More

    ಕಾಂಗ್ರೆಸ್​ನ ನಾಲ್ಕನೇ ಪಟ್ಟಿ ಪ್ರಕಟ; ದಿಗ್ವಿಜಯ್​, ಕಾರ್ತಿ​ ಸೇರಿದಂತೆ ಪ್ರಮುಖರು ಕಣಕ್ಕೆ

    ನವದೆಹಲಿ: ಲೋಕಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಾಂಗ್ರೆಸ್​ ಪಕ್ಷ ಭಾನುವಾರ 46 ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಉತ್ತರಪ್ರದೇಶ, ಮಹಾರಾಷ್ಟ್ರ ಸೇರಿದಂತೆ 13 ರಾಜ್ಯಗಳಿಂದ ಕಣಕ್ಕಿಳಿಯುವ ಹುರಿಯಾಳುಗಳನ್ನು ಪಟ್ಟಿಯಲ್ಲಿ ಹೆಸರಿಸಲಾಗಿದೆ.

    ಸದ್ಯ ಬಿಡುಗಡೆ ಮಾಡಲಾಗಿರುವ ನಾಲ್ಕನೇ ಪಟ್ಟಿಯಲ್ಲಿ ಉತ್ತರಪ್ರದೇಶ (09), ಮಹಾರಾಷ್ಟ್ರ (04), ಛತ್ತೀಸ್​ಗಢ (01), ತಮಿಳುನಾಡು (07), ಮಧ್ಯಪ್ರದೇಶ (12), ರಾಜಸ್ಥಾನ (03), ಪಶ್ಚಿಮ ಬಂಗಾಳ (01), ಮಣಿಪುರ (02), ಜಮ್ಮು-ಕಾಶ್ಮೀರ (02), ಅಸ್ಸಾಂ (01), ಅಂಡಮಾನ್​​-ನಿಕೋಬಾರ್ (01), ಮಿಜೋರಾಂ (01), ಉತ್ತರಾಖಂಡ (02) ಲೋಕಸಭಾ ಕ್ಷೇತ್ರಗಳ ಪಟ್ಟಿ ಬಿಡುಗಡೆಯಾಗಿದೆ.

    ಇದನ್ನೂ ಓದಿ: ‘F*** Off Man’; ರಚಿನ್​ ಔಟಾದಾಗ ಬೆರಳು ತೋರಿಸಿದ ವಿರಾಟ್​ ಕೊಹ್ಲಿ, ವಿಡಿಯೋ ವೈರಲ್

    ವಾರಾಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಎದುರು ಉತ್ತರಪ್ರದೇಶ ರಾಜ್ಯ ಕಾಂಗ್ರೆಸ್​ ಘಟಕದ ಅಧ್ಯಕ್ಷ ಅಜಯ್​ ರೈ ಸ್ಪರ್ಧಿಸಲಿದ್ದು, ಮಧ್ಯಪ್ರದೇಶದ ರಾಜ್ ಗಡ್​ನಲ್ಲಿ ದಿಗ್ವಿಜಯ್ ಸಿಂಗ್ ಸ್ಪರ್ಧೆ ಮಾಡಲಿದ್ದಾರೆ. 2018 – 2019ರಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಶಶಿಕಾಂತ್​​ ಸೇಂಥಿಲ್​ ಅವರಿಗೆ ತಮಿಳುನಾಡಿನ ತಿರುವಳ್ಳೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದೆ.

    ಅಸ್ಸಾಂನ ಲಿಖಿಂಪುರ ಕ್ಷೇತ್ರದ ಟಿಕೆಟ್ ಉದಯ್ ಶಂಕರ್ ಹಜರಿಕ ಅವರಿಗೆ ಘೋಷಣೆಯಾದರೆ, ಅಂಡಮಾನ್-ನಿಕೋಬರ್ ಐಸ್​ಲ್ಯಾಂಡ್ ಕ್ಷೇತ್ರದ ಟಿಕೆಟ್ ಕುಲದೀಪ್ ರೈ ಶರ್ಮ, ಬಸ್ತರ್ (ಎಸ್​ಟಿ) ಕ್ಷೇತ್ರದ ಟಿಕೆಟ್ ಕವಾಸಿ ಕಖ್ಮ, ಉದಮ್​ಪುರ ಕ್ಷೇತ್ರದ ಟಿಕೆಟ್ ಲಾಲ್ ಸಿಂಗ್, ಜಮ್ಮು ಕ್ಷೇತ್ರದ ಟಿಕೆಟ್ ರಾಮನ್ ಭಳ್ಳ ಅವರಿಗೆ ನೀಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts