More

    ಐಪಿಎಲ್​ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಶಿಖರ್​ ಧವನ್​; ಏನದು?

    ಚಂಡೀಗಢ: ಇಲ್ಲಿನ ಮಹಾರಾಜ ಯಾದವೀಂದ್ರ ಸಿಂಗ್​ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಪಂಜಾಬ್​ ಕಿಂಗ್ಸ್​ ಗೆದ್ದು ಬೀಗಿದ್ದು, ರಿಷಭ್​ ಪಂತ್​ ಪಡೆಗೆ ಆಘಾತವನ್ನು ನೀಡಿದೆ. ಇನ್ನು 17ನೇ ಆವೃತ್ತಿಯ ಮೊದಲ ಪಂದ್ಯದಲ್ಲೇ ಪಂಜಾಬ್​ ಕಿಂಗ್ಸ್​ ನಾಯಕ ಶಿಖರ್​ ಧವನ್​ ಹೊಸ ದಾಖಲೆಯೊಂದನ್ನು ಬರೆದಿದ್ದು, ಈ ದಾಖಲೆ ಬರೆದ ಮೊದಲ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ಶಿಖರ್ ಧವನ್ 16 ಎಸೆತಗಳಲ್ಲಿ 4 ಬೌಂಡರಿಗಳನ್ನು ಒಳಗೊಂಡಂತೆ 22 ರನ್ ಗಳಿಸಿದರು. ಶಿಖರ್​ ಬಾರಿಸಿದ ಈ ನಾಲ್ಕು ಫೋರ್​ಗಳೊಂದಿಗೆ ಐಪಿಎಲ್ ಇತಿಹಾಸದಲ್ಲಿ 900 ಬೌಂಡರಿಗಳನ್ನು ಬಾರಿಸಿದ ಮೊದಲ ಬ್ಯಾಟರ್ ಎಂಬ ದಾಖಲೆಯನ್ನು ಗಬ್ಬರ್ ತಮ್ಮದಾಗಿಸಿಕೊಂಡಿದ್ದಾರೆ.

    Shikhar Dhawan

    ಇದನ್ನೂ ಓದಿ: ಸೋಲಿನೊಂದಿಗೆ ಅಭಿಯಾನ ಆರಂಭ; ಆರ್​ಸಿಬಿ ನಾಯಕ ಫಾಫ್​ ನೀಡಿದ ಕಾರಣ ಹೀಗಿದೆ

    ಶಿಖರ್ ಧವನ್ 217 ಐಪಿಎಲ್​ ಇನಿಂಗ್ಸ್​ಗಳಲ್ಲಿ 754 ಫೋರ್​ಗಳು ಮತ್ತು 148 ಸಿಕ್ಸ್​ಗಳನ್ನು ಬಾರಿಸುವ ಮೂಲಕ 902 ಬೌಂಡರಿಗಳ ಸಾಧನೆ ಮಾಡಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ 900 ಬೌಂಡರಿಗಳ ಗಡಿದಾಟಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. ಶಿಖರ್ ಧವನ್ ಅವರ ನಂತರದ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಇದ್ದು, ಇದುವರೆಗೆ 898 ಬೌಂಡರಿಗಳನ್ನು ಸಿಡಿಸಿದ್ದಾರೆ. 877 ಬೌಂಡರಿಗಳನ್ನು ಸಿಡಿಸುವ ಮೂಲಕ ಡಲ್ಲಿ ಕ್ಯಾಪಿಟಲ್ಸ್​ ತಂಡದ ಆರಂಭಿಕ ಡೇವಿಡ್​ ವಾರ್ನರ್​ ಮೂರನೇ ಸ್ಥಾನದಲ್ಲಿದ್ದಾರೆ.

    ಶನಿವಾರ ಮಹಾರಾಜ ಯಾದವೀಂದ್ರ ಸಿಂಗ್​ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್​ ತಂಡವು 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 174 ರನ್​ ಕಲೆಹಾಕಿತ್ತು. 175 ರನ್​ಗಳ ಗುರಿ ಬೆನ್ನತ್ತಿದ್ದ ಪಂಜಾಬ್​ ತಂಡವು ಸ್ಯಾಮ್​ ಕರ್ರನ್​ ಅರ್ಧಶತಕದ ನೆರವಿನೊಂದಿಗೆ 19.2 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 177 ರನ್​ ಸಿಡಿಸಿ ಗೆಲುವಿನ ನೆಗ ಬೀರಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts