ಅಲ್ಲು ಅರ್ಜುನ್​ ಅಭಿಮಾನಿಗಳಿಗೆ ಶುಭ ಸುದ್ದಿ; ಪುಷ್ಪ-2 ಚಿತ್ರತಂಡದಿಂದ ಹೊರಬಿತ್ತು ಹೊಸ ಅಪ್ಡೇಟ್

ಹೈದರಾಬಾದ್: ಸುಕುಮಾರ್​ ನಿರ್ದೇಶನದ ಅಲ್ಲು ಅರ್ಜುನ್​-ರಶ್ಮಿಕಾ ಮಂದಣ್ಣ ಜೊತೆಯಾಗಿ ನಟಿಸಿರುವ ಪುಷ್ಪ-2 ಚಿತ್ರವು ಬಿಡುಗಡೆಗೂ ಮುನ್ನವೇ ಒಂದಿಲ್ಲೊಂದು ವಿಚಾರಕ್ಕೆ ಹೆಚ್ಚು ಸದ್ದು ಮಾಡುತ್ತಿದೆ. ಈಗಾಗಲೇ ಚಿತ್ರದ ಪ್ರಚಾರ ಕಾರ್ಯ ಆರಂಭಗೊಂಡಿದ್ದು, ಅಭಿಮಾನಿಗಳು ಚಿತ್ರದ ಟ್ರೇಲರ್​​ ಹಾಗೂ ಹಾಡುಗಳಿಗೆ ಕಾತುರದಿಂದ ಕಾಯುತ್ತಿದ್ದಾರೆ. ಇದೀಗ ಚಿತ್ರತಂಡದಿಂದ ಹೊಸ ಅಪ್ಡೇಟ್​ ಒಂದು ಹೊರಬಿದ್ದಿದ್ದು, ಅಭಿಮಾನಿಗಳ ನಿರೀಕ್ಷೆಯನ್ನು ಮತ್ತಷ್ಟು ಗರಿಗೆದರಿಸಿದೆ. ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಪುಷ್ಪ-2 ಚಿತ್ರದ ಮೊದಲ ಹಾಡನ್ನು ಮೇ 01ರಂದು ಬಿಡುಗಡೆ ಮಾಡಲಾಗುವುದು ಎಂದು ತಿಳಿದು ಬಂದಿದೆ. … Continue reading ಅಲ್ಲು ಅರ್ಜುನ್​ ಅಭಿಮಾನಿಗಳಿಗೆ ಶುಭ ಸುದ್ದಿ; ಪುಷ್ಪ-2 ಚಿತ್ರತಂಡದಿಂದ ಹೊರಬಿತ್ತು ಹೊಸ ಅಪ್ಡೇಟ್