More

    ಯಾವುದಕ್ಕೆ ಹೋರಾಟ ಮಾಡ್ಬೇಕು ಗೊತ್ತಿಲ್ಲ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್

    ಶಿವಮೊಗ್ಗ: ದಿನಕ್ಕೆ ಮೂರ‌್ನಾಲ್ಕು ಬಿಜೆಪಿ ಹಗರಣ ಬೆಳಕಿಗೆ ಬರುತ್ತವೆ. ಯಾವುದಕ್ಕೆ ಹೋರಾಟ ಮಾಡಬೇಕು ಎಂಬುದೇ ತೋಚುತ್ತಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಹೇಳಿದರು.
    ಬಿಜೆಪಿಯವರು ದಿನಕ್ಕೆ 10 ಸಮಸ್ಯೆ ಹುಟ್ಟು ಹಾಕುತ್ತಾರೆ. ಈ ಮೂಲಕ ಹೋರಾಟಗಾರರಲ್ಲೂ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಹೋರಾಟಕ್ಕೂ ಬೆಲೆ ಇಲ್ಲದಂತಹ ಅರಾಜಕತೆ ಸೃಷ್ಟಿ ಮಾಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಅಸಹಾಯಕತೆ ವ್ಯಕ್ತಪಡಿಸಿದರು. ಯಾವ ವಿಷಯವನ್ನಿಟ್ಟುಕೊಂಡು ಪ್ರತಿಭಟನೆ ಮಾಡೋದು ಎಂಬುದೇ ತಿಳಿಯುತ್ತಿಲ್ಲ. ಅಧ್ಯಕ್ಷನಾದ ಮೇಲೆ ನನ್ನ ನೇತೃತ್ವದಲ್ಲಿ 4 ವರ್ಷದಲ್ಲಿ 300 ಬಾರಿ ಪ್ರತಿಭಟನೆ ಮಾಡಲಾಗಿದೆ. ಬಿಜೆಪಿ ಸರ್ಕಾರ ಮನೆಗೆ ಹೋಗುವವರೆಗೂ ನಮ್ಮ ಹೋರಾಟ ನಿರಂತರವಾಗಿದೆ ಎಂದರು.
    ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಐದು ವರ್ಷ ಕಳಂಕ ರಹಿತವಾಗಿ ಆಡಳಿತ ನಡೆಸಿದ್ದಾರೆ. ಅಂತಹ ನಾಯಕನನ್ನು ಹತ್ಯೆ ಮಾಡುವಂತೆ ಪ್ರಚೋದನಾಕಾರಿ ಹೇಳಿಕೆ ನೀಡಿರುವ ಸಚಿವ ಸಿ.ಎನ್.ಅಶ್ವತ್ಥನಾರಾಯಣ ವಿರುದ್ಧ ಸರ್ಕಾರ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ನಾಚಿಗೇಡಿನ ಸಂಗತಿ ಎಂದು ಕಿಡಿಕಾರಿದರು. ಪೊಲೀಸರು ಕೂಡ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿಲ್ಲ. ಸರ್ಕಾರ ತಕ್ಷಣವೇ ಸಚಿವರ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದರು.
    ಕಿವಿಗೆ ಹೂವು: ಅವರೇನು ನಮ್ಮ ಕಿವಿಗೆ ಹೂ ಇಡೋದು! ನಾವೇ ಇಟ್ಟುಕೊಳ್ಳುತ್ತೇವೆ. ಸೋಮವಾರ ಸುದ್ದಿಗೋಷ್ಠಿಗೆ ಕಿವಿ ಮೇಲೆ ಹೂವು ಇಟ್ಟುಕೊಂಡು ಬಂದಿದ್ದ ಸುಂದರೇಶ್ ಸಮರ್ಥನೆ ಮಾಡಿಕೊಂಡ ಶೈಲಿ ಇದು. ಸರ್ಕಾರ ಬಜೆಟ್ ಮೂಲಕ ಎಲ್ಲರ ಕಿವಿಗೆ ಹೂವಿಟ್ಟಿದೆ. ಅದಕ್ಕೆ ಪ್ರತಿಯಾಗಿ ನಾವೇ ಹೂವಿಟ್ಟುಕೊಂಡು ಬಂದಿದ್ದೇವೆ ಎಂದು ಹೇಳಿದರು. ಮುಖಂಡರಾದ ಇಕ್ಕೇರಿ ರಮೇಶ್, ಎಚ್.ಪಿ.ಗಿರೀಶ್, ಚಂದ್ರಶೇಖರ್, ಕೃಷ್ಣಪ್ಪ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts