More

    ಕ್ಯಾತಿನಕೊಪ್ಪದಲ್ಲಿ ಬೋನಿಗೆ ಬಿದ್ದ ಚಿರತೆ

    ಶಿವಮೊಗ್ಗ: ತಾಲೂಕಿನ ಕ್ಯಾತಿನಕೊಪ್ಪದಲ್ಲಿ 6ರಿಂದ 7 ವರ್ಷದ ಗಂಡು ಚಿರತೆಯೊಂದು ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಗುರುವಾರ ರಾತ್ರಿ ಬಿದ್ದಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಸುರಕ್ಷಿತವಾಗಿ ಶಿವಮೊಗ್ಗ ವಿಭಾಗದ ಕಾಡಿಗೆ ಬಿಟ್ಟಿದ್ದಾರೆ.
    ಕಳೆದೊಂದು ತಿಂಗಳಿಂದ ಹೊಳಲೂರು ಸಮೀಪದ ಕ್ಯಾತಿನಕೊಪ್ಪ ಸುತ್ತಲಿನ ಭಾಗದಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿತ್ತು. ಗ್ರಾಮಕ್ಕೆ ನುಗ್ಗಿ ಬೀದಿ ನಾಯಿಗಳನ್ನು ಹೊತ್ತೊಯ್ದಿತ್ತು. ಈ ಬಗ್ಗೆ ಸಾರ್ವಜನಿಕರು ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದರು. ಶಿವಮೊಗ್ಗ ಶಂಕರ ವಲಯದ ಸಿಬ್ಬಂದಿ 8ರಿಂದ 10 ದಿನಗಳ ಹಿಂದೆ ಗ್ರಾಮದಲ್ಲಿ ಬೋನು ಇಟ್ಟು ಕ್ಯಾಮೆರಾ ಮೂಲಕ ನಿಗಾವಹಿಸಿದ್ದರು.
    ಗುರುವಾರ ರಾತ್ರಿ ನಾಯಿ ಹಿಡಿಯಲು ಬಂದಿದ್ದ ಚಿರತೆ ಗ್ರಾಮದ ತೋಟವೊಂದರಲ್ಲಿ ಇಟ್ಟಿದ್ದ ಬೋನಿನಲ್ಲಿ ಸೆರೆಯಾಗಿದ್ದು ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ರಾತ್ರಿಯೇ ಸಿಬ್ಬಂದಿ ಲಾರಿಯಲ್ಲಿ ಕೊಂಡೊಯ್ದು ಶಿವಮೊಗ್ಗ ವಿಭಾಗದ ಅರಣ್ಯಕ್ಕೆ ಬಿಟ್ಟು ಬಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts