More

    ಈ ಕಾರಣಕ್ಕೆ ಆರ್​ಸಿಬಿ ಸತತವಾಗಿ ಸೋಲುತ್ತಿದೆ; ಮಾಜಿ ಕ್ರಿಕೆಟಿಗ ನೀಡಿದ ವಿವರಣೆ ವೈರಲ್

    ಬೆಂಗಳೂರು: 17ನೇ ಆವೃತ್ತಿಯ ಐಪಿಎಲ್​ ರಾಯಲ್​ ಚಾಲೆಂಜರ್ಸ್​ ಬೆಂಗಳೂರಿಗೆ ಅಂದುಕೊಂಡಂತೆ ಆಗುತ್ತಿಲ್ಲ. ಏಕೆಂದರೆ ಆರ್​ಸಿಬಿ ಪಾಲಿಗೆ ಹೊಸ ಅಧ್ಯಾಯ ದೊಡ್ಡ ಹೊಡೆತ ನೀಡಿದ್ದು, ಆಡಿರುವ 8 ಪಂದ್ಯಗಳ ಪೈಕಿ 7ರಲ್ಲಿ ಸೋತು 1ರಲ್ಲಿ ಗೆಲ್ಲುವ ಮೂಲಕ ಅನಧಿಕೃತವಾಗಿ ಪ್ಲೇಆಫ್​ನಿಂದ ಹೊರಬಿದ್ದಿದೆ. ಹಾಲಿ ಆವೃತ್ತಿಯಲ್ಲಿ ಆರ್​ಸಿಬಿ ಪ್ರದರ್ಶನಕ್ಕೆ ಮಾಜಿ ಕ್ರಿಕೆಟಿಗರು ಸೇರಿದಂತೆ ಹಲವರು ಕಿಡಿಕಾರುತ್ತಿದದು, ಇದಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ ಆರನ್​ ಫಿಂಚ್​ ಕಾರಣವನ್ನು ನೀಡಿದ್ದಾರೆ.

    ಸ್ಟಾರ್​ ಸ್ಪೋರ್ಟ್ಸ್​ ಸುದ್ದಿವಾಹಿನಿಯ ಸಂದರ್ಶನದಲ್ಲಿ ಆರ್​ಸಿಬಿಯ ಪ್ರದರ್ಶನದ ಕುರಿತು ಮಾತನಾಡಿದ ಆರನ್​ ಫಿಂಚ್​ ಹಾಲಿ ಟೂರ್ನಿಯಲ್ಲಿ ಸತತ ಸೋಲುಗಳ ಕುರಿತಾದ ಕಾರಣಗಳನ್ನು ವಿವರಿಸುತ್ತ ಹೋಗಿದ್ದಾರೆ.

    ಹಾಲಿ ಟೂರ್ನಿಯಲ್ಲಿ ಆರ್​ಸಿಬಿ ಸತತವಾಗಿ ಸೋಲಲು ನನ್ನ ಪ್ರಕಾರ ಎರಡು ಕಾರಣಗಳಿವೆ. ಮೊದಲನೆಯದ್ದು, ಹೆಚ್ಚಾಗಿ ಬ್ಯಾಟ್ಸ್​ಮನ್​ಗಳ ಮೇಲೆ ಅವಲಂಬಿತರಾಗುವುದು ಮತ್ತು ಎರಡನೇಯದ್ದು ವಿಶ್ವದರ್ಜೆಯ ಸ್ಪಿನ್ನರ್​ ತಂಡದಲ್ಲಿ ಇಲ್ಲದೇ ಇರುವುದು ಎಂದು ಹೇಳುತ್ತೇನೆ. ಏಕೆಂದರೆ ಕಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿಗೆ ಸ್ಪಿನ್ನರ್​ನ ಕೊರತೆ ಎದ್ದು ಕಾಣಿಸುತ್ತಿತ್ತು ಎಂದು ಹೇಳಿದ್ದಾರೆ.

    Aaron Green

    ಇದನ್ನೂ ಓದಿ: ಮತದಾನಕ್ಕಾಗಿ ರ್‍ಯಾಪಿಡೋ ವತಿಯಿಂದ ಉಚಿತ ಸೇವೆ; ಯಾರೆಲ್ಲಾ ಇದರ ಸೇವೆ ಪಡೆಯಬಹುದು, ಇಲ್ಲಿದೆ ಮಾಹಿತಿ

    ಮಧ್ಯಮ ಕ್ರಮಾಂಕದಲ್ಲಿ ಆಸ್ಟ್ರೇಲಿಯಾ ಮೂಲದ ಆಲ್ರೌಂಡರ್ ಕ್ಯಾಮರೂನ್​ ಗ್ರೀನ್​ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಇಳಿಸುವುದು ಸೂಕ್ತವಲ್ಲ ಎಂದು ಹೇಳುತ್ತೇನೆ. ಏಕೆಂದರೆ ಕೆಲವೊಮ್ಮೆ ತಂಡದಿಂದ ಹೊರಗುಳಿದಿರುವ ಆಟಗಾರರು ಮರಳಿ ಕಣಕ್ಕಿಳಿದರೆ ಒಂದಿಲ್ಲೊಂದು ಸಮಸ್ಯೆಗಳನ್ನು ಎದುರಿಸುತ್ತಾರೆ. ಏಕೆಂದರೆ ಅತಿ ದುಬಾರಿ ಬೆಲೆಗೆ ಕ್ಯಾಮರೂನ್​ ಗ್ರೀನ್​ ಅವರನ್ನು ಖರೀದಿಸಲಾಗಿದ್ದು, ಮಧ್ಯಮ ಕ್ರಮಾಂಕದ ಬದಲು ಟಾಪ್​ ಆರ್ಡರ್​​ನಲ್ಲಿ ಬ್ಯಾಟಿಂಗ್​ ಮಾಡಲು ಕಳುಹಿಸಲಾಗುತ್ತಿದೆ.

    ನನ್ನ ಪ್ರಕಾರ ಹಾಲಿ ಆವೃತ್ತಿಯಲ್ಲಿ ಆರ್​ಸಿಬಿ ಪರ ಕ್ಯಾಮರೂನ್​ ಗ್ರೀನ್​ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುತ್ತಿಲ್ಲ. ದುಬಾರಿ ಮೊತ್ತ ಪಡೆದರು ತಾವಾಡುತ್ತಿರುವ ತಂಡಕ್ಕೆ ನ್ಯಾಯ ಒದಗಿಸದೆ ಇರುವುದು ಸೂಕ್ತವಲ್ಲ. ಇಷ್ಟರ ಹೊರತಾಗಿಯೂ ಆರ್​ಸಿಬಿ ಒಂದು ವೇಳೆ ಪ್ಲೇಆಫ್​​ ಪ್ರವೇಶಿಸಿದರೆ ಅದು ದೊಡ್ಡ ಪವಾಡವೇ ಆಗಿರುತ್ತದೆ ಎಂದು ಮಾಜಿ ಕ್ರಿಕೆಟಿಗ ಆರನ್​ ಫಿಂಚ್​ ಅಭಿಪ್ರಾಯಪಟ್ಟಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts