More

    ಜಾಣರಾಗಿ, ಜಾಗೃತರಾಗಿ ಮತ ಚಲಾಯಿಸಿ

    ಚಿತ್ರದುರ್ಗ: ಬೃಹತ್ತಾದ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ನಮ್ಮನ್ನಾಳುವ 543 ಲೋಕಸಭಾ ಸದಸ್ಯರನ್ನು ಆಯ್ಕೆ ಮಾಡುವ ಜವಾಬ್ದಾರಿ ಪ್ರಜಾಸತ್ತಾತ್ಮಕ ಭಾರತದ ಪ್ರಭುಗಳಾದ ಪ್ರಜೆಗಳ ಮೇಲಿದೆ. ಹೀಗಾಗಿ ಉತ್ತಮ ಆಯ್ಕೆಗಾಗಿ ಜಾಣರಾಗಿ, ಜಾಗೃತರಾಗಿ ತಪ್ಪದೆ ಮತ ಚಲಾಯಿಸಿ ಎಂದು ಶ್ರೀ ಇಮ್ಮಡಿ ಸಿದ್ಧ್ದರಾಮೇಶ್ವರ ಸ್ವಾಮೀಜಿ ಸಲಹೆ ನೀಡಿದ್ದಾರೆ.

    ಜಾತ್ಯತೀತವಾದ ಭಾರತದಲ್ಲಿನ ಬೆರಳೆಣಿಕೆಯ ಧರ್ಮಗಳಲ್ಲಿ 3ಸಾವಿರ ಜಾತಿಗಳು, 25ಸಾವಿರ ಉಪ ಜಾತಿಗಳಿವೆ. ಜನಸಂಖ್ಯೆ 144 ಕೋಟಿ ದಾಟುತ್ತಿದ್ದು, 18 ವರ್ಷ ತುಂಬಿದ ಪ್ರತಿಯೊಬ್ಬರಿಗೂ ಸಂವಿಧಾನ ಮತದಾನದ ಹಕ್ಕನ್ನು ನೀಡಿದ್ದು, ಈ ಪೈಕಿ 96.8 ಕೋಟಿ ಮಂದಿ ಅರ್ಹರಿದ್ದಾರೆ. ಆದ್ದರಿಂದ ಜವಾಬ್ದಾರಿಯುತ ಮತದಾರರು ಈ ಪ್ರಕ್ರಿಯೆಯಿಂದ ಹೊರಗುಳಿಯಬಾರದು ಎಂದು ಬುಧವಾರ ಪತ್ರಿಕಾ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.

    ಅರ್ಹರೆಲ್ಲರೂ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗಿಯಾಗಿ ಸಂಭ್ರಮಿಸಬೇಕು. ಅಮೂಲ್ಯ ಮತ ಯೋಚಿಸಿ ಚಲಾಯಿಸಿ, ಸಮರ್ಥ ಜನನಾಯಕರನ್ನು ಆಯ್ಕೆ ಮಾಡುವ ಕರ್ತವ್ಯ ನಮ್ಮೆಲ್ಲರದ್ದಾಗಿದೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts