಶ ಸಿಂಗ್ ಜತೆ ಮಾತನಾಡಿದ್ದು, ಒಂದು ಟಿಎಂಸಿ ನೀರು ಬಿಡಲು ಒಪ್ಪಿದ್ದಾರೆ. ಭೀಮಾ ಮಿಸ್‌ಮ್ಯಾನೆಜ್ಮೆಂಟ್‌ನಿAದ ನಮ್ಮ ಭಾಗ ಪ್ರವಾಹದಿಂದ ಹಾನಿಯಾಗುತ್ತಿದೆ. ಬಳಗಾನೂರ ಕೆರೆಯಿಂದ ೧ ಟಿಎಂಸಿ ನೀರು ಬಿಡುತ್ತೇವೆ ಎಂದಿz್ದÁರೆ ಆದರೆ ಹೆಚ್ಚಿಗೆ ನೀರು ಬಿಡಿಸಲು ಪ್ರಯತ್ನಿಸುತ್ತೇವೆ ಎಂದರು.
    ಹೋರಾಟಗಾರ ಶಿವಕುಮಾರ ನಾಟೀಕಾರ ಮಾತನಾಡಿ, ೧೯೬೯ರ ಬಚಾವತ್ ತೀರ್ಪಿನ ಪ್ರಕಾರ ಮಹಾರಾಷ್ಟç ಆರು ವರ್ಷದಲ್ಲಿ ಉಜನಿ ಜಲಾಶಯ ನಿರ್ಮಿಸಿದರೂ ನಮ್ಮ ಸರ್ಕಾರ ವಿಳಂಬ ಮಾಡಿವೆ. ಧೂಳಕೇಡದಲ್ಲಿ ಜಲ ಮಾಪನ ಕೇಂದ್ರ ಮಾಹಿತಿ ನೀಡುತ್ತಿಲ್ಲ. ಬಚಾವತ್ ತೀರ್ಪು ಬಂದು ೪೮ ವರ್ಷವಾದರೂ ಕರ್ನಾಟಕ ನೀರು ಬಳಕೆಯಲ್ಲಿ ಹಿಂದಿದೆ. ಮಹಾ ಸರ್ಕಾರ ಕೇಂದ್ರ ಜಲ ಆಯೋಗದ ಅನುಮತಿ ಇಲ್ಲದೆ ಅಕ್ರಮವಾಗಿ ಸುರಂಗ ಮಾರ್ಗದ ಮೂಲ ಸೀನಾ ನದಿಗೆ ನೀರು ಹರಿಸುತ್ತಿದೆ. ಸದ್ಯ ಭೀಮೆಗೆ ಉಜನಿ ಬದಲಾಗಿ ಯುಕೆಪಿ ಕಾಲುವೆ ಮೂಲಕ ನೀರು ಬರುತ್ತಿದೆ. ಭವಿಷ್ಯ ಕಷ್ಟಕರವಾಗಿದೆ ಎಂದರು.
    ಸತ್ಯಾಗ್ರಹದಲ್ಲಿ ಜಿಪಂ ಮಾಜಿ ಸದಸ್ಯ ಅರುಣಕುಮಾರ ಪಾಟೀಲ್, ಅರುಣಕುಮಾರ ಪಾಟೀಲ್ ಗೊಬ್ಬೂರ, ಮಕ್ಬುಲï ಪಟೇಲï, ಸದಾಶಿವ ಮೇತ್ರಿ, ಚಂದು ದೇಸಾಯಿ, ಶಂಕರಗೌಡ ಪಾಟೀಲï, ಶಾಂತಕುಮಾರ ಅಂಜುಟಗಿ, ಚಿದಾನಂದ ಮಠ, ಸಂತೋಷ ದಾಮಾ, ರಾಜು ಚವ್ಹಾಣ್, ಬಸವರಾಜ ವಾಳಿ, ದಯಾನಂದ ದೊಡ್ಡಮನಿ, ಮಹಾಂತೇಶ ಬಡದಾಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts